ನೂತನ ಮುಖ್ಯಮಂತ್ರಿಗಳಾಗಿ ಸಿದ್ಧರಾಮಯ್ಯ ಘೋಷಣೆ ಹಾಲಿನ ಅಭಿಷೇಕದ ಮೂಲಕ ಸಂಭ್ರಮ

ಕಲಬುರಗಿ:ಮೇ.18: ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಸಿದ್ಧರಾಮಯ್ಯ ಅವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಓಬಿಸಿ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿನ ಪುತ್ಥಳಿ ಬಳಿ ಸಿದ್ಧರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದರು.
ಓಬಿಸಿ ಮೋರ್ಚಾ ಅಧ್ಯಕ್ಷ ಧರ್ಮರಾಜ್ ಬಿ. ಹೇರೂರ್ ಅವರ ನೇತೃತ್ವದಲ್ಲಿ ಜರುಗಿದ ವಿಜಯೋತ್ಸವದಲ್ಲಿ ವಿನೋದ್ ಪಾಟೀಲ್, ಪ್ರಕಾಶ್ ಕುರನಳ್ಳಿ, ಸಚಿನ್ ಕುಲಕರ್ಣಿ, ಧನರಾಜ್ ಮರತೂರ್, ಸಚಿನ್ ಮೋದಿ, ಸುಶೀಲ್ ಗಾಯಕವಾಡ್, ದವನ್ ಉದನೂರ್, ನಾಗರೆಡ್ಡಿ, ಗುರುರಾಜ್ ಕೊರಳ್ಳಿ, ಗುಂಡು ವಾರದ್, ಸಂಜು ಬದ್ದಲ್ ಮುಂತಾದವರು ಪಾಲ್ಗೊಂಡಿದ್ದರು.