ನೆಂಟರಿಂದ ಆನ್ಯಾಯ ಆಯುಕ್ತರ ಕಚೇರಿ ಬಳಿ ಆತ್ಮಹತ್ಯೆ ಯತ್ನ

ಬೆಂಗಳೂರು, ಜು.೨೫- ಸಂಬಂಧಿಕರ ವಂಚನೆ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಗೇಟ್ ನಲ್ಲಿ ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿಜಯಪುರ ಮೂಲದ ಸಿದ್ದರಾಮಗೌಡರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಗಳ ಮದುವೆಯ ವರದಕ್ಷಿಣೆ ವಿಷಯದಲ್ಲಿ ಬೀಗರಿಂದ ವಂಚನೆಯಾಗಿದ್ದು,ಅಮೃತಹಳ್ಳಿ ಪೊಲೀಸರು ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿದ್ದು ನಮಗೆ ನ್ಯಾಯ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕಮಿಷನರ್ ಕಚೇರಿ ಹಿಂಬದಿ ಗೇಟ್ ಬಳಿ ವಿಷ ಸೇವಿಸಿ ನಿತ್ರಾಣವಾಗಿ ಬಿದ್ದಿದ್ದ ಸಿದ್ದರಾಮಗೌಡ ಅವರನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.