ನೂರು ಹಾಸಿಗೆ ಆಸ್ಪತ್ರೆಗೆ ಸಚಿವರ ಧಿಡೀರ್ ಭೇಟಿ ಆಂಬ್ಯುಲೆನ್ಸ್ ನಿರ್ವಹಿಸದ ಚಾಲಕನಿಗೆ ತರಾಟೆ

ಹೊಸಪೇಟೆಜ 13 : ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ನಿನ್ನೆ ಸಂಜೆ ನಗರದ ನೂರು ಆಸ್ಪತ್ರೆಗೆ ಕಟ್ಟಡದ ವೀಕ್ಷಣೆ ಹಾಗೂ ನೂರು ಹಾಸಿಗೆಯನ್ನು 250 ಹಾಸಿಗೆ ಆಸ್ಪತ್ರೆಯಾಗಿಸುವ ವಿಷಯವಾಗಿ ಭೇಟಿ ನೀಡಿದ್ದ ಆನಂದ್ ಸಿಂಗ್ ಅವರು ಆಸ್ಪತ್ರೆ ಸ್ವಚ್ಛತೆಯ ಸ್ಥಿತಿ ಕಂಡು ಸಿಡಿಮಿಡಿಗೊಂಡರು.
ಕತ್ತಲ ವಾತಾವರಣದಲ್ಲಿ ಸೊಳ್ಳೆಗಳ ಹಾವಳಿಯನ್ನು ಸ್ವತಃ ಅನುಭವಿಸಿದ ಸಚಿವರು ಸೊಳ್ಳೆಗಳ ನಿಯಂತ್ರಣಕ್ಕಾಗಿ ಸೂಕ್ತ ಕ್ರಮಕೈಗೊಳ್ಳಲು ಆಜ್ಞೆ ಮಾಡಿದರು. ಸರಿಯಾಗಿ ನಿರ್ವಹಣೆ ಇಲ್ಲದೇ ಆಸ್ಪತ್ರೆಯ ಹಿಂಬದಿಯಲ್ಲಿ ನಿಂತಿದ್ದ 5 ಆಂಬ್ಯುಲೆನ್ಸ್ ಕಂಡ ಸಚಿವರು ಚಾಲಕನನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆ ಸ್ವಚ್ಛತಾ ನಿರ್ವಹಣೆಯನ್ನು ಉತ್ತಮಗೊಳಿಸಿ, ಆವರಣದಲ್ಲಿನ ನೀರಿನ ತೊಟ್ಟಿ ತೆಗೆಸಲು ಈ ಹಿಂದೆಯೇ ಸೂಚಿಸಿದ್ದರೂ ಇನ್ನೂ ಮಾಡದ ಕಾರಣ ಅತಿ ಶೀಘ್ರದಲ್ಲಿ ನೀರಿನ ತೊಟ್ಟಿಯನ್ನು ತೆರವುಗೊಳಿಸಲು ಸೂಚಿಸಿದರು.
ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕುರಿತಂತೆ ವೈದ್ಯಾಧಿಕಾರಿ ಹಾಗೂ ಇಂಜಿನೀಯರ್ ಗಳೊಂದಿಗೆ ಚರ್ಚಿಸಿದರು.
ಒಳಾಂಗಣದಲ್ಲಿನ ಪ್ರತಿಯೊಂದು ವಿಭಾಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಜಿಲ್ಲಾ ವೈದ್ಯಾಧಿಕಾರಿ ಡಾ.ಜನಾರ್ಧನ್, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಸಲೀಂ, ಡಾ.ಭಾಸ್ಕರ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.