ನೂತನ ವಿವಿ: ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ದಸಾಪ ಒತ್ತಾಯ

ರಾಯಚೂರು,ಡಿ.೨೮- ನೂತನ ರಾಯಚೂರು ವಿಶ್ವ ವಿದ್ಯಾಲಯದಲ್ಲಿ ಗುಣಮಟ್ಟಕ್ಕೆ ಮಹತ್ವ ನೀಡಿ ಜಾಗತಿಕ ಸವಾಲುಗಳನ್ನು ಎದುರಿಸುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕೆಂದು ದಲಿತ ಸಾಹಿತ್ಯ ಪರಿಷತ್ತು ರಾಯಚೂರು ವಿವಿ ಕುಲಪತಿಯವರಿಗೆ ಮನವಿ ಸಲ್ಲಿಸಿದೆ.
ಪ್ರಪಂಚದಲ್ಲಿ ಅತಿ ದೊಡ್ಡ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದ ದೇಶದಲ್ಲಿ ಸಾವಿರಾರು ಸಮಸ್ಯೆಗಳು ಪ್ರತಿನಿತ್ಯವು ತಾಂಡವಾಡುತ್ತಿವೆ. ಈ ಎಲ್ಲಾ ಸಾಮಾಜಿಕ ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವ ಹಿನ್ನೆಲೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಶಿಕ್ಷಣ ಸಂಘಟನೆ ಹೋರಾಟ ಎಂಬ ಮುತ್ತಿನಂತಹ ಮೂರು ಸೂತ್ರಗಳನ್ನು ನೀಡಿದ್ದಾರೆ. ಶಿಕ್ಷಣದಿಂದ ಮಾತ್ರ ಮನುಕುಲದ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂಬ ಅಪಾರವಾದ ನಂಬಿಕೆಯಿದ್ದು, ಈ ದಿಶೆಯಲ್ಲಿ ಇತ್ತೀಚಿಗೆ ರಾಜ್ಯ ಸರ್ಕಾರವು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಸೇರಿಸಿ ಹೊಸ ವಿಶ್ವವಿದ್ಯಾಲಯನ್ನಾಗಿ ಘೋಷಿಸಿದೆ. ಪ್ರಪಂಚ ರಾಷ್ಟ್ರಗಳಲ್ಲಿ ಭಾರತವು ಮೂರನೆಯ ಅತೀ ದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ. ( ಅಮೆರಿಕ ಮೊದಲನೆಯ ಸ್ಥಾನ , ಚೈನಾ ಎರಡನೇಯ ಸ್ಥಾನ ) ಆದರೆ ಇತ್ತೀಚಿನ ವರದಿಯ ಪ್ರಕಾರ ಪ್ರಪಂಚದ ಶ್ರೇಷ್ಠ ೧೦೦ ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೂ ವಿಶ್ವವಿದ್ಯಾಲಯದ ಹೆಸರು ಇರುವುದಿಲ್ಲ. ಇದು ಗುಣಮಟ್ಟದ ಕೊರತೆಯನ್ನು ಸೂಚಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯವು ಗುಣಮಟ್ಟಕ್ಕೆ ಮಹತ್ವ ನೀಡುತ್ತಾ ಜಾಗತಿಕ ಸವಾಲುಗಳನ್ನು ಎದುರಿಸುತ್ತಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಒಟ್ಟು ದಾಖಲಾಡಿ ಅನುಪಾತವು ( ಉಡಿoss ಇಟಿಡಿoಟಟmeಟಿಣ ಖಚಿಣio ) ಶೇ ೨೬ ಇದೆ. ಕರ್ನಾಟಕದ ಅನುಪಾತವು ೨೮ ರಷ್ಟು ಇದೆ. ಆದರೆ ರಾಷ್ಟ್ರದಾಂತ ಎಸ್.ಸಿ, ಎಸ್.ಟಿ ಅನುಪಾತವು ಉನ್ನತ ಶಿಕ್ಷಣದಲ್ಲಿ ಕೇವಲ ೧೫-೨೦ ರಷ್ಟು ಇದೆ . ಇದನ್ನು ” ರಾಷ್ಟ್ರೀಯ ಶಿಕ್ಷಣ ನೀತಿ -೨೦೨೦ ರ ಪ್ರಕಾರ ಶೇ ೫೦ ಕ್ಕೆ ಏರಿಸಲೇಬೇಕಾದ ಗುರಿ ಹೊಂದಲಾಗಿದೆ.
