ನೂರಾರು ಯುವಕರು ಬಿಜೆಪಿ ಸೇರ್ಪಡೆ

ಕೋಲಾರ.ಏ೨೪:ನಗರದ ಅಂಬೇಡ್ಕರ್ ನಗರದ ನಿವಾಸಿಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ತೊರೆದು ನೂರಕ್ಕೂ ಹೆಚ್ಚು ಯುವಕರು ವರ್ತೂರು ಪ್ರಕಾಶ್ ರವರ ನಿವಾಸದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನಂತರ ಮಾತನಾಡಿದ ಅವರು ಘಟ್ ಬಂಧನ್ ನಾಯಕರಿಂದ ಕಳೆದ ಮೂರು ನಾಲ್ಕು ತಿಂಗಳಿನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲು ತಯಾರಿ ನಡೆಸಿದರು ಕಾಂಗ್ರೆಸ್ ಪಕ್ಷದವರು ನಡೆಸಿದ ಸರ್ವೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತದೆ ಎಂದು ತಿಳಿದಾಗ ಅವರು ಮತ್ತೆ ವರುಣ ಕಡೆ ಮುಖ ಮಾಡಿದರು ಎಂದರು.
ನಮ್ಮ ಕಾರ್ಯಕರ್ತರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹಣದ ಆಸೆ ತೋರಿಸಿದರೆ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಜಗ್ಗುವುದಿಲ್ಲ ನನ್ನ ಗೆಲುವಿಗೆ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ ದೇಶದಲ್ಲಿ ನರೇಂದ್ರ ಮೋದಿಜಿ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿಜಿರವರ ಜನಪರ ಯೋಜನಗಳು ನಮಗೆ ಶ್ರೀರಕ್ಷೆಯಾಗುತ್ತದೆ ಈ ಬಾರಿ ನಮ್ಮ ಕೋಲಾರದಲ್ಲಿ ೫೦,೦೦೦ ಮತಗಳ ಅಂತರದಿಂದ ಗೆಲ್ಲುವುದು ನಿಜ ಕೋಲಾರ ನಗರವನ್ನು ದೇಶದಲ್ಲಿ ನಂಬರ್ ಒನ್ ನಗರವನ್ನಾಗಿ ಮಾರ್ಪಾಡು ಮಾಡುವುದಕ್ಕೆ ಶಪಥ ಮಾಡಿದ್ದೇನೆ ಎಂದರು.
ಬೆಗ್ಲಿ ಸೂರ್ಯ ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅರುಣ್ ಪ್ರಸಾದ್, ಬಂಕ್ ಮಂಜುನಾಥ್, ಜೆಡಿಎಸ್ ಕಾಂಗ್ರೆಸ್ ತೊರದ ಮುಖಂಡ ರಾದ ಮುನಿರಾಜು, ಗಜೇಂದ್ರ, ಮುನಿ ಯಪ್ಪ, ಪೃಥ್ವಿ, ಸತೀಶ್, ದರ್ಶನ್, ಪ್ರಶಾಂತ್, ರಾಜು, ತರುಣ್, ರೆಡ್ಡಿ, ನಿಖಿಲ್, ಗಂಗಣ್ಣ, ರೆಡ್ಡಿ, ನಿಖಿಲ್, ಮುಖಂಡರಾದ ಬಾಕ್ಸರ್ ನಾಗೇಂದ್ರ, ಸಂದೀಪ್, ನಟರಾಜ್, ಕುಮಾರ್, ಅರುಣ್ ಇದ್ದರು.