ಜೇವರ್ಗಿ:ಜೂ.27: ಜಗದ್ಗುರು ತೋಂಟದಾರ್ಯ ವಿದ್ಯಾಪೀಠ, ಸಮೂಹ ಶಿಕ್ಷಣ ಸಂಸ್ಥೆಗಳು, ಜೇವರ್ಗಿ ವತಿಯಿಂದ ನೂತನವಾಗಿ ಆಯ್ಕೆಯಾದ ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ ಮತ್ತು ಡಾ. ಅಜಯಸಿಂಗ್ ಅವರಿಗೆ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಕಾರ್ಯಕ್ರಮದ ಅದ್ಯಕ್ಷತೆಯನ್ನು ಪೂಜ್ಯ ಶ್ರೀ ಕೋರಣೆÉೀಶ್ವರ ಮಹಾಸ್ವಾಮಿಗಳು ಆಳಂದ ವಹಿಸಿಕೊಂಡಿದ್ದರು, ಪ್ರಜಾಪ್ರಭುತ್ವದಲ್ಲಿ ಶಾಸಕರು ಪ್ರಾಣವಾಯು ಇದ್ದಂತೆ ಎಂದು ಹೇಳಿದರು. ಪ್ರಾಸ್ಥಾವಿಕವಾಗಿ ಶ್ರೀ ಶಿವನಗೌಡ ಪಾಟೀಲ ಹಂಗರಗಿ ಮಾತನಾಡುತ್ತಾ ಈ ಸಂಸ್ಥೆಯ ಬೆಳವಣಿಗೆಗೆ ಎಲ್ಲಾ ರೀತಿಯಿಂದಲೂ ಸಹಕರಿಸಿದ ಮಹನಿಯರನ್ನು ಸ್ಮರಿಸಿದರು ಶಾಸಕರೀರ್ವರು ಈ ಸಂಸ್ಥೆ ಈ ಬಾಗದ ವಿದ್ಯಾರ್ಥಿಗಳಿಗೆ ಕಾಮಧೇನು ಕಲ್ಪವೃಕ್ಷವಾಗಿದೆ. ಸಂಸ್ಥೆಯ ಬೆಳವಣಿಗೆಗಾಗಿ ನಾವು ಎಲ್ಲಾ ರೀತಿಯಿಂದಲು ಸಹಕಾರ ನೀಡುವದಾಗಿ ಹೇಳಿದರು.ಈ ಕಾರ್ಯಕ್ರಮದಲ್ಲಿ ನಾಗಣ್ಣಗೌಡ ಜೈನಾಪುರ, ಅಪ್ಪಣ್ಣಗೌಡ ಹರವಾಳ, ಗೌಡಪ್ಪಾಗೌಡ ಪಾಟೀಲ್, ರಾಜಶೇಖರ ಸೀರಿ, ರಾಯಪ್ಪಾ ಬಾರಿಗಿಡದ, ಅಮರನಾಥ ಪಾಟೀ¯ ಕುಳಗೇರಿ,ಶಮಸೊದ್ದಿನ ಗುಂಡಗುರ್ತಿ,ಸಲಿಮ್ ಕಣ್ಣಿ, ನ್ಯಾಯವಾದಿ ಸಿದ್ದು ಯಂಕಚಿ, ಪ್ರಾಚಾರ್ಯರಾದ ಡಾ.ಸತೀಶಕುಮಾರ ಪಾಟೀಲ, ಕಂಟೆಪ್ಪಾ ಮಾಸ್ಡರ ಹರವಾಳ, ಶರಣಬಸವ ಕಲ್ಲಾ, ಸ್ಥಳೀಯ ಆಡಳಿತ ಮಂಡಳಿ ಪದಾದಿಕಾರಿಗಳು ಮತ್ತು ಸದಸ್ಯರು ಜ.ತೊ.ವಿ.ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಪ್ರ-ಶಿಕ್ಷಣಾರ್ಥಿಯಾದ ಸಾವಿತ್ರಿ ಪ್ರಾರ್ಥನೆ ಗೈದರು ಶಿಕ್ಷಕಿ ಸುನಂದಾ ಕಲ್ಲಾ ಸ್ವಾಗತಿಸಿದರು, ಉಪನ್ಯಾಸಕರಾದ ಎಸ್ ಬಿ ಮಮದಾಪೂರ ನಿರೂಪಿಸಿ, ವಂದಿಸಿದರು.