ರಾಯಚೂರು ವಿಶ್ವವಿದ್ಯಾಲಯವು ರಾಯಚೂರು ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಈ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಕೂಡ ಸರಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾಗಿಲ್ಲ. ಇದು ಈ ಪ್ರದೇಶದ ಶೈಕ್ಷಣಿಕ ಹಿಂದುಳಿಯುವಿಕೆಗೆ ಪ್ರಮುಖ ಸಾಕ್ಷಿಯಾಗಿದೆ. ತುರ್ತುಗಿ ಜಲ್ಲೆಯ ಪ್ರತಿ ಜಿಲ್ಲಾ ಪಂಚಾಯತಿ ಕೇಂದ್ರ ಸ್ಥಾನಕ್ಕೊಂದು ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಸ್ಥಾಪಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
ಈ ನೂತನ ವಿಶ್ವವಿದ್ಯಾಲಯಕ್ಕೆ ಮನುಕುಲದ ವಿಕಾಸಕ್ಕಾಗಿ ಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರ್ ಎಂದು ನಾಮಕರಣ ಮಾಡಬೇಕು. ಅಲ್ಲದೆ ಈ ಮಹಾನ್ ವ್ಯಕ್ತಿಗಳ ಹೆಸರಲ್ಲಿ ಅಧ್ಯಯನ ಪೀಠಗಳನ್ನು ಆರಂಭಿಸಬೇಕು. ಉನ್ನತ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಲು ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜಗಳಿಗೆ ಸೂಚಿಸಬೇಕು.
ಈ ಪ್ರದೇಶದ ಸಾಮಾಜಿಕ, ಆರ್ಥಿಕ, ಹಿಂದುಳಿಯುವಿಕೆಗೆ ಕಾರಣವಾದ ಅಂಶಗಳ ಕುರಿತು ಸಂಶೋಧನೆಯನ್ನು ನಡೆಸಿ ಕಾಲ ಕಾಲಕ್ಕೆ ಸರಕಾರದ ಗಮನಸೆಳೆಯಬೇಕು ಹಾಗೂ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಬೇಕು. ಉದ್ಯೋಗ ಆಧಾರಿತ, ವೃತ್ತಿ ಪರ ಶಿಕ್ಷಣದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಬೇಕು. ವಿಶೇಷವಾಗಿ Pಉ iಟಿ ಖuಡಿಚಿಟ ಆeveಟoಠಿmeಟಿಣ, Pಉ iಟಿ ಂgಡಿiಛಿuಟಣuಡಿಚಿಟ Pಡಿoಜuಛಿe ಒಚಿಡಿಞeಣiಟಿg. ಈ ಪ್ರದೇಶದಲ್ಲಿ ಜಗಜ್ಯೋತಿ ಬಸವೇಶ್ವರ ಪ್ರಭಾವದಿಂದ ಸುಮಾರು ಶರಣರು, ದಾಸರು ಆಗಿ ಹೋಗಿದ್ದಾರೆ. ಅವರೆಲ್ಲರ ಕುಲತು ಆಡಯನ ಮಾಡಲು ತತ್ವಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಆರಂಭಿಸಬೇಕು. ಬೆಳೆಯುತ್ತಿರುವ ತಂತ್ರಜ್ಞಾನ- ಜ್ಞಾನ ಆರ್ಥಿಕತೆಗೆ ಹೊಂದಿಕೊಳ್ಳುವ ವಿನೂತವಾದ ಕೋರ್ಸ್‌ಗಳನ್ನು ಕಾಲ ಕಾಲಕ್ಕೆ ಆರಂಭಿಸುತ್ತಾ ಸರ್ವಾಂಗೀಣ ಕಲಿಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಅವರು ಒತ್ತಾಯಿಸಿದ್ದಾರೆ.
ದಸಂಸ ಮುಖಂಡ ಶರಣಪ್ಪ ದಿನ್ನಿ, ಎಂ.ಆರ್.ಭೇರಿ, ತಾಯರಾಜ್ ಮರ್ಚಟ್ಹಾಳ್, ಕರಿಗೂಳಿ ಸುಂಕೇಶ್ವರ, ನರಸಿಂಹಲು ಗಧಾರ, ಜೆ.ಎಂ.ವಿರೇಶ, ಒಡೆಯರಾಜ್ ಅರೋಲಿ, ರಮೇಶರೆಡ್ಡಿ, ಜೆ.ಈರಣ್ಣ ವಕೀಲ, ಭೀಮೇಶ ವಕೀಲ ಉಪಸ್ಥಿತರಿದ್ದರು.