ನೂತನ ಶಾಸಕ ಬಿ.ಆರ್.ಪಾಟೀಲಗೆ ಸನ್ಮಾನ

ಮಾದನಹಿಪ್ಪರಗಿ:ಜೂ.4: ಶುಕ್ರವಾರ ಸ್ಥಳೀಯ ಶಿವಲಿಂಗೇಶ್ವರ ವಿರಕ್ತ ಮಠದಲ್ಲಿ ನೂತನವಾಗಿ ಆಯ್ಕೆಯಾದ ಆಳಂದ ವಿದಾನ ಸಭಾ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲವರಿಗೆ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮಿಗಳು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ತಾಲೂಕಿನಲ್ಲಿ ಕಳೆದ ಐದು ವರ್ಷಗಳಿಂದ ಅಬೀವೃದ್ಧಿ ಕುಂಠಿತ ಗೊಂಡಿದೆ. ಕಳೆದ ನನ್ನ ಅವಧಿಯಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳಲ್ಲಿ ಮುಖ್ಯವಾಗಿ ಬೀಮಾ ನದಿಯಿಂದ ಅಮರ್ಜಾ ಡ್ಯಾಂ ಮತ್ತು ಇತರ ಕೆರೆಗಳಿಗೆ ನೀರು ತುಂಬಿಸಿವ ಕಾರ್ಯ ಮತ್ತು ಅಂತರ್ಜಲ ಹೆಚ್ಚಿಸುವ ಶಿವಪುರಿ ಮಾದರಿಯ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು. ಇದರಿಂದ ರೈತರಿಗೆ ಬಹಳಷ್ಟು ಅನೂಕೂಲವಾಗಲಿದೆ. ಭೀಮಾ ನದಿಯ ನೀರಿನಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಕಳಪೆ ಕಾಮಗಾರಿಗಳ ಬಗ್ಗೆ ಜನ ಪ್ರಶ್ನೆ ಮಾಡಲಿಲ್ಲ. ಹೀಗಾಗಿ ತಾಲೂಕಿನಲ್ಲಿ ಎಲ್ಲಾ ರಸ್ತೆಗಳು ಬಹಳ ಕೆಟ್ಟು ಹೋಗಿವೆ. ಅದನ್ನು ಸರಿಪಡಿಬೇಕಾಗಿದೆ ಎಂದರು. ಶ್ರೀಗಳು ಮಾತನಾಡಿ ದ್ವೇಷ ರಾಜಕಾರಣ ಮಾಡದೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿರಿ ಎಂದು ಆಶೀರ್ವದಿಸಿದರು.

ಮಠದ ಕಾರ್ಯದರ್ಶಿ ಸಿದ್ದರಾಮ ಅರಳಿಮಾರ, ಮಾದನಹಿಪ್ಪರಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣಗೌಡ ಪಾಟೀಲ, ಮುಖಂಡರಾದ ಯುವರಾಜ ಹತ್ತರಕಿ, ಬಸಲಿಂಗಯ್ಯ ಸ್ವಾಮಿ, ಶಿವಾನಂದ ಪಾಟೀಲ, ರಾಹುಲ ಪಾಟೀಲ, ಮಲ್ಲಯ್ಯ ಸ್ವಾಮಿ, ಚೆನ್ನಪ್ಪ ಹಾಲೇನವರ್, ರೇವಪ್ಪ ತೋಳನೂರ, ಮಹಿಬೂಬ್ ಫಣಿಬಂದ್, ಕಾಶಿರಾಯ ಪಾಟೀಲ, ಶಾಂತಮಲ್ಲ ಕೇರೂರ, ಸದಾನಂದ ಮುಲಗೆ, ಮಹಿಬೂಬ್ ಭಾಗವಾನ ಇದ್ದರು.