ನೂತನ ಶಾಸಕರಿಗಿದೆ ಅಭಿವೃದ್ಧಿ ಕೆಲಸಗಳ ಜವಾಬ್ದಾರಿ

ಕೋಲಾರ,ಮೇ,೧೭:ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಎತ್ತಿನ ಹೊಳೆ ಕುಡಿಯುವ ನೀರು, ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ದೀಕರಣ, ಯರ್‌ಗೋಳ್ ಯೋಜನೆಗೆ ಚಾಲನೆ, ಕೋಲಾರ ನಗರದಲ್ಲಿ ಸಂಚಾರದ ಒತ್ತಡ ನಿಯಂತ್ರಿಸಲು ರಿಂಗ್ ರಸ್ತೆ, ಕೈಗಾರಿಕೆಗಳ ಪಾರ್ಕ್ ಮಾಡುವ ಮೂಲಕ ನಿರುದ್ಯೋಗ ನಿವಾರಣೆ, ಪ್ರಮುಖ ಐತಿಹಾಸಿಕ ಸ್ಥಳಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡೆಸುವಂತ ಜವಾಬ್ದಾರಿಯೂ ನೂತನವಾಗಿ ಆಯ್ಕೆಯಾಗಿರುವಂತ ಶಾಸಕರ ಜವಾಬ್ದಾರಿಯಾಗಿದೆ ಎಂಬುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.


ಇದರ ಜೂತೆಗೆ ಸರ್ಕಾರವು ನೀಡಿರುವಂತ ಗ್ಯಾರೆಂಟಿ ಕಾರ್ಡಿನ ಎಲ್ಲಾ ಭರವಸೆಗಳನ್ನು ಈಡೇರಿಸುವುದು ಸಹ ಸರ್ಕಾರದ ಜವಾಬ್ದಾರಿಯಾಗಿದೆ. ಬಡ ಜನತೆ ಮತ್ತು ಸಾಮಾನ್ಯ ಜನತೆ ಕಾಂಗ್ರೇಸ್ ಸರ್ಕಾರದ ಮೇಲೆ ವಿಶ್ವಾಸ ಇಟ್ಟು ಬಹುಮತದಿಂದ ಆಯ್ಕೆ ಮಾಡಿ ಆಡಳತಿ ಚುಕ್ಕಾಣಿ ನೀಡಿರುವುದನ್ನು ಸದ್ಬಳಿಸಿ ಕೊಂಡು ಮತದಾರರ ಪ್ರಭುಗಳ ನಂಬಿಕೆಯನ್ನು ಉಳಿಸಿ ಕೊಳ್ಳಬೇಕಾಗಿದೆ ಎಂದು ಆಶಿಸಿದ್ದಾರೆ.
೨೦ ದಿನಗಳಲ್ಲಿ ಅನಿರೀಕ್ಷಿತವಾಗಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಟ್ಟು ಬಹಿರಂಗವಾಗಿ ನಡೆದ ಗದ್ದುಗಾಗಿ ಗುದ್ದಾಟದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಅವರು ತಮ್ಮ ದಮ್ಮು ತಾಕತ್ತಿನ ಬಗ್ಗೆ ಬಹಿರಂಗ ಪಡೆಸಿದ್ದಲ್ಲದೆ ವಿಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲೂ ತಮ್ಮ ತಾಕತ್ತಿನ ಪರಿಚಯವನ್ನು ಮಾಡುವುದಾಗಿ ಸವಾಲ್ ಹಾಕಿ ಅದರಂತೆ ತಮ್ಮ ಸವಾಲ್‌ನ್ನು ಸಾಧಿಸಿ ತೋರಿಸಿರವುದನ್ನು ಸ್ವಾಗತಿಸಿದ್ದಾರೆ.
ಅದೇ ರೀತಿ ಸಾರ್ವಜನಿಕರ ಸೌಲಭ್ಯಗಳಿಗೆ ಸರ್ಕಾರದ ಅನುದಾನಕ್ಕೆ ಕಾಯದೆ ೫೦೦ ಕೋಟಿ ವೆಚ್ಚದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಿ ಅಭಿವೃದ್ದಿ ಪಡೆಸುವುದಾಗಿ ನೀಡಿದ ಭರವಸೆಯನ್ನು ನೆನಪಿನಲ್ಲಿಟ್ಟು ಕೊಂಡು ತಮ್ಮ ಆಡಳಿತವಧಿ ಪೂರ್ಣಗೊಳ್ಳುವ ಮೊದಲು ಭರವಸೆಗಳನ್ನು ಈಡೇರಿಸುವ ಮೂಲಕ ಮಾತಿಗೆ ತಪ್ಪದ ಶಾಸಕ ಎಂಬ ಕೀರ್ತಿಗೆ ಪಾತ್ರರಾಗಲಿ ಎಂದು ಸಲಹೆ ನೀಡಿದ್ದಾರೆ.
ಈ ಎಲ್ಲಾ ಭರವಸೆಗಳಿಗೆ ಕೊತ್ತೂರು ಮಂಜುನಾಥ್ ಅವರನ್ನು ಕ್ಷೇತ್ರಕ್ಕೆ ಪರಿಚಯಿಸಿ ಚುನಾವಣೆಯಲ್ಲಿ ಮತದಾರರ ಪ್ರಭುಗಳ ವಿಶ್ವಾಸಗಳಿಸುವಲ್ಲಿ ಯಶಸ್ಸಿಯಾಗುವಂತೆ ಮಾಡಿದ ಜೋಡೆತ್ತುಗಳಾದ ನಸ್ಸೀರ್ ಆಹಮದ್ ಮತ್ತು ಅನಿಲ್ ಕುಮಾರ್ ಅವರುಗಳೇ ಸಾಕ್ಷಿದಾರರಾಗಿದ್ದಾರೆ. ಅದೇ ರೀತಿ ಕೋಲಾರದ ಅಭಿವೃದ್ದಿಗೆ ಶಾಸಕ ಕೊತ್ತೂರು ಮಂಜುನಾಥ್ ಅವರ ಪ್ರಯತ್ನಕ್ಕೆ ಹೆಗಲು ನೀಡುವಂತ ಕೆಲಸವನ್ನು ಮಾಡ ಬೇಕಾಗಿರುವುದು ವಿಧಾನ ಪರಿಷತ್ ಸದಸ್ಯರಾದ ಅವರ ಜವಾಬ್ದಾರಿಯ ಪಾತ್ರವು ಇದೆ ಎಂಬುವುದನ್ನು ಮರೆಯುವಂತಿಲ್ಲ ಎಂಬುವುದು ಪ್ರಜ್ಞಾವಂತರ ಮಾರ್ಗದರ್ಶನವಾಗಿದೆ.