ನೂತನ ರಾಜ್ಯ ರೈತರ ಸಂಘ ಹಸಿರು ಸೇನೆಯ ಆರಂಭ. ನಾಳೆ ಪದಗ್ರಹಣ


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.27: ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ನೂತನ ರಾಜ್ಯದ ಘಟಕ ಉದ್ಘಾಟನೆಯಾಗಲಿದೆ ಎಂದು
ಕಾರ್ಯಾಧ್ಯಕ್ಷ ಜೆ.ಕಾರ್ತೀಕ ತಿಳಿಸಿದರು.
ಈ ಕುರಿತು ಹೊಸಪೇಟೆಯ ಪತ್ರಿಕಾಭವನದಲ್ಲಿ‌ ಸುದ್ಧಿಗಾರರೊಂದಿಗೆ ಮಾತನಾಡಿ ನಾಳೆ ಹೊಸಪೇಟೆಯ ಬುದ್ಧ, ಬಸವ ಅಂಬೇಡ್ಕರ್ ಸಭಾ ಭವನದಲ್ಲಿ ನೂತನ ಸಂಘ ಉದ್ಘಾಟನೆಯಾಗಲಿದೆ ಎಂದರು.
ಬಹುತೇಕ ಬೆಂಗಳೂರು ಕೇಂದ್ರೀಕೃತವಾಗಿ  ರಾಜ್ಯ ಘಟಕಗಳು ರಚನೆಯಾಗುತ್ತವೆ, ಇದರಿಂದ ರಾಜ್ಯದ ರೈತರ ಹಿತಕಾಪಾಡಲು ಸಾಧ್ಯವಿಲ್ಲಾ ಈ ಹಿನ್ನೆಲೆಯಲ್ಲಿಯೇ ನಾವು ಸ್ಥಳೀಯ ವ್ಯವಸ್ಥೆಯನ್ನು ಪ್ರಧಾನವಾಗಿಯೇ ಜಿಲ್ಲಾ ಘಟಕಗಳು ಕೆಲಸ ನಿರ್ವಹಿಸಲು ಅನುವು ಆಗುವಂತೆ ರಚಿಸಲಾಗಿದೆ
ಮಾಲತೇಶ ಪೂಜಾರ್ ನೇತ್ರತ್ವದಲ್ಲಿ ಎಂ.ಪಿ.ಕೊಟ್ರೇಶ ರಾಜ್ಯ ಕಾರ್ಯದರ್ಶಿಯಾಗಿ ನಾವು ಉತ್ತರ ಕರ್ನಾಟಕದಲ್ಲಿ ದೊಡ್ಡ ನೀರಾವರಿ ಯೋಜನೆಗಳಿದ್ದು ಅವುಗಳನ್ನು ರಚನಾತ್ಮಕವಾಗಿ ಕಾರ್ಯನಿರ್ವಸುವಂತೆ ಮಾಡಲು ಕೆಲಸ ಮಾಡುವುದಾಗಿ ತಿಳಿಸಿದರು.
@12bc = ಆಗ್ರಹ
1ಲಕ್ಷ ಟನ್ ಸಾಮರ್ಥ್ಯದ ರಸಗೊಬ್ಬರ ದಾಸ್ತಾನು ಮಳಿಗೆಯಾಗಬೇಕು. ಬರಗಾಲ ಘೋಷಣೆಯಾದರೆ ಸಾಲದು ಪರಿಹಾರ ಬಿಡುಗಡೆಯಾಗಬೇಕು, ಪಾಪಿನಾಯಕನಹಳ್ಳಿ ಏತ ನೀರಾವರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು, ರಪ್ತು ವ್ಯವಹಾರಕ್ಕೆ ಕೇಂದ್ರ ವಿಧಿಸಿದ ತೆರಿಗೆ40% ತೆಗೆದುಹಾಕಬೇಕು ಎಂದು ಸಂಘ ಒತ್ತಾಯಿಸಿದರು.
ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾಗಬೇಕು ಎಂದು ಆಗ್ರಹಿಸಿದರು.
ವಿಜಯನಗರ ಜಿಲಾ ಘಟಕ:
ಬಸವರಾಜ ನೆಲ್ಲುಕುದುರೆ(ಗೌರವಾಧ್ಯಕ್ಷ)ಜೆ.ಎನ್. ಕಾಳಿದಾಸ(ಅಧ್ಯಕ್ಷರು), ಜೆ.ನಾಗರ ಸನ್ ಕಾಳಘಟ್ಟ ಶಿವಪ್ರಕಾಶಗೌಡ(ಉಪಾಧ್ಯಕ್ಷ),
ಟ.ಆರ್.ಅರವಿಂದ(ಪ್ರಧಾನ ಕಾರ್ಯದರ್ಶಿ),
ಎಂ.ಜಿ, ಮಂಜುನಾಥ(ಕಾರ್ಯದರ್ಶಿ), ಕೆ.ಹೇಮರೆಡ್ಡಿ, ಕಾಟೇರ್ ರಮೇಶ (ಸಂಚಾಲಕರು), ಮೂಗಪ್ಪ ಬಣಗಾರ (ಸಂಘಟನಾ ಕಾರ್ಯದರ್ಶಿ)
ಹೊಸಪೇಟೆ ತಾಲೂಕು ಘಟಕಕ್ಕೆ ಹೆಚ್. ಜಿ.ಮಲ್ಲಿಕಾರ್ಜುನ,  ನಗರ ಘಟಕಕ್ಕೆ ಕೆ.ಹುಲಗಪ್ಪ  ನೇತ್ರತ್ವದಲ್ಲಿ ನೂತನ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ತಿಳಿಸಿದರು.

One attachment • Scanned by Gmail