ನೂತನ ಸದಸ್ಯರು ಜನರ ಕಷ್ಟಕ್ಕೆ ಸ್ಪಂದಿಸಿ : ಶಾಸಕ ರಾಜುಗೌಡ

ಸುರಪುರ :ಜ.3: ಇತ್ತೀಚಿಗೆ ಗ್ರಾಮ ಪಂಚಾಯಿತಿ ಫಲಿತಾಂಶ ಪ್ರಕಟಗೊಂಡಿದ್ದು. ನೂತನ ಸದಸ್ಯರುಗಳಾಗಿ ಆಯ್ಕೆಯಾದವರು ಜನರ ಕಷ್ಟಗಳಿಗೆ ಸ್ಪಂದಿಸಿ ಎಂದು ಸುರಪುರ ಶಾಸಕರು ಹಾಗು ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ಅಧ್ಯಕ್ಷರಾದ ನರಸಿಂಹ ನಾಯಕ (ರಾಜುಗೌಡ) ಹೇಳಿದರು.

ಬೈರಿಮಡ್ಡಿ ಗ್ರಾಮದ ಸುಮಾರು 50ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತ ಪಾತ್ರ ಮಹತ್ವದಿದ್ದು ಗ್ರಾಮಗಳ ಅಭಿವೃದ್ಧಿಗೆ ಬದ್ಧನಾಗಿರುವೆ ಎಂದರು.

ಇನ್ನೂ ಗ್ರಾಮ ಪಂಚಾಯಿತ ಫಲಿತಾಂಶ ನಂತರ ಬೈರಿಮಡ್ಡಿ ಗ್ರಾಮಕ್ಕೆ ಬೇಟಿ ನೀಡಿದಾಗ ಗ್ರಾಮಸ್ಥರು ಆರತಿ ಬೆಳಗಿ ಶಾಸಕರನ್ನು ಬರಮಾಡಿಕೊಂಡರು.
ಗ್ರಾಮ ಪಂಚಾಯಿತಗೆ ನೂತನ ಸದಸ್ಯರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ(ತಾತ) ,ಎಚ್ ಸಿ ಪಾಟೀಲ್, ಬಸನಗೌಡ ಹಳ್ಳಿಕೋಟಿ, ಕಿಟ್ಟಪ್ಪ ಸಾಹುಕಾರ , ಬಸವರಾಜ ಪಡಕೋಟಿ, ಬಲಭೀಮ ನಾಯಕ ಬೈರಿಮಡ್ಡಿ, ಶರಣು ನಾಯಕ ಬೈರಿಮಡ್ಡಿ , ವೆಂಕಟೇಶ್ ನಾಯಕ ಬೈರಿಮಡ್ಡಿ ಸೇರಿದಂತೆ ಇತರರಿದ್ದರು.