ನೂತನ ಶಾಸಕರಿಗೆ ಅನೇಕ ಸವಾಲು

ಹಳ್ಳ ಹಿಡಿದ ನೀರಾವರಿ ಯೋಜನೆಗಳು ಜಾರಿಯಾಗುವವೇ.?
ದುರುಗಪ್ಪ ಹೊಸಮನಿ
ಲಿಂಗಸುಗೂರ,ಮೇ.೧೯- ಮೀಸಲು ಕ್ಷೇತ್ರದಿಂದ ಮೂರನೆ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಾನಪ್ಪ ಡಿ.ವಜ್ಜಲ್ ಚುನಾವಣೆ ಸಮಯದಲ್ಲಿ ಎಲ್ಲಾಕಡೆ ವಾಗ್ದಾನ ಮಾಡಿದಂತೆ ಕ್ಷೇತ್ರದ ೨ ಸಾವಿರ ಮಹಿಳೆಯರಿಗೆ ತಾವೂ ಶಾಸಕನಾದರೆ ಉದ್ಯೋಗ ಒದಗಿಸುವದಲ್ಲದೆ ಹಲವಾರು ಏತ ನೀರಾವರಿ ಜಾರಿಗೆ ಬದ್ಧರಾಗಿರುವರೆಂಬದು ಮತದಾರರ ಆಸೆ ಈಡೇರುವದೆ ಕಾಯ್ದು ನೋಡಬೇಕಾಗಿದೆ. ಚುನಾವಣೆ ಸಮಯದಲ್ಲಿ ಶಾಸಕ ಮಾನಪ್ಪ ವಜ್ಜಲ್ ಲಿಂಗಸುಗೂರ ಕ್ಷೇತ್ರದಲ್ಲಿ ಗಾರ್ಮೆಂಟ: ಫ್ಯಾಕ್ಟರಿ ಆರಂಭಿಸಿ ತಾಲೂಕಿನ ಕನಿಷ್ಠ ೨ ಸಾವಿರ ಬಡ ಮಹಿಳೆಯ ರಿಗೆ ಉದ್ಯೋಗ ಕಲ್ಪಿಸುವ ಭರವಸೆ ನೀಡಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಹಿರಿಯ ಮುಖಂಡ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಾಗ ಮಾನಪ್ಪವಜ್ಜಲ್ ಶಾಸಕರಾಗಿ ಆಯ್ಕೆಯಾದರೆ ಗಾರ್ಮೆಂಟ ಅಲ್ಲದೆ ಕೈಗಾರಿಕೆ ಉದ್ಯಮ ವಲಯ ಸ್ಥಾಪನೆ ಮಾಡಲು ಪ್ರಚಾರ ಸಂದರ್ಭದಲ್ಲಿ ಹೇಳಿದ್ದು ಜನರು ಮರೆತಿಲ್ಲ ಎನ್ನುವುದು ಶಾಸಕರಿಗೆ ದೊಡ್ಡ ಸವಾಲಾಗಿದೆ ಕೂಡಲೇ ಶಾಸಕ ಮಾನಪ್ಪ ಡಿ ವಜ್ಜಲ್ ರವರು ಕೈಗಾರಿಕಾ ಉದ್ಯಮ ತಂದು ನಿರುದ್ಯೋಗ ಯುವಕ ಯುವತಿಯರ ಕೈಗಳಿಗೆ ಕೆಲಸ ಕೊಡಲು ಮುಂದಾಗುವುರೆ ಕ್ಷೇತ್ರದ ಜನರು ಕಾತರದಿಂದ ಕಾಯುತ್ತಿದ್ದಾರೆ.
ನಿರುದ್ಯೋಗಿ ಯುವಕರಿಗೆ ಕೈಗಾರಿಕಾ ಫ್ಯಾಕ್ಟರಿ ತರಲು ವಜ್ಜಲ್ ಮುಂದಾಗುವುರೆ ?
ಲಿಂಗಸುಗೂರು ತಾಲ್ಲೂಕಿನ ನಿರುದ್ಯೋಗ ಯುವಕರಿಗೆ ಕೈಗಾರಿಕಾ ಉದ್ಯಮ ತರಲು ಹಾಲಿ ಶಾಸಕ ಮಾನಪ್ಪ ಡಿ ವಜ್ಜಲ್ ಶಾಸಕರು ಮುಂದಾಗುವರೆ? ಎಂಬ ಪ್ರಶ್ನೆ ಉದ್ಭವಿಸಿದೆ
ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಅನೇಕ ಸವಾಲುಗಳು ಮುಂದಿವೆ ಈಗಾಗಲೇ ಕಳೆದ ಹದಿನೈದು ವರ್ಷಗಳಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ನಿರುದ್ಯೋಗ ನಿವಾರಣೆಗೆ ಯಾವುದೇ ರೀತಿಯ ಕೆಲಸ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ ಆದರೆ ಈ ಬಾರಿ ಹಾಲಿ ಶಾಸಕ ಮಾನಪ್ಪ ಡಿ ವಜ್ಜಲ್ ರವರು ವಿರೋಧ ಪಕ್ಷದ ನಾಯಕರಿಗೆ ಆಹಾರ ವಾಗದಂತೆ ಕ್ಷೇತ್ರದಲ್ಲಿ ಕೈಗಾರಿಕಾ ಉದ್ಯಮ ವಲಯ ಸ್ಥಾಪನೆ ಮಾಡಿ ನಿರುದ್ಯೋಗ ನಿವಾರಣೆಗೆ ಮುಂದಾಗಬೇಕು ಎಂದು ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ.
