
ಮುದ್ದೇಬಿಹಾಳ:ಸೆ.14: ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಸ್ವರಾಜ್ ಟ್ರ್ಯಾಕ್ಟರ್ ಕಂಪನಿಯ ನೂತನ 8200 ಹಾರ್ವೇಷ್ಟರ್ ಮಷಿನ್ ಹಾಗೂ ವಾಹನ ಲೋಕಾರ್ಪಣೆ ಕಾರ್ಯಕ್ರಮವನ್ನುಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಬುಧವಾರ ಉದ್ಘಾಟಿಸಿದರು.
ಬಳಿಕ ಸ್ವರಾಜ್ ಟ್ರ್ಯಾಕ್ಟರ್ ಕಂಪನಿಯ ಟ್ರ್ಯಾಕ್ಟರ್ ನ್ನು ಸ್ವತಃ ನನ್ನ ಹೊಲದಲ್ಲಿ ದ್ರಾಕ್ಷೀ ಬೆಳೆಯ ಕೃಷಿ ಚಟುವಟಿಕೆಗೆ ಅನುಕೂಲವಾಗಲು ಖರಿದಿಸಿದ್ದೇ ಆದರೇ ಬಾಳ್ವಕೇಯಲ್ಲಿ ಇತರೇ ಕಂಪನಿಗಳಿಂಗಿಂತ ಈ ಕಂಪನಿ ವಾಹನಗಳು ಉಪಯುಕ್ತವಾಗಿವೆ ಎಂದರೆ ತಪ್ಪಾಗಲರದು ಅದರಂತೆ ಸಧ್ಯ ಈ ಕಂಪನಿಯು ನೂತನ 8200 ಹಾರ್ವೇಷ್ಟರ್ ಮಷಿನ್ ವಾಹನ ಪರಿಚಯಿಸುತ್ತಿರುವುದು ತುಂಬಾ ಶ್ಲಾಘನಿಯ.
ಈ ಮಷಿನ ವಾಹನ ಅತ್ಯಾಧುನಿಕ ಅಡ್ವಾನ್ಸ್ ತಂತ್ರಜ್ಞಾನವನ್ನು ಹೊಂದಿದ್ದು ಮಾತ್ರವಲ್ಲದೇ ರೈತರಿಗೆ ವರದಾನವಾಗಿದೆ ಜೊತೆಗೆ ಕಡಿಮೆ ಇಂಧನ ಹೆಚ್ಚು ಮೈಲೇಜು ನೀಡುವುದು ಇತ್ತಮ ಗುಣಮಟ್ಟ ಸೌಲಭ್ಯಗಳನ್ನು ನೀಡುವುದು ಇದರ ಮತ್ತೋಂದು ವಿಶೇಷತೆಯ ಮುಖ್ಯಭಾಗವಾಗಿದೆ. ಎಲ್ಲವೂ ಒಂದೇ ಸೂರಿನಡಿಯಲ್ಲಿ ರಾಶಿ ಮಾಡಬಲ್ಲ ವಿನೂತನ ಮಾದರಿ ವಾಹನ ಇದಾಗಿದೆ ಕಾರಣ ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ವೇಳೆ ಸ್ವರಾಜ್ ಕಂಪನಿಯ ಸೀನಿಯರ್ ಮೇನೆಜರ್ ಪಿಯುಷ್ ಕೌಶಿಕ್. ಭೋಗೇಶ್ವರ ಸಂಸ್ಥೆಯ ಮುಖ್ಯಸ್ಥ ಶಿವಾನಂದ ಭೋ ಹೂಗಾರ, ಡೆಪ್ಯೂಟಿ ಮೇನೇಜರ್ ರಿಶಿರಾಜ್ ಭೂಯಾನ, ವಿಜಯಪುರ ಜಿಲ್ಲಾ ಜಂಟಿ ನಿರ್ದೇಶಕ ಡಿ ಡಬ್ಲೂ ರಾಜಶೇಖರ, ಕೃಷಿ ಸಹಾಯಕ ಉಪ ನಿರ್ದೇಶಕ ಪ್ರಕಾಶ ಚವ್ಹಾಣ, ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿ ರಾಘವೇಂದ್ರ ದೇಶಪಾಂಡೆ, ಅರವಿಂದ ಹೂಗಾರ, ಸಂಗನಗೌಡ ಅಸ್ಕೀ, ದೇವೇಂದ್ರ ವಾಲಿಕಾರ, ಬಾಗೇವಾಡಿ ಕೃಷಿ ಅಧಿಕಾರಿ ಅರವಿಂದ ಹೂಗಾರ, ಸೇರಿದಂತೆ ಹಲವರು ಇದ್ದರು.