ನೂಲಿ ಚಂದಯ ಜಯಂತಿ ನೂಲ ಹುಣ್ಣಿಮೆ ದಿನದ ಆಚರಿಸಲು ಮನವಿ


ಸಂಜೆವಾಣಿ ವಾರ್ತೆ
ಕುಕನೂರು , ಆ.೪- ತಾಲೂಕು ಕೊರಮ ಕೊರಚ ಸಂಘದ ವತಿಯಿಂದ ಶಿವಶರಣ ನೂಲಿ ಚಂದಯ್ಯ ನವರ ಜಯಂತಿಯನ್ನು ನೂಲಿ ಹುಣ್ಣಿಮೆ ದಿನಾಂಕದಂದು ಸರ್ಕಾರದ ನಿರ್ದೇಶನ ಅನ್ವಯ ಅದ್ದೂರಿ ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ನೇತೃತ್ವ ವಹಿಸಿದ್ದ ಜಿ.ಪಂ. ಮಾಜಿ ಅಧ್ಯಕ್ಷರಾದ ರಾಮಣ್ಣ ಬಜಂತ್ರಿ ರವರು ಮಾತನಾಡಿ, ಚಂದಯ್ಯನವರು ಸರ್ವ ಜನಾಂಗಕ್ಕೆ ಉತ್ತಮ ಸಂದೇಶ ನೀಡಿದಂತ ಶರಣರು ಆಗಿದ್ದಾರೆ. ಆಗಿದ್ದಾರೆ ಅವರ ತತ್ವ ಆಚಾರ ವಿಚಾರಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲು ಪ್ರೇರಣೆಯಾಗಲು ಸರ್ಕಾರದಲ್ಲಿ ಹುಣ್ಣಿಮೆಯ ದಿನದಂದು ಆಚರಿಸಿ ಅದ್ದೂರಿ  ಆಚರಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಅಲ್ಲದೇ ಜಯಂತಿ ಕುರಿತಂತೆ ಶೀಘ್ರದಲ್ಲಿ ಪೂರ್ವಭಾವಿ ಸಭೆ ಕರೆದು ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅದು ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊರಮ  ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಸುಭಾಷ್ ಬಜಂತ್ರಿ, ಮುಖಂಡರಾದ ಬಸವರಾಜ ಕಿತ್ತೂರ್, ಕುಬೇರಪ್ಪ ಬಿಸರಹಳ್ಳಿ, ಭಜಂತ್ರಿ ಹಲಗೇರಿ ಬಾಳಪ್ಪ ಭಜಂತ್ರಿ, ಮಂಜು ಭಜಂತ್ರಿ, ಉಮೇಶ್ ಭಜಂತ್ರಿ, ಲೋಕೇಶ್ ಭಜಂತ್ರಿ ,ರವಿ ಭಜಂತ್ರಿ ಕಾಂಗ್ರೆಸ್ ಮುಖಂಡರು,  ನಾಗರಾಜ್ ಭಜಂತ್ರಿ, ಕನಕರಾಯ ಭಜಂತ್ರಿ, ಮುರಾರಿ ಬಜಂತ್ರಿ,, ಮಾರುತಿ ಭಜಂ ತ್ರಿ ಮೊದಲಾದವರು ಹಾಜರಿದ್ದರು.

Attachments area