
ಅಥಣಿ :ಸೆ.16: 12 ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲಿನ ಕಾಯಕಯೋಗಿ ಶಿವಶರಣ ನೂಲಿ ಚಂದಯ್ಯ ಅವರು ನಾಡು ಕಂಡ ಶ್ರೇಷ್ಠ ಕಾಯಕಯೋಗಿ ನುಡಿದಂತೆ ನಡೆದು ಕಾಯಕದಿಂದಲೇ ದೇವರನ್ನು ಕಂಡ ಈ ಮಹಾನ್ ಶಿವಶರಣ ನೂಲಿ ಚಂದಯ್ಯನವರ ಜೀವನ, ಬದುಕು ಹಾಗೂ ತತ್ವಾದರ್ಶಗಳು ನಮಗೆ ಆದರ್ಶವಾಗಬೇಕು. ಎಂದು ಕಾಂಗ್ರೇಸ್ ಯುವ ಮುಖಂಡ ಚಿದಾನಂದ ಸವದಿ ಅವರು ಹೇಳಿದರು.
ಅವರು ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಕೊರಮ್ (ಭಜಂತ್ರಿ) ಸಮಾಜದ ವತಿಯಿಂದ ಹಮ್ಮಿಕೊಂಡ ಕಾಯಕಯೋಗಿ ಶಿವಶರಣ ನೂಲಿ ಚಂದಯ್ಯನವರ 916 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮೂಲತಃ ಎಲ್ಲ ಪ್ರಕಾರದ ಕಾರ್ಯಕ್ರಮಗಳಲ್ಲಿ ಸಂಗೀತ ವಾದ್ಯಗಳನ್ನು ನುಡಿಸುವ ಸಮಾಜ ಕೊರಮ್(ಭಜಂತ್ರಿ) ಸಮಾಜ, ಈ ಸಮಾಜಕ್ಕೆ ಸರಕಾರದ ವತಿಯಿಂದ ಅಥಣಿಯಲ್ಲಿ ನಿವೇಶನ ಕೊಡಿಸಿ ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಸಮಾಜವನ್ನ ಮೇಲೆತ್ತುವ ಕೆಲಸ ಮಾಡುತ್ತೆವೆ ಎಂದರು.
ಅನಂತರ ಕಾಂಗ್ರೆಸ್ ಹಿರಿಯ ಮುಖಂಡ ಗಜಾನನ ಮಂಗಸೂಳಿ ಅವರು ಮಾತನಾಡಿ ತುಳಿತಕ್ಕೆ ಒಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದ ಬಸವಣ್ಣನವರ ಸಮಕಾಲಿನ ಕಾಯಕಯೋಗಿ ಶಿವಶರಣ ನೂಲಿ ಚಂದಯ್ಯನವರ ಜೀವನ ಚರಿತ್ರೆ ಶ್ರೇಷ್ಠವಾದದ್ದು, ಇಂದಿಗೂ ಕೂಡ ಅವರ ಆದರ್ಶ, ತತ್ವಗಳನ್ನು ನಾವು ಅನುಸರಿಸುತ್ತಿರುವುದು ಶ್ಲಾಘನೀಯ ಜಯಂತಿಯನ್ನು ಈ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಮಾಡದೆ ಅವರ ಆದರ್ಶಗಳನ್ನು ಸಮಾಜದ ಎಲ್ಲ ಬಾಂಧವರು ಮೈಗೂಡಿಸಿಕೊಳ್ಳಬೇಕು, ಈಗೀನ ಸಂದರ್ಭದಲ್ಲಿ ನಾವೆಲ್ಲ ಮಾಡಿಕೊಂಡಿರುವ ಜಾತೀಯ ವ್ಯವಸ್ಥೆಯನ್ನು ಧಿಕ್ಕರಿಸಿ ಸಮ ಸಮಾಜಕ್ಕಾಗಿ ಮುನ್ನುಗ್ಗಬೇಕು ಎಂದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಜಿ ಅವರು ಎಲ್ಲ ಕಾರ್ಯಕ್ರಮಗಳಲ್ಲಿ ಮಂಗಳ ವಾದ್ಯ ನುಡಿಸಿ ಸಭೆಗೆ ಅರ್ಥವನ್ನು ತಂದು ಕೊಡುವುದೇ ಭಜಂತ್ರಿ ಸಮಾಜ, ಇಂದಿನ ಲಿಂಗಾಯತರು 12 ನೇ ಶತಮಾನದಲ್ಲಿ ಶೂದ್ರರಾಗಿದ್ದರು, ಪ್ರಜಾಪ್ರಭುತ್ವದ ಈ ವ್ಯವಸ್ಥೆಯಲ್ಲಿ ಇಂದಿಗೂ ಜಿಡ್ಡುಗಟ್ಟಿದ ಜಾತಿ ವ್ಯವಸ್ಥೆ ದೂರವಾಗಿಲ್ಲ, ನಾವು ನಮ್ಮ ಸಂಸ್ಕಾರ, ನಮ್ಮ ಆಚಾರ ವಿವಾರಗಳಿಂದ ಶ್ರೇಷ್ಠವಾಗಬೇಕು. ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಮುದಾಯ ಮುನ್ನೆಲೆಗೆ ಬರಬೇಕಿದೆ.ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು. ಲಿಂಗಾಯತ ಎನ್ನುವುದು ಜಾತಿಯಲ್ಲ ಒಂದು ತತ್ವ, ನೂಲಿ ಚಂದಯ್ಯನವರು ಕೊರಮ್ ಸಮಾಜದ ಶ್ರೇಷ್ಠ ಕಾಯಕಯೋಗಿ ಶರಣರು ಎಂದು ಹೇಳಿದರು.
ಅನಂತರ ಸಿದ್ದಕಬೀರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು. ಟಿ ಎಸ್ ವಂಟಗೂಡಿ ಉಪನ್ಯಾಸ ನೀಡಿದರು. ಮುಖಂಡ ಎಸ್ ಕೆ ಬುಟಾಳಿ ಅವರು ಮಾತನಾಡಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ. ಶಿವಾನಂದ ಗುಡ್ಡಾಪೂರ, ಮಹಾಂತೇಶ ಠಕ್ಕಣ್ಣವರ, ಸಂಜೀವ ಕಾಂಬಳೆ. ರಾಮಜೀ ಭಜಂತ್ರಿ, ಹಣಮಂತ ಭಜಂತ್ರಿ, ಸಿದರಾಯ ಭಜಂತ್ರಿ, ಕುಮಾರ ಭಜಂತ್ರಿ, , ಮುರಗೆಪ್ಪಾ ಭಜಂತ್ರಿ, ಶಶಿಕಾಂತ ಭಜಂತ್ರಿ, ವಸಂತ ಭಜಂತ್ರಿ, ಶಿವಶಂಕರ ಭಜಂತ್ರಿ ಸೇರಿಂದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅಣ್ಣಪ್ಪ ಭಜಂತ್ರಿ, ಸ್ವಾಗತಿಸಿ, ನಿರೂಪಿಸಿ. ವಂದಿಸಿದರು.