ನೂಲಿ ಚಂದಯ್ಯನವರ ಜಯಂತೋತ್ಸವ


ಸಂಜೆವಾಣಿ ವಾರ್ತೆ
ಸಂಡೂರು : ಸೆ:2:  ಕಾಯಕ ಮತ್ತು ದಾಸೋಹ ಪರಿಕಲ್ಪನೆಗೆ ಶರಣರು ಬದ್ದರಾಗಿದ್ದು ಶಿವನಿಗೆ ಪರೀಕ್ಷೆಯನ್ನು ಒಡ್ಡಿ ಕಾಯಕದ ಮಹತ್ವನವನು ಶಿವನಿಗೆ ಅರುಹಿದವರು ನೂಲಿ ಚಂದಯ್ಯನವರು, ನೂಲಿನ ಹಗ್ಗದ ಕಾಯಕವನ್ನಾಗಿ ಮಾಡಿಕೊಂಡು ವಚನ ಸಾಹಿತ್ಯದ ಮೂಲಕ ಅಂಕುಡೊಂಕುಗಳನ್ನು ತಿದ್ದಿ ಬಸವಣ್ಣನವರಂತೆ ಕಾಯಕಕ್ಕೆ ಮಹತ್ವ ನೀಡಿದವರು ನೂಲಿ ಚಂದಯ್ಯನವರು, ಇಡೀ ಜಗತ್ತಿಗೆ ಕಾಯಕದ ಮಹತ್ವವನ್ನು ತಿಳಿಸಿ ಸೋಮಾರಿಗಳಾಗದೇ ಪ್ರತಿಯೋರ್ವರೂ ದುಡಿದವರ ಜೊತೆಗೆ ದಾಸೋಹಕ್ಕೆ ಮಹತ್ವ ಕೊಡಲು ಭಕ್ತರಿಗೆ ಸಂದೇಶವನ್ನು ಸಾರಿದವರು ನೂಲಿ ಚಂದಯ್ಯನವರು ಕಾಯಕ್ಕಕ್ಕೆ ಶಿವನೇ ನಡಗುವ ಪರಿಸ್ಥಿತಿ ಬಂದಿತ್ತು. ಶರಣ ನೂಲಿ ಚಂದಯ್ಯನವರ ಕಾರ್ಯವನ್ನು ಶಿವನೇ ಮೆಚ್ಚಿದನೆಂದರೆ ನೂಲಿ ಚಂದಯ್ಯನವರಿಗೆ ಕಾಯಕದ ಮಹತ್ವ ಎಷ್ಠಿತ್ತು ಎನ್ನುವುದನ್ನು ಅಲೋಚಿಸಬೇಕಾಗಿದೆ. ಎಂದು ಸಂಡೂರಿನ ತಹಶೀಲ್ದಾರರು, ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರು ಆದ ಅನಿಲ್ ಕುಮಾರರವರು ಮನದಾಳದ ಮಾತುಗಳನ್ನಾಡಿದರು.
ಅವರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಂಡೂರು ತಾಲೂಕು ಕೊರಮ, ಕೊರವ ಸಮುದಯಾದ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನೂಲಿಚಂದಯ್ಯನವರ ಜಯಂತಿಯ ಸಂದರ್ಭದಲ್ಲಿ ಶರಣ ನೂಲಿ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದನಂತರ ಮಾಥನಾಡಿದರು. ಅವರು ಮುಂದುವರೆದು ಶರಣರ 916ನೇ ಜಯಂತಿಯನ್ನು ನಾವು ಇಂದು ಆಚರಿಸುತ್ತಿದ್ದೇವೆ, ನಮ್ಮ ಜಯಂತಿಗೂ ಶರಣರ ಜಯಂತಿಗಳಿಗೂ ಅಜಗಜಾಂತರ ವ್ಯತ್ಯಾಸವಿದ್ದು ನಮ್ಮ ಜಯಂತಿಗಳು ಉಸಿರು ಇರುವ ತನಕ, ಆದರೆ ಶರಣರ ಜಯಂತಿ ಸೂರ್ಯ ಚಂದ್ರ ಇರುವವರೆಗೂ ಶಾಶ್ವತ, ಕೊರವ, ಕೊರಚ ಕುಳುವ ಸಂಘದ ಧ್ರುವತಾರೆ ನಕ್ಷತ್ರ ನೂಲಿ ಚಂದಯ್ಯನವರು 12ನೇ ಶತಮಾನದ ಶಿವಶರಣ ಬಸವಣ್ಣನವರೇ ನೂಲಿಚಂದಯ್ಯನವರನ್ನು ಮೆಚ್ಚಿಕೊಂಡರು ಅಂದರೆ ನಮ್ಮಂತಹ ಹವರ ಪಾಡೇನು? ಎಂದು ಪ್ರಶ್ನಿಸಿದರು. ಪ್ರತಿಯೋರ್ವರೂ ನೂಲಿ ಚಂದಯ್ಯನವರ ಆದರ್ಶ ತತ್ವ ಪಾಲಿಸಿ ಬಸವ ತತ್ವಕ್ಕೆ ಬದ್ಧರಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು. ಚನ್ನಬಸವಣ್ಣ ಪ್ರಿಯ ಚಂದ್ರೇಶ್ವರ ಲಿಮಗ ಎನ್ನುವ ಅಂಕಿತದಿಮದ ಸಾಹಿತ್ಯವನ್ನು ಬರೆದವರು ಶರಣ ನೂಲಿ ಚಂದಯ್ಯನವರು.
ಈ ಸಂದರ್ಭದಲ್ಲಿ ಪರ್ವಿನ್ ಭಾನು, ಕೆ.ಶಿವಕುಮಋ. ಕೆ.ಎಂ. ಶಿವಕುಮಾರ, ಕಿರಣ ಕುಮಾರ್, ಭೋವಿ ಸಿದ್ದೇಶ್, ಸಿದ್ಧಲಿಂಗಸ್ವಾಮಿ, ಧನುಂಜಯ, ನಾಯಡು ಅಮರೇಶ್ ಅಲ್ಲದೆ ಸಮಾಜದ ಮುಕಂಡರು ಉಪಸ್ಥಿತರಿದ್ದರು. One attachment • Scanned by GmailReplyForward