ನೂತನ ಸಮುದಾಯ ಆರೋಗ್ಯಕೇಂದ್ರ ಕಟ್ಟಡ ವಿಕ್ಷಣೆ ಮಾಡಿದ ಜಿ.ಹಂಪಯ್ಯನಾಯಕ

ಸಿರವಾರ.ಮೇ.೩೧-ಸಮೂದಾಯ ಆರೋಗ್ಯಕೇಂದ್ರದ ನೂತನ ಕಟ್ಟಡ ನಿರ್ಮಾಣವಾಗಿ ೨ ವರ್ಷಗಳ ನಂತರ ತರಾತುರಿಯಲಿ ಉದ್ಘಾಟನೆ ಮಾಡಲಾಗಿದೆ, ನೂತನ ಕಟ್ಟಡಕ್ಕೆ ಸೂಕ್ತ ವೈದ್ಯಕೀಯ ಸಲಕರಣೆಗಳು, ನುರಿತ, ತಜ್ಞ ವೈದ್ಯರನ್ನು ನೇಮಕ ಮಾಡುವಂತೆ ಹಾಲಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಆರೋಗ್ಯ ಸಚಿವರ ಮೇಲೆ ಒತ್ತಡ ಹಾಕಬೇಕು ಎಂದು ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಒತ್ತಾಯಿಸಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ವಿಕ್ಷಣೆ ಮಾಡಿ ಮಾತನಾಡಿದ ಅವರು ಹಿಂದೆ ಶ್ರೀ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ, ಯು.ಟಿ.ಖಾದರ ಆರೋಗ್ಯ ಸಚಿರಾಗಿದರು ಅವರ ಮೇಲೆ ಒತ್ತಡ ಹಾಕಿದ ಪರಿಣಾಮ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವ ಜೊತೆಗೆ ಸ್ವತಃ ಅವರೇ ಆಗಮಿಸಿ ಭೂಮಿ ಪೂಜೆ ನೆರವೇರಿಸದರೂ. ಕಟ್ಟಡ ನಿರ್ಮಾಣವಾಗಿ ೨ ವರ್ಷಗಳ ನಂತರ ತರಾತುರಿಯಲಿ ಉದ್ಘಾಟನೆ ಮಾಡಲಾಗಿದೆ.
ಉದ್ಘಾಟನೆಗೊಂಡು ೧೫ ದಿನ ಕಳೇದರೂ ಹಾಸಿಗೆಗಳ, ಯಾವುದೇ ವೈದ್ಯಕೀಯ ಸಲಕರಣೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿಲ. ಕೂಡಲೇ ಆಸ್ಪತ್ರೆಗೆ ಎಲ್ಲಾ ವ್ಯವಸ್ಥೆಯನ್ನು ಮಾಡಬೇಕು. ಇಲ್ಲದಿದರೆ ಸಾರ್ವಜನಿಕರಿಗೆ ವೈಧ್ಯಕೀಯ ಸೌಲಭ್ಯಗಳು ದೊರೆಯುವುದಿಲ, ಕಟ್ಟಡ ಹಾಳುಕೊಂಪೆಯಾಗುತ್ತದೆ ಎಂದರು. ಸಿರವಾರ ತಾಲೂಕು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಚುಕ್ಕಿ ಶಿವಕುಮಾರ,ತಾ.ಪಂ ಮಾಜಿ ಅದ್ಯಕ್ಷ ದಾನನಗೌಡ, ವಿಎಸ್ ಎಸ್ ಎನ್ ಸದಸ್ಯ ರಮೇಶ ದರ್ಶನಕರ್, ಶಿವಶರಣ ಸಾಹುಕಾರ ಅರಕೇರಿ, ಜಿ.ವಿರೇಶ,ಡಾ.ಪರಿಮಳಾಮೈತ್ರಿ, ಪ.ಪಂಚಾಯತಿ ಸದಸ್ಯ ನಾಗರಾಜಚಿನ್ನಾನ್, ರಾಜಮಹ್ಮದ, ಮಾರ್ಕಪ್ಪ, ಹಸನ್ ಅಲಿಸಾಬ್, ಮೌಲಾಸಾಬ ವರ್ಚಸ್, ಮಹಿಬೂಬ್ ಸಾಬ್ ದೊಡ್ಮನೆ, ಸೂರಿದುರುಗಣ್ಣನಾಯಕ, ವೆಂಕಟೇಶ ದೊರೆ, ಹಾಜಿಚೌದ್ರಿ, ಯುವ ಘಟಕದ ಅಧ್ಯಕ್ಷ ಅಂಬು, ವಿರೇಶಗಡ್ಲ್, ಮಲ್ಲಿಕಾರ್ಜುನ, ರಫಿ, ಭಿಮ್ಮ, ಅಪ್ಸರ್, ಗುರುರಾಜ, ವೆಂಕಟೇಶ ಮಾಸಕ್ ಸೇರಿದಂತೆ ಇನ್ನಿತರರು ಇದ್ದರು.