ನೂತನ  ಸರ್ಕಾರಕ್ಕೆ ಸಾಲಿಗ್ರಾಮ ಗಣೇಶ್ ಶೆಣೈಯವರ ಬಹಿರಂಗ ಪತ್ರ

ದಾವಣಗೆರೆ-ಜೂ.10; ಕರ್ನಾಟಕದ ವಿಧಾನಸಭಾ ಚುನಾವಣೆ ಇತ್ತೀಚಿಗೆ ನಡೆದು ಗೆದ್ದ ನೂತನ ಸರ್ಕಾರಕ್ಕೆ ಸಾಮಾನ್ಯ ಹಿರಿಯ ನಾಗರೀಕ ಸಾಲಿಗ್ರಾಮ ಗಣೇಶ್ ಶೆಣೈಯವರು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕಾಳಜಿಯಿಂದ ಸಾರ್ವತ್ರಿಕವಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.ಉಚಿತವಾಗಿ ಮಹಿಳೆಯರಿಗೆ ಪ್ರಯಾಣ, ಅಕ್ಕಿ, ವಿದ್ಯುತ್, ಮಾಸಿಕ ಪಿಂಚಣಿ ಹೀಗೆ ಹಲವಾರು ಯೋಜನೆಗಳೊಂದಿಗೆ ಕೆಲವರು ಸೋಮಾರಿಗಳಾಗುತ್ತಾರೆ. ರೈತರಿಗೆ ಕೆಲವು ಕಾರ್ಖಾನೆಗಳಿಗೆ ಹೋಟೆಲ್ ಉದ್ಯಮಿಗಳಿಗೆ ಕಾರ್ಮಿಕರ ಕೊರತೆಯಾಗುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲೀಕರಿಗೆ ಆರ್ಥಿಕ ತೊಂದರೆ ಈ ಎಲ್ಲಾ ಅವ್ಯವಸ್ಥೆ, ಉಚಿತ ಘೋಷಣೆಯೊಂದಿಗೆ ಕೆಲವು ವಿದೇಶಗಳಿಗೆ ಆದಂತೆ ಕರ್ನಾಟಕ ಸರ್ಕಾರ ಆರ್ಥಿಕವಾಗಿ ಕುಂಠಿತವಾಗಬಹುದು. ಕೆಲವು ಮನೆಗಳಲ್ಲಿ ಅತ್ತೆ-ಸೊಸೆಯರ ಜಗಳವು ನಡೆಯುತ್ತಿದೆ.ಅವರ ಬದಲು ಮಾನವೀಯ ಮೌಲ್ಯದ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕಾಳಜಿಯ ಕಾರ್ಯಗಳೊಂದಿಗೆ ಸರ್ಕಾರಕ್ಕೆ ಗೌರವ ಬರುತ್ತದೆ. ಸರ್ಕಾರಿ ಶಾಲೆಗಳ ಸ್ಥಾಪನೆ, ಇರುವ ಶಾಲೆಗಳ ಅಭಿವೃದ್ಧಿ, ಅನಾರೋಗ್ಯದಿಂದ ಬಳಲುವ ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆ, ತಾಲ್ಲೂಕು, ಹೋಬಳಿಗಳಲ್ಲಿ ಅಸ್ಪತ್ರೆ ಸ್ಥಾಪನೆ, ಇರುವ ಆಸ್ಪತ್ರೆಗಳ ಅಭಿವೃದ್ಧಿ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಪರ ಸಂಘಟನೆಗಳಿಗೆ ಕನ್ನಡ ನಾಡು-ನುಡಿ ಚಟುವಟಿಕೆಗಳಿಗೆ ಅನುದಾನ, ಪ್ರಾಮಾಣಿಕವಾಗಿ ಸ್ವಾಭಿಮಾನದಿಂದ ದುಡಿಯುವ ಕಾರ್ಮಿಕರಿಗೆ ಸಹಾಯಧನ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಜನಪದ ಕಲಾವಿದರಿಗೆ ಪ್ರೋತ್ಸಾಹ, ಅನುದಾನ ಹೀಗೆ ಹತ್ತು ಹಲವು ಸಕಾರಾತ್ಮಕ ಸದ್ಭಾವನೆಯ ಸತ್ಕಾರ್ಯಕ್ಕೆ ಒತ್ತುಕೊಡಬೇಕಾಗಿದೆ. ಈಗಾಗಲೇ ಉಚಿತ ಅಕ್ಕಿ ಪಡೆದ ಕೆಲವರು ಹೋಟೆಲ್‌ಗಳಿಗೆ ಅಕ್ಕಿ ಮಾರಾಟ ಮಾಡಿ ಮಧ್ಯಪಾನದ ದಾಸರಾಗುತ್ತಿದ್ದಾರೆ.ಈ ಹಂತದಲ್ಲಿ ಕರ್ನಾಟಕ ಸರ್ಕಾರ ಮುಂಜಾಗ್ರತೆಯಿAದ ಪೂರ್ವ ಪರಯೋಚಿಸಿ ಮುಂದಿನಹೆಜ್ಜೆ ಇಡಬೇಕಾಗುತ್ತದೆ. ಆರಂಭ ಶೂರತ್ವದ ಈ ಪರಿಕಲ್ಪನೆಗಳೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಸಭ್ಯತೆ ಮರೆಯಾಗುತ್ತಿದೆ ಎಂದು ಶೆಣೈಯವರು ತಮ್ಮ ಮನದಾಳದ ಮಾತು ಹಂಚಿಕೊAಡಿದ್ದಾರೆ.