ನೂರಾರು ಏಕರೆ ಬಿತ್ತನೆ ಪ್ರದೇಶ ಹಾಳು * ಕೇಳೋರಿಲ್ಲಾ ರೈತರಗೋಳುರೈತರ ಜಮೀನುಗಳಿಗೆ ನುಗ್ಗಿದ ಡೋಣಿ ನದಿ ಪ್ರವಾಹ!

ಜಿ.ಪಿ. ಘೋರ್ಪಡೆ

ತಾಳಿಕೋಟೆ:ಆ.5: ತಾಲೂಕಿಗೆ ಸಂಬಂದಿಸಿದ ಬೊಮ್ಮನಹಳ್ಳಿ, ಗುತ್ತಿಹಾಳ, ಬೋಳವಾಡ ಗ್ರಾಮಗಳ ಸಿಮೇಗೆ ಸಂಬಂದಿತ ರೈತರ ಜಮೀನುಗಳಿಗೆ ಡೋಣಿ ನಧಿ ಪ್ರವಾಹದ ನೀರು ನುಗ್ಗಿದ್ದು ಬಿತ್ತನೆ ಮಾಡಲಾದ ಬೀಜಗೊಬ್ಬರ ಅಲ್ಲದೇ ಬೆಳೆಯೂ ಕೂಡಾ ಕೊಚ್ಚಿಕೊಂಡು ಹೋಗಿದ್ದು ಸಾಲಸೂಲ ಮಾಡಿ ಬಿತ್ತನೆ ಮಾಡಲಾದ ಬೆಳೆಯು ಡೋಣಿ ನಧಿಯ ಪ್ರವಾಹಕ್ಕೆ ಕೊಚ್ಚಿಹೋಗಿರುವದು ನಧಿ ತೀರದ ರೈತರಿಗೆ ಸಂಕಷ್ಟ ತಂದೊಡ್ಡಿದೆ.

   ಈಗಾಗಲೇ ಉತ್ತಮ ಮಳೆಯಾಗಿದೆ ಬಿತ್ತನೆ ಮಾಡಿದ ಹತ್ತಿ, ತೋಗರಿ, ಸೂರ್ಯಕಾಂತಿ, ಅಲ್ಲದೇ ಕಬ್ಬು ಇನ್ನಿತರ ಬೆಳೆಗಳನ್ನು ಬಿತ್ತನೆ ಮಾಡಿಕೊಂಡು ಉತ್ತಮ ಫಸಲು ಪಡೆಯುವ ನಿರಿಕ್ಷೆಯಲ್ಲಿದ್ದ ರೈತರಿಗೆ ಡೋಣಿ ನಧಿಯ ಪ್ರವಾಹವು ದಿಕ್ಕು ತೋಚದಂತೆ ಮಾಡಿದೆ.

ಡೋಣಿ ನಧಿ ತೀರಕ್ಕೆ ಹೊಂದಿಕೊಂಡು ಇರುವ ಗುತ್ತಿಹಾಳ ಗ್ರಾಮದ, ಬೋಳವಾಡ ಗ್ರಾಮದ, ಬೊಮ್ಮನಹಳ್ಳಿ ಗ್ರಾಮದ ನೂರಾರು ರೈತರು ನೂರಾರು ಏಕರೆ ಜಮೀನುಗಳಲ್ಲಿ ಶೇ. 90 ರಷ್ಟು ಬಿತ್ತನೆ ಮಾಡಿಕೊಂಡಿದ್ದಾರೆ ಡೋಣಿ ನಧಿಯ ಪ್ರವಾಹ ರೈತರಿಗೆ ಸಂಕಷ್ಟ ತಂದೊಡ್ಡಿದ್ದು ಈ ನಧಿಯ ಪ್ರವಾಹ ನುಗ್ಗಲು ಡೋಣಿ ನಧಿಯಲ್ಲಿ ತುಂಬಿಕೊಂಡಿರುವ ಹೂಳು ಕಾರಣವಾಗಿದೆ ಈ ಹೂಳಿಂದ ನಧಿಯ ನೀರೆಲ್ಲವೂ ಅಕ್ಕ ಪಕ್ಕದ ಜಮೀನುಗಳಿಗೆ ನುಗ್ಗುತ್ತಾ ಪ್ರತಿವರ್ಷ ಹಾನಿ ಮಾಡುತ್ತಾ ಸಾಗಿದೆ ಅಧಿಕಾರಿಗಳು ಮಾತ್ರ ಈ ಹೂಳೇತ್ತಲು ಯಾವುದೇ ಕ್ರಮ ಜರುಗಿಸಿಲ್ಲಾ ಎಂದು ರೈತರಾದ ಚೆನ್ನಪ್ಪ ಜಂಬಗಿ, ಅಪ್ಪು ಬಿರಾದಾರ, ಶರಣಗೌಡ ಬಿರಾದಾರ, ಬಸವರಾಜ ಬಿರಾದಾರ, ನಾನಾಗೌಡ ಬಿರಾದಾರ, ಅಂಬ್ರಪ್ಪ ಪತ್ತೇಪೂರ, ಬಸನಗೌಡ ಪಾಟೀಲ, ಚಿನ್ನಪ್ಪ ಜಂಬಗಿ, ಬಸವಂತ್ರಾಯ ಬಿರಾದಾರ, ಬಸವರಾಜ ಜಯಗುಂಡ, ಬಸವರಾಜ ಬಿರಾದಾರ, ಗುರಲಿಂಗಪ್ಪ ಪತ್ತೇಪೂರ, ಅವರು ಆರೋಪಿಸಿದ್ದಾರೆ.

