ನೃತ್ಯ ಸಂಗೀತದಲ್ಲಿ ಆಸಕ್ತಿವಹಿಸಿ


ಧಾರವಾಡ ಎ.21–ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ಗಣೇಶ ನೃತ್ಯ ಶಾಲೆ, ಧಾರವಾಡ ದ ವತಿಯಿಂದ ನೃತ್ಯ ಸಂಸ್ಥೆಯ 31 ನೇ ನೃತ್ಯ ಸಂಭ್ರಮ ಹಾಗೂ ಭಾರತ ಸ್ವಾತಂತ್ಯ 75ನೇ ವರ್ಷಾಚರಣೆ 2021 ಅಂಗವಾಗಿ ಆಂಗಿಕಾಭಿನಯಗಳ ಮೂಲಕ ವೈಶಿಷ್ಠತೆಯಿಂದ ಅಣ್ಣಾಜಿರಾವ ಶಿರೂರ ರಂಗಮಂದಿರದ ರಂಗ ಮಂಚದಲ್ಲಿ ಇತ್ತಿಚೆಗೆ ಭರತನಾಟ್ಯ ಪ್ರದರ್ಶನ ನೀಡಿದರು.
ಅಧಿಕ್ಷಕ ಅಭಿಯಂತರಾದ ಬಸವರಾಜ ವೈ ಬಂಡಿವಡ್ಡರ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿ ಕಲೆಯನ್ನು ಬೆಳೆಸುವುದು ಅಷ್ಟು ಸುಲಭವಲ್ಲಾ ಕಲೆಯಲ್ಲಿ ನಾವು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ನಾವು ಅದರಲ್ಲಿ ಪರಿಣಿತಿಯನ್ನು ಪಡೆಯಬಹುದು ನೃತ್ಯ ಸಂಗೀತ ಇವು ನಮ್ಮ ಜೀವನದಲ್ಲಿಯ ಒಂದು ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದರು. ಮಕ್ಕಳು ಇಂದು ಮೊಬೈಲ್ ಯುಗದಲ್ಲಿ ಸಾಗುತ್ತಿದ್ದಾರೆ ಮಕ್ಕಳು ಅದನ್ನು ಬಿಟ್ಟು ಇಂಥಂಹ ಸೃಜನಾತ್ಮಕ ಕಲೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಸಂಗೀತ, ನೃತ್ಯ ಇವು ಸುಂದರವಾದ ಕಲೆ ಇದರಲ್ಲಿ ಪಾಲಕರು ಮೊದಲು ಆಸಕ್ತಿವಹಿಸಬೇಕಾದದು ಅವಶ್ಯಕತೆಯಿದೆ ಪಾಲಕರು ತಮ್ಮ ಎಡೆಬಿಡದ ಕಾರ್ಯಕ್ರಮಗಳಲ್ಲಿ ಮಕ್ಕಳ ಕಡೆಗೆ ಗಮನಹರಿಸುವುದನ್ನು ಕಡಿಮೆ ಮಾಡುತ್ತಿದ್ದದ್ದು ಕಂಡು ಬರುತ್ತಿದೆ, ಇದರಿಂದ ನಮ್ಮ ಮಕ್ಕಳು ಕೈಗೆ ಸಿಗುತ್ತಿಲ್ಲಾ ಅದಕ್ಕೆ ಪಾಲಕರಾದ ನಾವುಗಳೆ ಕಾರಣ ಎಂದು ನುಡಿದರು ಇಂದು ನಮ್ಮ ಮಕ್ಕಳನ್ನು ನಾವುಗಳೆ ಬೇರೆ ದಾರಿಗೆ ಒಗ್ಗುವಂತೆ ಮಾಡುತ್ತಿದ್ದೇವೆ ಪಾಲಕರಾದ ನಾವುಗಳು ಮೊದಲು ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ತಿದ್ದಿಕೊಳ್ಳಬೇಕಾಗಿದೆ ಮೊದಲು ನಮ್ಮ ದೃಶ್ಯ ಮಾಧ್ಯಮ ಹಾಗೂ ಮೊಬೈಲ್‍ಬಳಕೆಯಿಂದಾಗುವ ತೊಂದರೆಗಳ ಬಗ್ಗೆ ಸೂಕ್ತ ಸಲಹೆಂiÀiನ್ನು ಪಾಲಕರಿಗೆ ಎಂದರು.
ನಂತರ ವಿದೂಷಿ ರೋಹಿಣಿ ಇಮಾರತಿರವರ ನಿರ್ದೇಶನದಲ್ಲಿ ಸುಮಾರು 60 ಕ್ಕೂ ಹೆಚ್ಚು ಭರತನಾಟ್ಯ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಜಾನಪದ ಮತ್ತು ದೇಶಭಕ್ತಿ ನೃತ್ಯ ಪ್ರದರ್ಶನಗಳು ಗಮನಸೆಳೆದರೆ ಇದಕ್ಕೆ ಹಿನ್ನಲೆಯಲ್ಲಿ ನಟುವಾಂಗ ವಿದೂಷಿ ರೋಹಿಣಿ ಇಮಾರತಿ, ಮೃದಂಗ ಮಾಸ್ಟರ ಪಂಚಮ ಉಪಾಧ್ಯಾಯ, ಪ್ರಸಾಧನ ಸ್ನೇಹಾ ಸಂತೋಷ ಮಹಾಲೆ, ಹಾಡುಗಾರಿಕೆ ವಿದ್ಯಾ ತಡಕೊಡ ಕೊಳಲು ವೈಭವ ಭಟ್ ವಾಯೊಲಿನ್ ಪಂಡಿತ ಶಂಕರ ಕಬಾಡಿ ಸಹಕರಿಸಿದರು. ವಿದ್ಯಾ ಶಿರಹಟ್ಟಿ ಕಾಯಕ್ರಮ ನಿರೂಪಿಸಿದರು. ರಾಘವೇಂದ್ರ ಇಮಾರತಿ, ಶಶಾಂಕ ಇಮಾರತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.