ಬಾಗಲಕೋಟೆ,ಮೇ29: ಇಲ್ಲಿಯ ಮರಾಠ ಹಿತಚಿಂತಕ ಸಮಿತಿಯ ವತಿಯಿಂದ ನೂತನ ಶಾಸಕರಾದ ಎಚ್ ವಾಯ್ ಮೇಟಿಯವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್ ವಾಯ ಮೇಟಿಯವರು ನನ್ನ ಗೆಲುವಿನಲ್ಲಿ ಮರಾಠ ಸಮಾಜದ ಸಹಾಯ ಸಹಕಾರ ಬಹಳ ಇದೆ ತಮ್ಮ ಸಮಾಜಕ್ಕೆ ನಾನು ಚಿರಋಣಿ ಯಾಗಿದ್ದೇನೆಂದರು.
ಡಾ ಶೇಖರ ಮಾನೆಯವರು ಮಾತನಾಡತ್ತ ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯ ಮಟ್ಟದ ಜಯಂತೋತ್ಸವ ಬಾಗಲಕೋಟೆಯಲ್ಲಿ ಆಚರಿಸಲು ನಿರ್ಧರಿಸಿರುವುದಕ್ಕೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಪುತಳಿ ಸ್ಥಾಪನೆ ಪವಿತ್ರ ಸ್ಥಳದಲ್ಲಿ ಮಾಡುವ ಮೂಲಕ ಗೌರವ ಸಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಆರ್ ಆರ್ ಸೂರ್ಯವಂಶಿ, ಸುದೀರ ಜಾಧವ, ಅಶೋಕ ಘಾಟಗೆ, ಗಣಪತಿ ದುದಾಣಿ, ಸುರೇಶ ಮೋರೆ, ಗಣಪತಸಾ ದಾನಿ, ಆನಂದ ಮಾನೆ, ಕಲ್ಪನಾ ಸಾವಂತ , ನೇತಾಜಿ ಕುರಾಡೆ, ಶಿವಾಜಿ ಪೆÇೀಳ್ , ಮಾರುತಿರಾವ ಶೆಟವಾಜಿ, ಬಾಬು ಅಷ್ಟಕರ , ಸುನಿತಾ ದುದಾಣಿ, ರಾದಾಬಾಯಿ ಶಟವಾಜಿ, ಜಮುನಾ ಕಾಳಬಾರ, ಸುಧಾ ನೆಲವಡೆ ಮುಂತಾದವರು ಪಾಲ್ಗೊಂಡಿದ್ದರು.