ಕೆಳಮಟ್ಟದ ಸೇತುವೆಗಳು ಜಲಾವೃತ

  ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಭಾರಿ ರಬಸದ ಮಳೆಗೆ ಡೋಣಿ ನಧಿಯು ಕಳೆದ 4 ದಿನಗಳಿಂದಲೂ ಉಕ್ಕಿ ಹರಿಯುತ್ತಿದ್ದು ವಿಜಯಪೂರ ರಸ್ತೆಯ ಕೆಳಮಟ್ಟದ ಸೇತುವೆ ಹಾಗೂ ಹಡಗಿನಾಳ ಮಾರ್ಗದ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.
  ತಾಳಿಕೋಟೆಯಿಂದ ರಾಜ್ಯ ಹೆದ್ದಾರಿಯ ಮೂಲಕ ವಿಜಯಪೂರಕ್ಕೆ ತೆರಳುವ ಡೋಣಿ ನಧಿಗೆ ಅಡ್ಡಲಾಗಿ ಕಟ್ಟಲಾಗಿರುವ ಮೇಲ್ಮಟ್ಟದ ಸೇತುವೆಯಲ್ಲಿ 6 ತಿಂಗಳ ಹಿಂದೆಯೇ ಕುಸಿತ ಕಂಡಿದ್ದರಿಂದ ಮೇಲ್ಮಟ್ಟದ ಸೇತುವೆಯ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿತ್ತು ಸದರಿ ಸಂಚಾರ ಮಾರ್ಗವನ್ನು ಪಕ್ಕದಲ್ಲಿಯ ಕೆಳಮಟ್ಟದ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ 4ದಿನಗಳಿಂದ ಸುರಿಯುತ್ತಿರುವ ಮಳೆಗೆ ಡೋಣಿ ನಧಿಯಲ್ಲಿ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವದರಿಂದ ಕೆಳಮಟ್ಟದ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದೆ ಇದರಿಂದ ಮೇಲ್ಮಟ್ಟದ ಕುಸಿತಕಂಡ ಸೇತುವೆಯ ಮೇಲೆ ಬೈಕ್ ಸಂಚಾರಕ್ಕೆ ಜನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.

ಡೋಣಿ ನಧಿಯ ನೀರಿನ ಮಟ್ಟ ಏರುತ್ತಿರುವದನ್ನು ಕಂಡ ಪೊಲೀಸ್ ಅಧಿಕಾರಿಗಳು ಹಡಗಿನಾಳ ಗ್ರಾಮದ ಮುಖಾಂತರ ತೆರಳುವ ಕೆಳಮಟ್ಟದ ಸೇತುವೆಯ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾದ ಮೇಲ್ಮಟ್ಟದ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಈ ಮೇಲ್ಮಟ್ಟದ ಸೇತುವೆಯು ಮುದ್ದೇಬಿಹಾಳ ಮಾರ್ಗಕ್ಕೆ ತೆರಳಲು ಅನುಕೂಲವಾಗಿದ್ದರೂ ಕೂಡಾ ವಿಜಯಪೂರ ಮಾರ್ಗದ ಕಡೆಗೆ ತೆರಳು ಸುಮಾರು 15 ಕೀಲೋ ಮೀಟರ್ ಸುತ್ತುವರಿದು ತೆರಳುವ ಸಂದರ್ಬ ಬಂದೊದಗಿದ್ದು ಈ ಕಾರ್ಯದಿಂದ ವಾಹನ ಸವಾರರಿಗೆ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.


ಗುತ್ತಿಹಾಳ, ಬೋಳವಾಡ, ಬೊಮ್ಮನಹಳ್ಳಿ ಗ್ರಾಮಗಳ ಸೀಮೆಗೆ ಸಂಬಂದಿಸಿ ಡೋಣಿ ನಧಿ ತೀರಕ್ಕೆ ಹೊಂದಿಕೊಂಡಿರುವ ಜಮೀನುಗಳಿಗೆ ಡೋಣಿ ನಧಿಯ ಪ್ರವಾಹ ನುಗ್ಗಿ ಬಿತ್ತನೆ ಮಾಡಿದ ಎಲ್ಲ ಬೆಳೆಯು ಮಣ್ಣು ಸಮೇತವಾಗಿ ಕೊಚ್ಚಿಕೊಂಡು ಹೋಗಿದೆ ಸಾಲಸೂಲ ಮಾಡಿ ಬಿತ್ತನೆ ಮಾಡಿದ್ದಲ್ಲೇ ಡೋಣಿ ನಧಿ ಪ್ರವಾಹ ನುಂಗಿಬಿಟ್ಟಿದೆ ಇಷ್ಟೇಲ್ಲಾ ಅವಾಂತರಗಳಾದರೂ ಯಾವೊಬ್ಬ ಅಧಿಕಾರಿಯೂ ಬೆಟ್ಟಿ ನೀಡಿಲ್ಲಾ ರೈತರ ಸಂಕಷ್ಟ ಕೇಳಿಲ್ಲಾ.

ಪ್ರಭುಗೌಡ ಪಾಟೀಲ

 ಗುತ್ತಿಹಾಳ ಗ್ರಾಮದ ರೈತ