
ಬೀದರ:ಜು.22:ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಒಡಿಶಾ ರಾಜ್ಯದಲ್ಲಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರ ಜೀವನ ಆದರ್ಶಮಯವಾದ್ದು, ಮಹಿಳಾ ರಾಷ್ಟ್ರಪತಿಯಾಗಿ ದೇಶವನ್ನು ಉನ್ನತ ದಿಕ್ಕಿನಲ್ಲಿ ಕೊಂಡೊಯ್ಯಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ರಾಜಕೀಯ ಪ್ರವೇಶಿಸುವ ಮುನ್ನ ಸಹಾಯಕ ಪೆÇ್ರಫೆಸರ್, ಒಡಿಶಾ ರಾಜ್ಯದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಒಡಿಶಾ ರಾಜ್ಯದ ರಾಯರಂಗಪುರದ ಜಿಲ್ಲೆಯಲ್ಲಿ ಕೌನ್ಸಲರ್ ಆಗಿ ರಾಜಕೀಯ ಜೀವನವನ್ನು ಆರಂಭಿಸಿದ ಮುರ್ಮು ಅವರು ಶಾಸಕರಾಗಿ, ಸಚಿವರಾಗಿ ರಾಜ್ಯಪಾಲರಾಗಿ ನೀಡಿರುವ ಸೇವೆ ಅನನ್ಯವಾದದ್ದು. ಇದೀಗ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು, ದೇಶಕ್ಕೆ ಉತ್ತಮ ಸೇವೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.