
ಕಲಬುರಗಿ,ಜು4: ನಗರದ ರಾಮ ಮಂದಿರ ರಿಂಗ್ ರಸ್ತೆಯಲ್ಲಿರುವ ರವೀಂದ್ರನಾಥ ಟ್ಯಾಗೋರ್ ನಗರ (ಆರ್‍ಟಿ ನಗರ) ದಲ್ಲಿರುವ ಉತ್ತರಾದಿ ಮಠದ ನಿವೇಶನದಲ್ಲಿ ನೂತನವಾಗಿ ತೋಡಲಾಗಿರುವ ಶ್ರೀಕರ ತೀರ್ಥ ಬಾವಿಯನ್ನು ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥರು ಇಂದು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಸೋಮವಾರÀ ಶ್ರೀಕರ ತೀರ್ಥ ಕೂಪಶಾಂತಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಸಮಾರಂಭದಲ್ಲಿ ರಘೋತ್ತಮಾಚಾರ್ಯ ಘಂಟಿ, ಲಕ್ಷ್ಮಣಾಚಾರ್ಯ ಗಂಗಾವತಿ, ಶ್ರೀಪಾದಾಚಾರ್ಯರು ಧಾರ್ಮಿಕ ವಿಧಿ ವಿಧಾನಗಳನ್ನೆಲ್ಲ ನೆರವೇರಿಸಿದರು, ಉತ್ತರಾದಿ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ ನೇತೃತ್ವ ವಹಿಸಿದ್ದರು.ಶ್ರೀಕರ ತೀರ್ಥದ ಸೇವಾಕರ್ತರಾದ ನರೇಂದ್ರಾಚಾರ್ಯ ಫಿರೋಜಾಬಾದ್ ಹಾಗೂ ಅನಿತಾ ಫಿರೋಜಾಬಾದ್ ದಂಪತಿಗಳು ಕೂಪ ಶಾಂತಿ ಹಾಗೂ ಗಂಗಾ ಪೂಜೆ ನಿಮಿತ್ತ ನಡೆದಂತಹ ಹೋಮ ಹವನಾದಿಗಳಲ್ಲಿ ಪಾಲ್ಗೊಂಡಿದ್ದರು.ಬಡಾವಣೆಯ ಹಿರಿಯರಾದ ಪದ್ಮಾನಾಭಾಚಾರ್ಯ ಜೋಷಿ, ಶ್ರೀನಿವಾಸ ಸಿರನೂರಕರ್, ಶ್ರೀನಿವಾಸ ಛಾತ್ರಾ, ಮಾಣಿಕರಾವ ಕುಲಕರ್ಣಿ, ಮನೋಹರ ಕುಲಕರ್ಣಿ, ಗಣಪತರಾವ ಕುಲಕರ್ಣಿ, ಶೇಷಮೂರ್ತಿ ಅವಧಾನಿ, ಬಡಾವಣೆಯ ಎಲ್ಲಾ ಸುಮಂಗಲೀಯರಾದ ಅನಿತಾ ಫಿರೋಜಾಬಾದಕರ್, ಆಶಾ ಕುಲಕರ್ಣಿ, ಮೀನಾಕ್ಷಿ ಅವಧಾನಿ, ನಿರ್ಮಲಾ ಕುಲಕಣಿ, ರೇಖಾ ಸಿರನೂರಕರ್, ದೀಪಾ ಕುಲಕರ್ಣಿ, ಶ್ಯಾಮಲಾ ಸೇರಿದಂತೆ ಭಜನಾ ತಂಡಗಳ ಸದಸ್ಯರು, ಅನಂತ ಕಾಮೆಗಾಂವ್ಕರ್ ಸೇರಿದಂತೆ ಅನೇಕರುಪಾಲ್ಗೊಂಡರು.