
ಸಿರವಾರ,ಮೇ.೦೧- ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಪ್ರಸ್ತುತ ಕೆಪಿಸಿಸಿ ಕಾರ್ಯದಶಿಯಾಗಿರುವ ಕೆ.ಅಸ್ಲಾಂ ಪಾಷಾ ಅವರು ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಸಿರವಾರ ಪಟ್ಟಣದ ಅವರ ಬೆಂಬಲಿಗರು ಹಾಗೂ ಮಾಜಿ ಪ.ಪಂ ಸದಸ್ಯ ಇರ್ಫಾನ ಬಡೇಘರ್ ಅವರು ನೂರಾರು ಯುವಕರೊಂದಿಗೆ ಕಾಂಗ್ರೇಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನಂತರ ಮಾತನಾಡಿದ ಮಾಜಿ ಪ.ಪಂ ಸದಸ್ಯ ಇರ್ಫಾನ ಬಢೇಘರ ಅವರು ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ಮತ್ತು ಸಿರವಾರ ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಆಗದ ಬಸ್ ನಿಲ್ದಾಣ ಹಾಗೂ ಸ್ಟ್ರೀಟ್ ಲೈಟ್ ಹಾಗೂ ಪಟ್ಟದಲದಲಿ ಮಾಡಿವ ಅಭಿವೃದ್ಧಿ ಕಾರ್ಯಗಳು ಹಾಗೂ ಸದನದಲ್ಲಿ ನಮ್ಮ ಯುವಕರಿಗೆ ಅನುಕೂಲವಾಗುವ ಕ್ರೀಡಾಂಗಣ ಮತ್ತು ನೀರಾವರಿ ಸಮಸ್ಯೆಗಳ ಕುರಿತು ದ್ವನಿ ಎತ್ತಿರುವ ಅವರ ಕಾರ್ಯಕ್ಕೆ ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಮತ್ತು ನನ್ನ ರಾಜಕೀಯ ಗುರುಗಳಂತೆ ಇದ್ದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಕೆ.ಅಸ್ಲಾಂ ಪಾಷ ಅವರಿಗೆ ರಾಜಕೀಯ ದುರುದ್ಧೇಶದಿಂದ ಟಿಕೆಟ್ ಕೈ ತಪ್ಪುವಂತೆ ಮಾಡಿದ್ದು ಅವರನ್ನು ಈ ಬಾರಿ ಚುವಾಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ಹಾಗೂ ಜೆಡಿಎಸ್ ಅಭ್ಯರ್ಥಿಯಾದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಗೆಲ್ಲಿಸುವುದೇ ನಮ್ಮ ಮುಂದಿನ ಗುರಿಯಾಗಿದೆ ಆದ್ದರಿಂದ ನಾವು ಯುವಕರೆಲ್ಲ ಸೇರಿಕೊಂಡು ಈ ಬಾರಿ ಮತ್ತೊಮ್ಮೆ ಜೆಡಿಎಸ್ ಪಕ್ಷವನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.
ನಂತರ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ಕ್ಷೇತ್ರದಲ್ಲಿ ಬೆರೆ ಕಡೆಯಿಂದ ಬಂದು ಚುನಾವಣೆಗೆ ನಿಲ್ಲುತ್ತಿದ್ದಾರೆ ಅವರನ್ನು ಮತ್ತೆ ಅವರ ಮನೆಗೆ ಹಿಂತಿರುಗಿಸುವ ಕೆಲಸ ಎಲ್ಲಾ ಮತದಾರರು ಮಾಡಬೇಕು ಮತ್ತು ಕಳೆದ ೨೦ ವರ್ಷಗಳಿಂದ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡದೇ ಇದೇ ನನ್ನ ಕೊನೆ ಚುನಾವಣೆ ನನ್ನನ್ನು ಗೆಲ್ಲಿಸಿ ಎಂದು ಕೇಳುತ್ತಿರುವವರಿಗೆ ತಾವೆಲ್ಲ ಮತದಾರರ ಬಂಧುಗಳು ತಕ್ಕ ಪಾಠ ಕಲಿಸಬೇಕು ನಾನು ಮಾಡಿರುವ ಅಭಿವೃದ್ಧಿ ಕಾರ್ಯ ಹಾಗೂ ಮಾನ್ಯ ಮಾಜಿ ಮುಖ್ಯಮಂತ್ರಿಯಾದ ಕುಮಾಸ್ವಾಮಿ ಅವರ ಪಂಚರತ್ನ ಯೋಜನೆಗಳ ಕುರಿತು ನಮ್ಮ ಯುವಕರ ಪಡೆ ಜನರಲ್ಲಿ ತಿಳಿ ಹೇಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಾ ಪಾಂಡುರಂಗ ನಾಯಕ, ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಲ್ಲಟಗಿ, ಜಿ.ಲೋಕರೆಡ್ಡಿ, ಕಾಶಿನಾಥ ಸರೋಧೆ, ಈಶಪ್ಪ ಹೂಗಾರ, ಚಂದ್ರಶೇಖರಪ್ಪ ಸ್ವಾಮಿ, ಎಂ.ಪ್ರಕಾಶಪ್ಪ, ಮಹೀಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಆದೇಪ್ಪ ಸಾಹುಕಾರ, ನಗರ ಘಟಕ ಅಧ್ಯಕ್ಷ ನಾಗರಾಜ ಗೌಡ ಡಿ.ಎನ್.ವೈ, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ವಲಿ ಗುತ್ತೇದಾರ, ಸೂಗುರೇಶ ಸ್ವಾಮಿ ಗಣದಿನ್ನಿ, ದಾನಪ್ಪ, ಗ್ಯಾನಪ್ಪ, ಬಂದೇನವಾಜ, ಸತ್ತರ ಸಾಬ್, ರಫಿ, ನಾಗರಾಜ, ಚಂದ್ರು ಎಲ್ಲೇರಿ ಸೇರಿದಂತೆ ಇನ್ನೀತರರು ಇದ್ದರು.