ನೂತನ ಶಾಸಕ ಮಾನೆಗೆ ಸನ್ಮಾನ


ಲಕ್ಷ್ಮೇಶ್ವರ, ನ 6: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾದ ಶ್ರೀನಿವಾಸ್ ಮಾನೆ ಅವರು ಲಕ್ಷ್ಮೇಶ್ವರ ಪಟ್ಟಣಕ್ಕೆ ಆಗಮಿಸಿ ಮಾಜಿ ಶಾಸಕ ಜಿಎಸ್ ಗಡ್ಡದೇವರಮಠ ಅವರ ನಿವಾಸಕ್ಕೆ ಭೇಟಿ ನೀಡಿದರು.
ಬಳಿಕ ಅವರು ಮುಕ್ತಿಮಂದಿರ ಧರ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಅವರ ಕರ್ತೃಗದ್ದುಗೆ ದರ್ಶನ ಆಶೀರ್ವಾದ ಪಡೆದರು. ನಂತರ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರ ಮುಕ್ತಿ ಮುನಿ ಶಿವಾಚಾರ್ಯರ ಆಶೀರ್ವಾದ ಪಡೆದು ಕೊಂಡರು. ಈ ಸಂದರ್ಭದಲ್ಲಿ ಶ್ರೀಗಳು ನೂತನ ಶಾಸಕ ಶ್ರೀನಿವಾಸ್ ಮಾನೆಯವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಬಳಿಕ ಶಾಸಕರು ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ ಮತ್ತು ದೂದ್ ನಾನಾ ದರ್ಗಾಕ್ಕೆ ಭೇಟಿ ನೀಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ ಲಕ್ಷ್ಮೇಶ್ವರಕ್ಕೆ ತಮಗೂ ಅವಿನಾಭಾವ ಸಂಬಂಧವಿದೆ. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದ ಸಂದರ್ಭದಲ್ಲಿ ಇಲ್ಲಿನ ಪುರಸಭೆಯ ಸರ್ವ ಸದಸ್ಯರು ಮತ್ತು ಶಿರಹಟ್ಟಿ ಪಟ್ಟಣ ಪಂಚಾಯಿತಿ ಸದಸ್ಯರು ತಮ್ಮ ಗೆಲುವಿಗೆ ಕಾರಣರಾಗಿದ್ದರು, ಅಲ್ಲದೆ ಉಪಚುನಾವಣೆಯಲ್ಲಿ ಶಿರಹಟ್ಟಿ ಲಕ್ಷ್ಮೇಶ್ವರದ ಮುಖಂಡರು ಕಾರ್ಯಕರ್ತರು ಮಾಜಿ ಶಾಸಕರು ತಮ್ಮ ಗೆಲುವಿಗಾಗಿ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ ಎಸ್ ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಯುವ ಮುಖಂಡ ಆನಂದ ಗಡ್ಡದೇವರಮಠ, ಎಸ್ಪಿ ಬಳಿಗಾರ, ಚೆನ್ನಪ್ಪ ಜಗಲಿ, ಎಂಎಸ್ ದೊಡ್ಡಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ ಆರ್ ಕೊಪ್ಪದ, ರಾಜು ಕುಂಬಿ, ನಾಗರಾಜ ಮಡಿವಾಳರ, ಬಸವರಾಜ್ ಓದುನವರ್, ಅಣ್ಣಪ್ಪ ರಾಮಗೇರಿ, ವಿರುಪಾಕ್ಷ ನಂದಣ್ಣವರ, ಸಾಹೇಬ್ ಜಾನ್ ಹವಾಲ್ದಾರ್, ರಮೇಶ್ ಬಾರ್ಕಿ, ರಾಜರತ್ನ ಹುಲಗೂರು, ಸೋಮಣ್ಣ ಬೆಟಿಗೇರಿ ಸೇರಿದಂತೆ ಅನೇಕರಿದ್ದರು.