ನೆಚ್ಚಿನ ನಟ ಪುನಿತ್‍ರಾಜಕುಮಾರ್ ರವರಿಗೆ ಶ್ರದ್ಧಾಂಜಲಿ”

ಸಿರಿಗೇರಿ-ಅ 02. ಗ್ರಾಮೀಣ ಭಾಗದಲ್ಲಿ ಚಿತ್ರನಟ, ಸಮಾಜಸೇವಕ, ಸರ್ಕಾರ ಯೋಜನೆಗಳ ಅಂಬಾಸಿಡರ್, ದಾದಾಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ.ರಾಜಕುಮಾರ್ ಪುತ್ರ, ಯುವರತ್ನ, ಬಾಲನಟ ರಾಷ್ಟ್ರಪಶಸ್ತಿ ವಿಜೇತ ಪುನಿತ್‍ರಾಜಕುಮಾರರ ಅಕಾಲಿಕ ನಿಧನಕ್ಕೆ ಅಭಿಮಾನಿಗಳಿಂದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮಗಳು ಇಂದಿಗೂ ಅವಿರತವಾಗಿ ನಡೆಯುತ್ತಿವೆ. ಕಟ್ಟಕಡೆಯ ಹಳ್ಳಿಗಳಲ್ಲಿಯೂ ಪುನಿತ್ ನಗುಮುಖದ ಭಾವಚಿತ್ರಕ್ಕೆ ಹೂಹಾರ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ ಬ್ಯಾನರ್‍ಗಳು, ಭಾವಚಿತ್ರಗಳು ಕಾಣಸಿಗುತ್ತಿವೆ. ಯುವ ಪೀಳಿಗೆಯ ಮನಸ್ಸಿನಲ್ಲಿ ಅಭಿಮಾನದ ಭದ್ರಸ್ಥಾನ ಪಡೆದ ಪುನಿತ್‍ರಾಜಕುಮಾರ್ ಅಭಿಮಾನಿಗಳ ದಂಡು ಗ್ರಾಮಗಳಲ್ಲಿ ಬೀದಿಗೊಂದರಂತೆ ಭಾವಚಿತ್ರದ ಬ್ಯಾನರ್ ಹಾಕಿ, ಮೇಣದಬತ್ತಿ ಬೆಳಗಿ, ಹೂವಿನ ದಳಗಳನ್ನು ಹರಡಿ ಶ್ರದ್ಧಾಂಜಲಿ ಅರ್ಪಿಸಿ ಜೈಕಾರ ಹಾಕುತ್ತಿದ್ದಾರೆ.
ಅ.31 ರಂದು ಸಂಜೆ ಸಿರಿಗೇರಿಯ ಬಸವನಪೇಟೆ ಪ್ರದೇಶದಲ್ಲಿ ಪುನಿತ್ ಅಭಿಮಾನಿ ಬಳಗದ ಯುವಕರು ಪುನಿತ್‍ರಾಜಕುಮಾರರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿ. ಭಾವಚಿತ್ರಕ್ಕೆ ಪೂಜೆ, ಅನ್ನಸಂತರ್ಪಣೆ ಮಾಡಿದರು. ಇದೇವೇಳೆ ಯುವಕರು ದೇಣಿಗೆ ಪೆಟ್ಟಿಗೆಯಲ್ಲಿ ನಗದು ಹಣವನ್ನು ಶೇಕರಿಸಿ ಬಳ್ಳಾರಿಯ ಅನಾಥಾಶ್ರಮವೊಂದಕ್ಕೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಂ.ಅಡಿವೆಯ್ಯಸ್ವಾಮಿ, ಡ್ರೈವರ್‍ಹುಲುಗಪ್ಪ, ಬಕಾಡೆಈರಯ್ಯ, ಎಸ್.ಎಂ.ನಾಗರಾಜಸ್ವಾಮಿ, ಜೆ.ಎರಿಸ್ವಾಮಿ, ವಕೀಲ ರಾಂಬಾಬು, ಎ.ನಾಗರಾಜ, ಬಳ್ಳಾರಿಈರೇಶ, ಕರವೇ ಎನ್.ವಿರುಪಾಕ್ಷಿ, ಅಭಿಮಾನಿ ಬಳಗದ ಶಿಕ್ಷಕ ಪುನಿತ್, ಹುಲೆಪ್ಪ, ಶೇಕರ, ಕೊಮಾರಿ, ಗಾದಿ, ಮಲ್ಲಯ್ಯ, ವೀರೇಶ, ಕೆ.ಶೇಕಪ್ಪ, ತಿಪ್ಪೇಶ, ಸಿದ್ದು, ಪಕ್ಕೀರ, ಮಾಂತೇಶ್, ಯಮುನಪ್ಪ, ಪ್ರದೀಪ್, ಕೆ.ರಮೇಶ, ಇತರರು ಪಾಲ್ಗೊಂಡಿದ್ದರು. ಗ್ರಾಮದ ಹಳೇಸಿನಿಮಾ, ಹುಚ್ಚೇಶ್ವರನಗರ, ದಲಿತಕಾಲೋನಿ, ಅಂಬೆಡ್ಕರ್ ಸರ್ಕಲ್, ಜನತಾಕಾಲೋನಿ, ಆಚಾರಿಕಾಲೋನಿ, ಇತರೆ ನಾನಾ ಕಡೆಗಳಲ್ಲಿ ಹಾಗೂ ಸಿರಿಗೇರಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಅಭಿಮಾನಿ ಯುವಕರು ಶ್ರದ್ಧಾಂಜಲಿ ಅರ್ಪಿಸಿದರು.