ನೂತನ ಸಂಸತ್ ಮೂರು ದ್ವಾರಗಳ ಸಮ್ಮಿಲನ

ನವದೆಹಲಿ, ಮೇ ೨೮- ರಾಜಧಾನಿ ನವದೆಹಲಿಯಲ್ಲಿ ನೂತನ ಸಂಸತ್ ಭವನದ ಲೋಕಾರ್ಪಣೆ ಸಂಭ್ರಮ ಮನೆ ಮಾಡಿದೆ. ಈ ನೂತನ ಸಂಸತ್ ಭವನ ತ್ರಿಕೋನಾಕಾರದಲ್ಲಿರುವ ಪ್ರಮುಖ ಆಕರ್ಷಣೆಯಾಗಿದೆ. ಈ ಹಿಂದೆ ನಿರ್ಮಿಸಲಾಗಿದ್ದ ಸಂಸತ್ ಭವನ ವೃತ್ತಾಕಾರದಲ್ಲಿ ಇತ್ತು. ಈ ಕಟ್ಟಡ ನಾಲ್ಕು ಅಂತಸ್ತುಗಳನ್ನೊಳಗೊಂಡಿದೆ.
ಈ ಕಟ್ಟಡ ೬೪ ಸಾವಿರ ೫೦೦ ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು ಈ ಕಟ್ಟಡದಲ್ಲಿ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂಬ ಮೂರು ಮುಖ್ಯ ದ್ವಾರಗಳನ್ನು ಹೊಂದಿರುವುದು ಈ ಕಟ್ಟಡದ ಪ್ರಮುಖ ಆಕರ್ಷಣೆಯಾಗಿದೆ.
ದೇಶಾದ್ಯಂತ ೭೫ನೇ ಸ್ವಾತಂತ್ರ್ಯ ಸಂಭ್ರಮ ಆಚರಿಸುತ್ತಿರುವ ಸಂದರ್ಭದಲ್ಲಿ ಹೊಸ ಸಂಸತ್ ಭವನ ಲೋಕಾರ್ಪಣೆಗೊಂಡಿದೆ. ಹಳೆಯ ಸಂಸತ್ ಭವನ ಪಕ್ಕದಲ್ಲೇ ಹೊಸ ಸಂಸತ್ ಭವನ ನಿರ್ಮಾಣ ಮಾಡಲಾಗಿದೆ. ಇದು ಭೂಕಂಪ ನಿರೋಧಕ ಕಟ್ಟಡವಾಗಿದ್ದು, ಇದು ೧೫೦ ವರ್ಷ ಬಾಳಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.
ಈ ಹೊಸ ಸಂಸತ್ ಭವನದ ಕಟ್ಟಡಕ್ಕೆ ಬಳಸಲಾಗಿರುವ ತೇಗದ ಮರವನ್ನು ಮಹಾರಾಷ್ಟ್ರದ ನಾಗಪುರದಿಂದ ಬರಲಾಗಿದೆ. ಕೆಂಪು ಮತ್ತು ಬಿಳಿ ಮರಳುಗಲ್ಲನ್ನು ರಾಜಸ್ತಾನದ ಸಮರ್ಥುರಾದಿಂದ ಸಂಗ್ರಹಿಸಲಾಗಿದೆ. ಐತಿಹಾಸಿಕ ಕೆಂಪುಕೋಟೆ ಮತ್ತು ಹುಮಾಯುನ್ ಸಮಾಧಿಗೂ ಸಮರ್ಥುರಾದಿಂದ ಮರಳುಗಲ್ಲನ್ನು ಬಳಸಿಕೊಳ್ಳಲಾಗಿತ್ತು. ಕೇಸರಿಯಾ ಹಸಿರು ಕಲ್ಲನ್ನು ಉದಯ್‌ಪುರದಿಂದ ಕೆಂಪು ಗ್ರಾನೈಟ್ ಅಜ್ಮೀರ್ ಬಳಿಯ ಲಾಖಾದಿಂದ ಮತ್ತು ಬಿಳಿ ಅಮೃತಶಿಲೆಯನ್ನು ರಾಜಸ್ತಾನದಿಂದ ಅಂಬಾಜಿಯಿಂದ ತರಿಸಿ ವಿನೂತನ ರೀತಿಯಲ್ಲಿ ನಿರ್ಮಿಸಿರುವುದು ನೋಡುಗರ ಮನಸೊರೆಗೊಂಡಿದೆ.
ಎಲ್ಲಾ ರಾಜ್ಯಗಳಿಂದ ಒಂದೊಂದು ವಸ್ತುವನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ “ಏಕ್ ಭಾರತ್, ಶ್ರೇಷ್ಠ ಭಾರತ್” ಎಂದು ನೂತನ ಸಂಸತ್ ಭವನಕ್ಕೆ ನಾಮಕರಣ ಮಾಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬಳಸಲಾದ ಸೀಲಿಂಗ್ ಗಳಿಗೆ ಉಕ್ಕಿನ ರಚನೆಯನ್ನು ಕೇಂದ್ರಾಡಳಿತ ಪ್ರದೇಶ ದiನ್ ಮತ್ತು ದಿಯುನಿಂದ ಪಡೆಯಲಾಗಿದ್ದು, ಹೊಸ ಸಂಸತ್ ಭವನದ ಪೀಠೋಪಕರಣಗಳನ್ನು ಮುಂಬೈನಲ್ಲಿ ರಚಿಸಲಾಗಿರುವುದು ಮತ್ತೊಂದು ವಿಶೇಷ.
ಅಶೋಕ್ ಲಾಂಛನ ಸಾಮಾಗ್ರಿಗಳು ಮಹಾರಾಷ್ಟ್ರದ ಔರಂಗ್‌ಬಾದ್ ಮತ್ತು ಮಹಾರಾಷ್ಟ್ರದ ಜೈಪುರದಿಂದ ಬಂದಿದೆ. ಉಭಯ ಸದನಗಳಲ್ಲೂ ಸಭಾಂಗಣಗಳ ಗೋಡೆಗಳ ಮೇಲಿರುವ ಅಶೋಕ್ ಚಕ್ರಗಳನ್ನು ಮಧ್ಯಪ್ರದೇಶದ ಇಂಧೋರ್ ನಿಂದ ತರಲಾಗಿದೆ.