ನೂತನ ಶಾಲಾ ಕೊಠಡಿ ಶಾಸಕರಿಂದ ಭೂಮಿ ಪೂಜೆ

ರಾಯಚೂರು,ಮಾ.೨೫- ತಾಲೂಕಿನ ಗಂಜಹಳ್ಳಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ ನೂತನ ೪ ಶಾಲಾ ಕೊಠಡಿಗಳಿಗೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಭೂಮಿ ಪೂಜೆ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ಭೀಮಣ್ಣಗೌಡ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹನುಮಂತ ಲಕ್ಷ್ಮಿ, ಸದಸ್ಯ ಜಿ. ಎಲ್ ಆನಂದ, ಶಾಲೆಯ ಮುಖ್ಯಗುರುಗಳು ಮಲ್ಲಿಕಾರ್ಜುನ, ಅಕ್ಬರ್ ಹುಸೇನ್, ಗ್ರಾಮದ ಮುಖಂಡರು, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.