
ಕಲಬುರಗಿ;ಆ.17: ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಶೇಕಡ ನೂರರಷ್ಟು ಹಸಿರು ಕ್ಯಾಂಪಸ್ ಆಗಿ ಪರಿವರ್ತಿಸುವ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ಮತ್ತೊಂದು ಸಕಾರಾತ್ಮಕ ಹೆಜ್ಜೆಯನ್ನಿಟ್ಟು, ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯಂದು ಕ್ಯಾಂಪಸ್‍ನಲ್ಲಿ ಡಿಗ್ರೇಡಬಲ್ ಮತ್ತು ನಾನ್ ಡಿಗ್ರೇಡಬಲ್ ಸಂಸ್ಕರಣಾ ಘಟಕವನ್ನು ಉದ್ಘಾಟಿಸಲಾಯಿತು.
ವಿಶ್ವವಿದ್ಯಾಲಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಅಮೂಲ್ಯವಾದ ವರ್ಮಿ ಕಾಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸುವ ಮೂರು ವರ್ಮಿ ಕಾಂಪೆÇೀಸ್ಟ್ ಪಿಟ್‍ಗಳನ್ನು ವಿವಿಯ ಕ್ಯಾಂಪಸ್‍ನಲ್ಲಿ, ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಮತ್ತು ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿಯವರ ಸುಪುತ್ರಿಯರಾದ ಕುಮಾರಿ ಭವಾನಿ, ಕುಮಾರಿ ಶಿವಾನಿ ಮತ್ತು ಕುಮಾರಿ ಮಹೇಶ್ವರಿ ಉದ್ಘಾಟಿಸಿದರು.
ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರ್ಜುನ್ ಶೆಟ್ಟಿ ಅವರ ಪ್ರಕಾರ, ಪ್ರತಿ ವರ್ಮಿ ಕಾಂಪೆÇೀಸ್ಟ್ ಪಿಟ್‍ನಲ್ಲಿ 500 ಕಿಲೋಗ್ರಾಂಗಳಷ್ಟು ಕೊಳೆಯುವ ತ್ಯಾಜ್ಯವನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿದೆ. ತೋಟಗಳಲ್ಲಿ ಬಳಸುವ ಹಾನಿಕಾರಕ ರಾಸಾಯನಿಕ ಗೊಬ್ಬರಗಳನ್ನು ಬದಲಿಸಲು ಸರಾಸರಿ 100 ಕೆ.ಜಿ ವರ್ಮಿ ಕಾಂಪೆÇೀಸ್ಟ್ ಅನ್ನು ಉತ್ಪಾದಿಸಬಹುದು. ಇದನ್ನು ವಿಶ್ವವಿದ್ಯಾಲಯ ಆವರಣದಲ್ಲಿರುವ ಉದ್ಯಾನ ಮತ್ತು ಶರಣಬಸವೇಶ್ವರ ಸಂಸ್ಥಾನದ ಒಡೆತನದಲ್ಲಿರುವ ಕೃಷಿ ಕೈಗಾರಿಕೆಗೆ ಬಳಸಬಹುದು ಎಂದರು.
ಗ್ರೀನ್ ಕ್ಯಾಂಪಸ್ ಉಪಕ್ರಮದ ಭಾಗವಾಗಿ ಇಡೀ ವಿಶ್ವವಿದ್ಯಾಲಯದ ವಿದ್ಯುತ್ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸ್ವಾವಲಂಬನೆ ಸಾಧಿಸಲು ವಿಶ್ವವಿದ್ಯಾಲಯವು ಈಗಾಗಲೇ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದೆ ಮತ್ತು ಮಳೆಯ ಪ್ರತಿಯೊಂದು ಹನಿಗಳನ್ನು ಬಳಸಲು ಎಲ್ಲಾ ವಿಭಾಗಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅನುಸರಿಸಿದೆ. ವಿವಿಯ ಉದ್ಯಾನವನಗಳಲ್ಲಿನ ಸಸ್ಯಗಳಿಗೆ ನೀರುಣಿಸಲು ಕ್ಯಾಂಪಸ್‍ನಲ್ಲಿ ನೀರು ಮತ್ತು ಅಂತರ್ಜಲ ಸಂಪನ್ಮೂಲಗಳನ್ನು ಮರುಪೂರಣಗೊಳಿಸಲಾಗುತ್ತಿದೆ.
ಆಗಸ್ಟ್ 15 ರಂದು ಉದ್ಘಾಟನೆಗೊಂಡ ಡಿಗ್ರೇಡಬಲ್ ಟ್ರೀಟ್‍ಮೆಂಟ್ ಪ್ಲಾಂಟ್ ಜೊತೆಗೆ ಸ್ಥಾಪಿಸಲಾಗುತ್ತಿರುವ ನಾನ್-ಡಿಗ್ರೇಡಬಲ್ ಪ್ಲಾಂಟ್ ಎರಡನ್ನೂ ಒಟ್ಟು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಡಾ.ಶೆಟ್ಟಿ ಹೇಳಿದರು. ವಿಶ್ವವಿದ್ಯಾಲಯದಲ್ಲಿ ಉತ್ಪತ್ತಿಯಾಗುವ ಕೊಳೆಯದ ತ್ಯಾಜ್ಯವನ್ನು ದಹಿಸಲು ದಹನಕಾರಿ ಘಟಕದ ಸ್ಥಾಪನೆಯೂ ಸಹ ನಡೆಯುತ್ತಿದೆ ಇದು ಒಂದು ತಿಂಗಳ ಅವಧಿಯಲ್ಲಿ ಸಿದ್ಧವಾಗಲಿದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗದಂತೆ ದಹಿಸುವ ಘಟಕವನ್ನು ಪ್ಯಾರಾ ಮೀಟರ್‍ಗಳ ಪ್ರಕಾರ ಹೊಂದಿಸಲಾಗುತ್ತಿದೆ ಮತ್ತು ದಹನಕಾರಿ ಘಟಕದಲ್ಲಿ ಉತ್ಪತ್ತಿಯಾಗುವ ಬೂದಿಯನ್ನು ಕೃಷಿ ಕ್ಷೇತ್ರಗಳಲ್ಲಿ ಗೊಬ್ಬರವಾಗಿ ಬಳಸಲಾಗುತ್ತದೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ವಿವಿಯ ಸಮಕುಲಪತಿ ಪೆÇ್ರ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಡಾ. ನಾಗಬಸವಣ್ಣ ಗುರಗೋಳ, ಡಾ.ಅರ್ಜುನ್ ಶೆಟ್ಟಿ ಹಾಗೂ ಡಾ.ಜ್ಯೋತಿ ಹೊನ್ನಳ್ಳಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.