ನೂತನ ಸಿಇಒ ಗೆ ಅಭಿನಂದನೆ

ರಾಯಚೂರು.ಜ.೧೫-ಜಿಲ್ಲೆಗೆ ನೂತನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಬಂದ ನೂರ್‌ಝಹರ ಖಾನಂ ರವರನ್ನು ರಾಯಚೂರು ಜಿಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಎಂ.ಡಿ.ಜಾವೀದ್ ಹವಲ್ದಾರ್ ಅವರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಭೇಟಿ ಮಾಡಿ ರಾಯಚೂರು ಜಿಲ್ಲೆಗೆ ಸ್ವಾಗತ ಕೋರಿದರು ಹಾಗೂ ಜಿಲ್ಲೆಗೆ ಸಂಬಂಧಪಟ್ಟಂತಹ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ರಾಯಚೂರು ತಾಲೂಕು ಕಾಡ್ಲೂರ್ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಎಂ.ಡಿ.ಸಾಧಿಕ್ ಅವರು ಉಪಸ್ಥಿತರಿದ್ದರು.