ನೂತನ ಮೂರ್ತಿ ಪ್ರತಿಷ್ಠಾಪನೆ, ಜಾತ್ರಾ ಮಹೋತ್ಸವ


ಮುನವಳ್ಳಿ,ಮಾ.2: ಯಕ್ಕೇರಿ ಶ್ರೀ ವರವಿ ಕನಕ ಮಹಾಲಕ್ಷ್ಮೀದೇವಿ ದೇವಸ್ಥಾನದ ನೂತನ ಮೂರ್ತಿ ಪ್ರತಿಷ್ಠಾಪನಾ ಹಾಗೂ 4 ನೇ ವಾರ್ಷಿಕ ಜಾತ್ರಾ ಮಹೋತ್ಸವ ಮಾ.1 ರಿಂದ ಪ್ರಾರಂಭವಾಗಿದೆ
ಸಾನಿಧ್ಯ ಶ್ರೀ ಸೋಮಶೇಖರಮಠದ ಶ್ರೀ ಮುರುಘೇಂದ್ರ ಶ್ರೀಗಳು, ನವಲಗುಂದದ ಶ್ರೀ ವೀರೇಂದ್ರ ಶ್ರೀಗಳು, ವಹಿಸುವರು.
ಗಣಪತಿ ಮಹಾಪೂಜೆ, ಪುಣ್ಯಾಹವಾಚನ, ದೇವನಾಂದಿ, ನವಗ್ರಹ ಆವ್ಹಾಹನ, ಅಗ್ನಿ ಪ್ರತಿಷ್ಠಾ, ಶ್ರೀ ಲಕ್ಷ್ಮೀ ಮೂರ್ತಿಯ ಜಲಾಧಿವಾಸ ಮತ್ತು ಕ್ಷೀರಾಧಿವಾಸಗಳು ಹೀಗೆ ಧಾರ್ಮಿಕ ವಿಧಿ ವಿದಾನಗಳು ಜರಗುವವು. ಸಂಜೆ 4 ಗಂಟೆಗೆ ಅವ್ಹಾಹಿತ ದೇವತಾ ಪೂಜೆ, ಹೋಮ ಹವನಗಳು ಹಾಗೂ ಬಲಿಹರಣ ಮಹಾಮಂಗಳಾರತಿ ಜರಗುವದು, ದಿ.3 ರಂದು ಆವ್ಹಾನಿತ ದೇವತಾ ಪೂಜಾ, ಪ್ರಾಣಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಧೇನುದರ್ಶನ ಪ್ರತಿಷ್ಠಾಹೋಮ ಮಹಾಪೂರ್ಣಾಹುತಿ ಜರಗುವದು. ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮ ಮಂಗಳವಾಗುವದು. ಎಂದು ದೇವಸ್ಥಾನದ ಕಮಿಟಿಯ ಅರುಣ ಸೂರ್ಯವಂಶಿ ಪ್ರಕಟಣೆಯಲ್ಲಿ ತಿಳಿಸಿರುವರು.