ನೂತನ ಸಂಸತ್ ಭವನಕ್ಕೆ ಸುಪ್ರಿಂ ಅಸ್ತು

ನವದೆಹಲಿ,ಜ.೫- ದೇಶದ ರಾಜಧಾನಿ ದೆಹಲಿಯಲ್ಲಿ ಹೊಸ ಸಂಸತ್ ಭವನ ನಿರ್ಮಾಣದ ವಿಸ್ತ ಯೋಜನೆಗೆ ಸುಪ್ರೀಕೋರ್ಟ್ ಹಸಿರು ನಿಶಾನೆ ತೋರಿದ್ದು, ಈ ಮೂಲಕ ಸಂಸತ್ ಭವನಕ್ಕೆ ಇದ್ದ ಅಡೆತಡೆಗಳು ದೂರವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನೂತನ ಸಂಸತ್ ಭವನ ನಿರ್ಮಾಣದ ವಿಸ್ತ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿ ಇಂದು ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠದ ಇಬ್ಬರು ನ್ಯಾಯಮೂರ್ತಿಗಳು ಹೇಳುವ ಮೂಲಕ ೨;೧ ಅನುಪಾತದ ತೀರ್ಪು ಪ್ರಕಟಿಸಲಾಗಿದೆ, ನ್ಯಾಯಾಲಯ ಸಂಸತ್ ಭವನ ನಿರ್ಮಾಣದ ಕೇಂದ್ರಿಯ ವಿಸ್ತ ಯೋಜನೆಗೆ ಒಪ್ಪಿಗೆ ನೀಡಿದಂತಾಗಿದೆ.
ಡಿಡಿಎ ಕಾಯ್ದೆಯ ಪ್ರಕಾರ ಕೇಂದ್ರದ ಅಧಿಕಾರ ಚಲಾವಣೆ, ನ್ಯಾಯ ಮತ್ತು ಸೂಕ್ತವಾಗಿದೆ. ಕೇಂದ್ರೀಯ ವಿಸ್ತ ಯೋಜನೆಗೆ ಭೂಬಳಕೆಯ ಪರಿವರ್ತನೆಗಳು ಸರಿಯಾಗಿವೆ ಎಂದು ಹೇಳಿರುವ ನ್ಯಾಯಾಲಯ, ಕಟ್ಟಡ ಕಾಮಗಾರಿ ಆರಂಭಕ್ಕೂ ಮುನ್ನಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿ ಪಡೆಯುವಂತೆಯೂ ನಿರ್ದೇಶನ ನೀಡಿದೆ.
ಕೇಂದ್ರೀಯ ವಿಸ್ತ ಯೋಜನೆಗೆ ಕೇಂದ್ರದ ಪರಿಸರ ಖಾತೆ ನೀಡಿರುವ ಅನುಮತಿ ಸೂಕ್ತವಾಗಿದೆ. ಪರಿಸರ ಸ್ನೇಹಿಯಾಗಿ ಈ ಕಟ್ಟದ ನಿರ್ಮಾಣಗೊಳ್ಳಲಿದೆ ಎಂಬುದು ದೃಢಪಟ್ಟಿದೆ. ಹಾಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಡ್ಡಿಯಿಲ್ಲ ಎಂದು ತ್ರಿಸದಸ್ಯ ನ್ಯಾಯಪೀಠ ಹೇಳಿದೆ.
ಕೇಂದ್ರ ಸರ್ಕಾರ ಸ್ವಾತಂತ್ರ್ಯೋತ್ಸವದ ೭೫ನೇ ವರ್ಷಾಚರಣೆ ಅಂದರೆ ೨೦೨೨ಕ್ಕೆ ಅತ್ಯಂತ ಸುಸಜ್ಜಿತ, ವಿಶಾಲ, ಆಕರ್ಷನೀಯ ತ್ರಿಕೋನಾಕಾರದ ೯೦೦ ರಿಂದ ೧,೨೦೦ ಸಂಸದರು ಕೂರುವಷ್ಟು ವಿಶಾಲವಾದ ಸಂಸತ್ ಭವನವನ್ನು ನಿರ್ಮಿಸುವ ಉದ್ದೇಶದಿಂದ ಈ ಕೇಂದ್ರೀಯ ವಿಸ್ತ ಎತ್ತಿ ಕೊಂಡಿತ್ತು.’
ಕಳೆದ ಡಿ ೧೦ ರಂದು ಪ್ರಧಾನಿ ನರೇಂದ್ರಮೋದಿ ಅವರು ನೂತನ ಸಂಸತ್ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.