ನೂತನ ಸ್ಪರ್ಧಾಸಂದೇಶ ಕೋಚಿಂಗ್ ಉದ್ಘಾಟನೆ


ಮೊದಲ ದಿನದ ಕಾರ್ಯಗಾರ ಉಚಿತ ಶರಣುಕುಮಾರ
ಮಾನ್ವಿ.ನ.07- ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ನವೆಂಬರ್ 08 ರಂದು ನೂತನ ಸ್ಪರ್ಧಾ ಸಂದೇಶ ಕೋಚಿಂಗ್ ಸೆಂಟರ್ ಉದ್ಘಾಟನೆ ಮಾಡಲಾಗುತ್ತಿದ್ದು ಮೊದಲ ದಿನದ ಕಾರ್ಯಗಾರವು ರಾಜ್ಯದ ಅತ್ಯುತ್ತಮ ಉಪನ್ಯಾಸಕರಾದ ಶರಣು ಬಾಗೂರು ಇವರಿಂದ ವಿಶೇಷ ಉಪನ್ಯಾಸವನ್ನು ಪೋತ್ನಾಳ ಸುತ್ತ ಮುತ್ತಲಿನ ಹಾಗೂ ತಾಲೂಕಿನ ವಿದ್ಯಾರ್ಥಿಗಳು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ವ್ಯವಸ್ಥಾಪಕ ಶರಣುಕುಮಾರ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಕರೆದು ಮಾತಾನಾಡಿ ಅವರು ನಮ್ಮ ರಾಯಚೂರು ಜಿಲ್ಲೆಯು ನಾಡಿಗೆ ಮಾದರಿಯಾಗಿದೆ. ಭತ್ತ, ಹತ್ತಿ, ವಿದ್ಯುತ್, ಬಂಗಾರ ನೀಡುವ ಜಿಲ್ಲೆಯಾದರು ಕೂಡ ಶಿಕ್ಷಣದಲ್ಲಿ ಹಿಂದುಳಿದ್ದು ಯಾಕೆ ಎನ್ನುವ ಪ್ರಶ್ನೆಯೊಂದಿಗೆ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಉಪಯುಕ್ತ ಶಿಕ್ಷಣ ನೀಡುವ ಉದ್ದೇಶದಿಂದ ಕೋಚಿಂಗ್ ಸೆಂಟರ್ ಪ್ರಾರಂಭಿಸಲಾಗಿದ್ದು, ನವೆಂಬರ್ 08 ರಂದು ಉದ್ಘಾಟನೆಯಾಗುವ ಒಂದು ದಿನದ ಉಚಿತ ಕಾರ್ಯಗಾರದಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಶರಣಕುಮಾರ ಹೇಳಿದರು.
ಈ ಸಂದರ್ಭದಲ್ಲಿ ಆರ್ ಯಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.