ನೂತನ ಸಂಸದರಿಂದ ಕಾವೇರಿ ನ್ಯಾಯ ಸಿಗಲಿ

ಸಂಜೆವಾಣಿ ನ್ಯೂಸ್
ಮೈಸೂರು:ಜೂ.09:- ನೂತನವಾಗಿ ಆಯ್ಕೆಯಾಗಿರುವ ರಾಜ್ಯದ ಸಂಸದರೆಲ್ಲ ಹೆಚ್ಚಿನ ರೀತಿಯಲ್ಲಿ ಗಮನಹರಿಸಿ ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕಾರ್ಯಪ್ರವೃತ್ತರಾಗಬೇಕೆಂದು ಬಿ.ಜೆ.ಪಿ ನಾಯಕರು ಹಾಗೂ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್(ಜೆ.ಪಿ.) ಮನವಿ ಮಾಡಿದ್ದಾರೆ.
ಕಾವೇರಿ ಕ್ರಿಯಾ ಸಮಿತಿಯು ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪುಸ್ತಕಗಳಿಗೆ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 9 ತಿಂಗಳಿನಿಂದ ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಈ ಹಿಂದೆಯಿದ್ದ ಸಂಸದರು ಕೆ.ಆರ್.ಎಸ್. ಡ್ಯಾಂನಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರನ್ನು ಹರಿಸುತ್ತಿದ್ದಾಗ ಮೌನವಾಗಿದ್ದರು. ಈ ಹಿನ್ನೆಲೆಯಲ್ಲಿ ರೈತರು ಬೆಳೆಯನ್ನು ಬೆಳೆಯಲು ಸಾಧ್ಯವಾಗಲಿಲ್ಲ. ನಮ್ಮ ರಾಜ್ಯದ ರೈತರ ನೀರನ್ನೆಲ್ಲಾ ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಟ್ಟು ಅನ್ಯಾಯವೆಸಗಿದರೆಂದರು.
ಮೇಕೆದಾಟು ಯೋಜನೆ ಪ್ರಾರಂಭಿಸಬೇಕೆಂದು ಕೇಂದ್ರ ಹಾಗೂ ರಾಷ್ಟ್ರ ಸರ್ಕಾರಗಳನ್ನು ಒತ್ತಾಯಿಸಲು ಮುಂದಿನವಾರ ಮೇಕೆದಾಟು ಬಳಿ ಧರಣಿ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದರು. ಇಂದಿನ ಧರಣಿ ಹಾಗೂ ಸಹಿ ಸಂಗ್ರಹಣ ಕಾರ್ಯಕ್ರಮದಲ್ಲಿ ತೇಜಸ್ ಲೋಕೇಶ್‍ಗೌಡ, ಒಕ್ಕಲಿಗ ಸಂಘದ ಶಿವಲಿಂಗಯ್ಯ, ಶ್ರೀಮತಿ.ಮಂಜುಳ ರೈತಮುಖಂಡರಾದ ವರಕೋಡು ಕೃಷ್ಣಗೌಡ ಶ್ರೀಮತಿ.ಭಾಗ್ಯಮ್ಮ, ಸಿಂಧೂವಳ್ಳಿ ಶಿವಕುಮಾರ್, ನಾಗರಾಜು, ಕೃಷ್ಣಪ್ಪ, ಶ್ರೀಮತಿ.ನೇಹ. ಮಹೇಶ್ ಗೌಡ, ಕಿಶೋರ್‍ಗೌಡ, ಶ್ರೀಮತಿ.ಬಿಳಿಕೆರೆ ಭಾಗ್ಯಮ್ಮ ಡಾ.ರಾಜ್ ಸಂಘದ ಮಹದೇವಸ್ವಾಮಿ, ಆಟೋ ಮಹದೇವ್. ಅಕ್ಟರ್, ರವೀಶ್, ಹೊನ್ನೇಗೌಡ, ಸೊಪ್ಪಿನಕೇರಿ ಚಂದ್ರು. ಮಂಡಿ ಮೊಹಲ್ಲಾ, ಅಭಿ, ವಿದ್ಯಾರ್ಥಿ ಕ್ರಿಯಾಸಮಿತಿಯ ಸುದರ್ಶನ್, ಸಂಜಯ್ ರಾಜೇಶ್, ಕಿರಣ್, ಹೇಮಂತ್, ಪ್ರಜ್ವಲ್, ವಿಷ್ಣು, ಹರೀಶ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.