ನೂರು ಸ್ಲಂ ನಿವಾಸಿಗಳಿಗೆ ಮನೆ-ಹಕ್ಕು ಪತ್ರ ವಿತರಣೆ-ಶಾಸಕ

ವಾರ್ಡ್ ೧೭: ಒಂದು ಕೋಟಿ ರೂ ಕಾಮಗಾರಿಗೆ ಭೂಮಿ ಪೂಜೆ
ರಾಯಚೂರು ನ ೧೫:-ನಗರದ ವಾರ್ಡ್ ೧೭ ರಲ್ಲಿ ಒಳ ಚರಂಡಿ ಯೋಜನೆ ಅನುಷ್ಠಾನಕ್ಕೆ ತೀವ್ರ ಬೇಡಿಕೆ ಹಿನ್ನೆಲೆಯಲ್ಲಿ ಒಂದು ಕೋಟಿ ರೂ ಮತ್ತು ಮೂರು ಸಮುದಾಯ ಭವನ ನಿರ್ಮಾಣಕ್ಕೆ ಒಟ್ಟು ಸುಮಾರ ೪೫ ಲಕ್ಷ ರೂ ನೀಡಲಾಗಿದೆ ಎಂದು ಶಾಸಕ ಡಾ. ಶಿವರಾಜ್ ಪಾಟೀಲ್ ಅವರು ಹೇಳಿದರು.
ಅವರು ಇಂದು ನಗರದ ವಾರ್ಡ್ ೧೭ರಲ್ಲಿ ಅಪೆಂಡಿಕ್ಸ್ ಸಿ ಯೋಜನೆಯಡಿ ಒಂದು ಕೋಟಿ ಅನುದಾನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಾಮ ನಗರ ಬಡಾವವಣೆಯಲ್ಲಿ ಒಳ ಚರಂಡಿ ಕಾಮಗಾರಿಗೆ ತೀವ್ರ ಭೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಒಂದು ಕೋಟಿ ರೂ ಯೋಜನೆ ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ.ಸ್ಲಂ ನಿವಾಸಿಗಳಿಗಾಗಿ ನೂರು ಮನೆಗಳ ನಿರ್ಮಾನ ಕಾಮಗಾರಿ ನಡೆಯುತ್ತಿದೆ. ನೂರು ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತದೆ. ರಾಮನದೊಡ್ಡಿ ಮತ್ತು ರಾಯನಗರಗಳಲ್ಲಿ ಹಕ್ಕುಪತ್ರ ಕೊಡುವ ಕೆಲಸ ಮಾಡಲಾಗಿದೆ.
ಸ್ಥಳೀಯವಾಗಿರುವ ಅಂಜಿನಯ್ಯ ದೇವಸ್ಥಾನ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ೧೫ ಲಕ್ಷ ರೂ ನೀಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ, ಛಾವಣಿವರಿಗೆ ಕಾಮಗಾರಿ ನಿರ್ಮಾಣಗೊಂಡಿದೆ.ರಾಮನದೊಡ್ಡಿ ಸಮುದಾಯ ಭವನಕ್ಕೆ ೧೫ ಲಕ್ಷ ರೂ ಬೇಟಿ ಇದೆ. ಅದು ನೀಡಲಾಗುತ್ತದೆ. ಕೆಳ ಭಾಗದಲ್ಲಿ ಮತ್ತೊಂದು ಸಮುದಾಯ ಭವನ ನೀರ್ಮಾಣ ಕಾಮಗಾರಿಗೂ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕರಪ್ಪ, ನಗರಸಭೆ ಸದಸ್ಯ ಶಶಿರಾಜ್,ಬಿ.ಗೋವಿಂದ, ರವೀಂದ್ರ ಜಾಲ್ದಾರ್ ಯು ನರಸರೆಡ್ಡಿ ಸೇರಿದಂತೆ ಅನೇಕರಿದ್ದರು.