ತಾಲ್ಲೂಕಿನ ಜನರಿಗೆ ಮೂಲಭೂತ ಅಭಿವೃದ್ಧಿ ಯೋಜನೆಗಳು ಶೀಘ್ರದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಅಭಿವೃದ್ಧಿಗೆ ಚಾಲನೆ ನೀಡಬೇಕು ಎಂಬುದು ಆಗ್ರಹವಾಗಿದೆ .
ನೂತನ ಶಾಸಕರು ನಗರ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಹಟ್ಟಿ ಮುದಗಲ್ ಲಿಂಗಸುಗೂರು ನಗರದ ಜನತೆಗೆ ಕುಡಿಯುವ ನೀರು ಕೊಡಲು ಶಾಸಕರು ಕೆಲಸ ಮಾಡಲು ಹೆಚ್ಚಿನ ಆದ್ಯತೆ ನೀಡಲು ಮುಂದಾಗಬೇಕು ಎಂಬುದು ಜನರು ಮಾತನಾಡುತ್ತಿದ್ದಾರೆ
ಮಾನಪ್ಪವಜ್ಜಲ ಹಟ್ಟಿ ಚಿನ್ನದಗಣಿ ಅಧ್ಯಕ್ಷರಾಗಿ ಎಷ್ಟು ಜನರಿಗೆ ಉದ್ಯೋಗ ಕಲ್ಪಿಸಿದರು ಹಾಗೂ ಕ್ಷೇತ್ರದ ನೀರಾವರಿ ವಂಚಿತ ಪ್ರದೇಶಗಳಿಗೆ ಸಮರ್ಪಕ ನೀರು ಒದಗಿಸಲು ಹೊಸದಾಗಿ ನಾಲ್ಕು ಏತ ನೀರಾವರಿ ಯೋಜನೆಗೆ ಸರಕಾರಕ್ಕೆ ನೀಲಿ ನಕ್ಷೆ ಕ್ರಮಕೈಗೊಳ್ಳಬೇಕು. ಪ್ರಸ್ತಾವನೆ ಸಲ್ಲಿಸಿರುವದಾಗಿ ಸಂಜೆ ವಾಣಿ ಪತ್ರಿಕೆಗೆ ಮಾಹಿತಿ ತಿಳಿದು ಬಂದಿದೆ ಈ ಭಾಗದ ಆರಾಧ್ಯ ದೈವವಾದ ಅಮರೇಶ್ವರ ಏತ ನೀರಾವರಿ ಯೋಜನೆ ಒಂದಾಗಿದ್ದು ನೀರಾವರಿ ಹರಿಕಾರನೆಂದು ಬಿಂಬಿಸುತ್ತಿರುವ ರೀತಿಯಲ್ಲಿ ಶಾಸಕ ಮಾನಪ್ಪ ವಜ್ಜಲ್ ಸ್ಥಗಿತಗೊಂಡಿರುವ ನಂದವಾಡಗಿ ಏತ ನೀರಾವರಿ ಹನಿಯೋ ಅಥವಾ ಹರಿ ನೀರಾವರಿ ಆರಂಭಿಸುತ್ತಾರೆ ಇಲ್ಲವೋ ಕ್ಷೇತ್ರದ ರೈತರು ಕೃಷಿ ಕೂಲಿಕಾರರು ಸಾರ್ವಜನಿಕರು ಕಾದುನೋಡಬೇಕಾಗಿದೆ?
ಕ್ಷೇತ್ರದ ಹಟ್ಟಿ ಮುದಗಲ್ ಲಿಂಗಸುಗೂರ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ದವಾಗಿದ್ದು ಮಹುಳೆಯರು ವೃದ್ಧರು ಬಾಲಕರು ಹಗಲಿರಳೂ ನೀರಿಗಾಗಿ ಪರದಾಡುವ ಸ್ಥಿತಿಗೆ ಪೂರ್ಣ ವಿರಾಮ ಹಾಕಿ ಸಮಯಕ್ಕೆ ಸರಿಯಾಗಿ ನೀರು ಪೂರೈಕೆಯಾಗಲು ನೂತನ ಶಾಸಕರು ಕೆಲಸ ಮಾಡಲು ಮುಂದಾಗಬೇಕು.
ಕ್ಷೇತ್ರದ ವ್ಯಾಪ್ತಿಯ ದೇವನಹಳ್ಳಿ ಕೆರೆ ಯಿಂದ ಸಂತೆಕೆಲ್ಲೂರ ವರೆಗೆ ರಾಷ್ಟ್ರೀಯ ಹೇದ್ದಾರಿ ೧೮೫ ಕೋಟಿರೂ ದ್ವಿಪಥ ರಸ್ತೆ ಕಾಮಗಾರಿ- ಕಳಪೆ ಮಟ್ಟದಲ್ಲಿ ನಡೆಯುತ್ತಿದ್ದು ಶಾಸಕ ಮಾನಪ್ಪ ವಜ್ಜಲ್ ಸಮಸ್ಯೆಗಳತ್ತ ನಿಗಾವಹಿಸಿ ಅಭಿವೃದ್ಧಿ ಗುಣಮಟ್ಟ ಪಟ್ಟಣಗಳ ಸಮಸ್ಯೆಗಳತ್ತ ಗಮನ ಹರಿಸುವದು ಅತ್ಯಅವಶ್ಯಕವಾಗಿದೆ. ಎಂಬುದು ಜನರ ಅಭಿಪ್ರಾಯ ವಾಗಿದೆ.