ನೂತನ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಉದ್ಘಾಟನೆ

ಮುದ್ದೇಬಿಹಾಳ :ಸೆ.11: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವದ ಅಂಗವಾಗಿ ಶನಿವಾರ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಎದುರಿಗೆ ನೂತನ ಬ್ರಹ್ಮಶ್ರೀ ನಾರಾಯಣಗುರು ವೃತ್ತವನ್ನು ಉದ್ಘಾಟಿಸಲಾಯಿತು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ಮುಖಂಡ ಎಂ.ಬಿ.ನಾವದಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಕರ್ನಾಟಕ ಅರ್ಬನ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್,ಈಡಿಗ ಸಮಾಜದ ಅಧ್ಯಕ್ಷ,ಗಣ್ಯ ಉದ್ಯಮಿ ಎ.ಗಣೇಶ ಮೊದಲಾದವರು ವೃತ್ತವನ್ನು ಉದ್ಘಾಟಿಸಿದರು.ಇದೇ ವೇಳೆ ನಾರಾಯಣಗುರು ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ಟಿ.ವಿಜಯಭಾಸ್ಕರ್,ಗುರುಲಿಂಗಪ್ಪಗೌಡ ಪಾಟೀಲ್,ಎ.ಚಂದ್ರಶೇಖರ,ಹರೀಶ ನಾಟೀಕಾರ,ಸಿಕಂದರ್ ಜಾನ್ವೇಕರ,ಅರವಿಂದ ಕಾಶಿನಕುಂಟಿ,ಪರಶುರಾಮ ನಾಲತವಾಡ,ಶ್ರೀಶೈಲ ದೊಡಮನಿ,ರವಿ ತಡಸದ,ಸಿ.ಎಲ್.ಬಿರಾದಾರ,ರಮೇಶ ಪೂಜೇರಿ,ಪಾಂಡು ಈಳಗೇರ ಮೊದಲಾದವರು ಭಾಗಿಯಾಗಿದ್ದರು.

ರೂಢಗಿ ಗ್ರಾಮದಿಂದ ಆಗಮಿಸಿದ್ದ ಬಾಲಕರ ತಂಡದಿಂದ ಡಿಜೆ ಹಾಡಿಗೆ ಕೋಲಾಟದ ನೃತ್ಯವನ್ನು ಮಾಡಲಾಯಿತು.ಇದೇ ವೇಳೆ ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.


ಶೋಷಿತರ ಪರ ಧ್ವನಿ ಎತ್ತಿದ ನಾರಾಯಣಗುರು

ಮುದ್ದೇಬಿಹಾಳ : ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ಶನಿವಾರ ಬ್ರಹ್ಮಶ್ರಿ ನಾರಾಯಣಗುರು ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ರೂಢಗಿಯ ಯುವ ಮುಖಂಡ ಈಶ್ವರ ಈಳಗೇರ ಮಾತನಾಡಿ, ಸಮಾಜದಲ್ಲಿ ಬೇರೂರಿದ್ದ ಬೆತ್ತಲೆ ಸೇವೆ,ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿ ಮಹಿಳೆಯರಿಗೆ ನಿಜವಾದ ಗೌರವ ತಂದು ಕೊಟ್ಟ ಕೀರ್ತಿ ನಾರಾಯಣಗುರುಗಳಿಗೆ ಸಲ್ಲುತ್ತದೆ ಎಂದರು.ಈಡಿಗ ಸಮಾಜದ ಅಧ್ಯಕ್ಷ ಎ.ಗಣೇಶ,ತಹಸೀಲ್ದಾರ್ ಕಛೇರಿಯ ಸಿಬ್ಬಂದಿ,ಈಡಿಗ ಸಮಾಜದ ಬಾಂಧವರು ಇದ್ದರು.ಇದೇವೇಳೆ ನಾರಾಯಣಗುರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.