ನೂರಾರು ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ರಾಯಚೂರು,ಏ.೦೯-
ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ಅವರ ಸರಳತೆಯ ನಾಯಕತ್ವ ಮೆಚ್ಚಿ ವಾರ್ಡ್ ನಂ ೩೦-೩೧ ರ ಬಡವಾವಣೆಯ ನೂರಾರು ಯುವಕರು ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು, ನಗರ ಅದ್ಯಕ್ಷ ಬಸವರಾಜ ರಡ್ಡಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ನಿಜಲಿಂಗಪ್ಪ ಕಾಲೋನಿಯ ಎನ್ ಎಸ್ ಬೋಸರಾಜು ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು.
ಪಕ್ಷ ಸೇರ್ಪಡೆಯಾದ ಅನೇಕರಿಗೆ ಎಐಸಿಸಿ ಕಾರ್ಯದರ್ಶಿಗಳಾ ದ ಎನ್ ಎಸ್ ಬೋಸರಾಜು, ಬಸವರಾಜ ರಡ್ಡಿ ಅವರು ಅಭೂತಪೂರ್ವ ವಾಗಿ ಬರಮಾಡಿಕೊಂಡರು.
ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತ ಕ್ಕೆ ಬೇಸತ್ತು ಹಾಗೂ ಸ್ಥಳಿಯ ಶಾಸಕರ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ, ಶಾಲಂ, ಗೋವಿಂದ ರಡ್ಡಿ, ಕರಬದೊಡ್ಡಿ ಆಂಜನೇಯ್ಯ, ಅಶೋಕ, ಮೊಹ್ಮದ್, ಶಿವರಾಜ್, ಪ್ರಮೋದ್ , ವಿಜಯ ಕುಮಾರ್, ಪ್ರಜ್ವಲ್ ಸೇರಿದಂತೆ ಅನೇಕರು ಇದ್ದರು.