ನೂತನ ಸಚಿವರಿಗೆ ಅಭಿನಂದನೆಗಳ ಮಹಾಪೂರ

ದಾವಣಗೆರೆ.ಜೂ.6: ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾಗಿದ್ದ ಎಸ್ ಎಸ್ ಮಲ್ಲಿಕಾರ್ಜುನ ಅವರು  ಆಗಮಿಸಿದ್ದು ದಾವಣಗೆರೆ ಜನತೆ ಹೃದಯಪೂರ್ವಕವಾಗಿ ಸ್ವಾಗತ ಕೋರಿದರು.  ಸಚಿವರ ಮನೆಗೆ ಅಧಿಕಾರಿಗಳು ಮತ್ತು ವಿವಿಧ ಸಮಾಜ ಸಂಘಟನೆ ಮುಖಂಡರುಗಳು ಆಗಮಿಸಿ ಸಚಿವರನ್ನು ಅಭಿನಂದಿಸಿದರು.ಇಂದು ಬೆಳಗ್ಗೆ 11 ಗಂಟೆಯಿಂದ ವಿವಿಧ ಸಂಘಟನೆಗಳ ಮತ್ತು ಸಮಾಜಗಳ ಬಾಂಧವರು ತಂಡೋಪತಂಡವಾಗಿ ಆಗಮಿಸಿ ಸಚಿವರಿಗೆ ಪುಷ್ಪ ಮಾಲೆ ರ‍್ಪಿಸುವ ಮೂಲಕ ಅಭಿನಂದಿಸಿದರು.ದಾವಣಗೆರೆ ಜಿಲ್ಲೆಯ ಹರಿಹರ,ಜಗಳೂರು,ಚನ್ನಗಿರಿ ಹೊನ್ನಳ್ಳಿ ಸೇರಿದಂತೆ ವಿವಿಧ ವಿವಿಧ ತಾಲೂಕು ಮತ್ತು ಹೋಬಳಿಗಳ ಜನರು ಆಗಮಿಸಿ ನೂತನ ಸಚಿವರನ್ನು ಅಭಿನಂದಿಸಿದರು.ಜಿಲ್ಲಾಮಟ್ಟದ ಅಧಿಕಾರಿಗಳು ನೌಕರರು ಪೊಲೀಸ್ ಇಲಾಖೆಯ ಅಧಿಕಾರಿಗಳು ಆಗಮಿಸಿ ಅಭಿನಂದನೆ ಸಲ್ಲಿಸಿದರು.ಇದೆ ವೇಳೆ ಸತತವಾಗಿ ದಾವಣಗೆರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಿರಿಯ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಅಭಿನಂದಿಸಲಾಯಿತು.