ನೂಲಿ ಚಂದಯ್ಯನವರ ಅದ್ದೂರಿ ಮೆರವಣಿಗೆ- ಸುಮಂಗಳಿಯರ ಅರತಿ


ಸಂಜೆವಾಣಿ ವಾರ್ತೆ
ಸಂಡೂರು : ಸೆ:1: ನೂರಾಒಂದು ಮಹಿಳೆಯರು ವಿಶೇಷ ಅರತಿ ಮೆರವಣಿಗೆಯಲ್ಲಿ ಭಾಗಿಯಾಗಿ ನೂಲಿ ಚಂದಯ್ಯನವರ ಭಾವಚಿತ್ರವನ್ನು ಹಾಗೂ ಶ್ರೀ ವೃಷಬೇಂದ್ರ ನೂಲಿಚಂದೇಶ್ವರ ಶ್ರೀಗಳ ಅದ್ದೂರಿ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೆರವೇರಿಸಿದರು.
ಮೆರವಣಿಗೆಯು ಪಟ್ಟಣದ ಸುಭಾಷ್ ನಗರದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು, ಈ ಸಂದರ್ಭದಲ್ಲಿ ಅತಿ ಹೆಚ್ಚು ಭಕ್ತರು ವಿಶೇಷವಾಗಿ ಭಜನೆ, ಅರತಿ, ಅಲ್ಲದೆ ಡಿ.ಜಿ. ಹಾಡಿಗೆ ಹೆಜ್ಜೆ ಹಾಕುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಪಟ್ಟಣದ ವಿಜಯವೃತ್ತದಲ್ಲಿ ವಿಶೇಷವಾಗಿ 101 ಪಟಾಕಿ ಸಿಡಿಸುವ ಮೂಲಕ ಸಂತಸ ವ್ಯಕ್ತಪಡಿಸಿದರೆ, ನೂಲಿ ಚಂದಯ್ಯನ 916 ನೇ ಜಯಂತಿಯ ಅಂಗವಾಗಿ ಅ ಪ್ರಮಾಣದ ಪಟಾಕಿಗಳನ್ನು ಸಹ ವಾಲ್ಮೀಕಿ ವೃತ್ತದಲ್ಲಿ ನೆರವೇರಿಸಿದರು.ಈ ಸಂದರ್ಭದಲ್ಲಿ ಹೆಚ್.ಕುಮಾರಸ್ವಾಮಿ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.