ನೂತನ ಬಿ.ಸಿ.ಎ, ಪತ್ರಿಕೋದ್ಯಮ ಪ್ರಾರಂಭ ಪ್ರಗತಿಯತ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು


ಸಂಜೆವಾಣಿ ವಾರ್ತೆ
ಸಂಡೂರು: ಜು: 18: ಬಹುದಿನಗಳ ಕನಸು ನನಸಾಗಿ ನೂತನ ಕೋರ್ಸಗಳನ್ನು ಪ್ರಾರಂಭಿಸುವ ಮೂಲಕ ಸರ್ಕಾರಿ ಪ್ರಥಮದರ್ಜೆ ಕಾಲೇಜು ಉತ್ತಮ ಸ್ಥಾನ ಪಡೆಯುವ ಮೂಲಕ ಪ್ರಗತಿಯ ಹೆಜ್ಜೆ ಹಾಕಿದೆ. ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಹಾಗೂ ಶಾಸಕ ಈ.ತುಕರಾಂ ಅವರ ಕನಸಿನ ಕೂಸಾದ ಸರ್ಕಾರಿ ಪದವಿ ಕಾಲೇಜಿಗೆ ನೂತನವಾಗಿ ಬಿ.ಸಿ.ಎ ಕೋರ್ಸ, ಪತ್ರಿಕೋದ್ಯಮ ಹಾಗೂ ನೂತನ ಎಂಟರ್‍ಪಿನ್‍ರ ಶಿಫ್ ತರಬೇತಿ ಕೋರ್ಸಗಳನ್ನು ತರುವ ಮೂಲಕ ತಾಲೂಕಿನ ವಿದ್ಯಾರ್ಥಿಗಳಿಗೆ ಕೌಶಲ್ಯ ಭರಿತರನ್ನಾಗಿಸುವ ಮಹತ್ತರ ಕಾರ್ಯ ಇದಾಗಿದೆ.
ಸಂಡೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿಗೆ 2023-24ನೇ ಸಾಲಿಗೆ ನೂತನ ಕೋರ್ಸಗಳ ಪ್ರಾರಂಭದಿಂದ ಕಾಲೇಜಿನಲ್ಲಿ ಬಿ.ಎ., ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ, ಪತ್ರಿಕೋದ್ಯಮ, ಬಿ.ಸಿ.ಎ., ಹಾಗೂ ನೂತನ ಎಂಟರ್‍ಪಿನ್‍ರ್ ಶಿಫ್ ಕೋರ್ಸ ಒಟ್ಟು 7 ಕೋರ್ಸಗಳು ಅಲ್ಲದೆ ಕಂಪ್ಯೂಟರ್ ಕೋರ್ಸ ಪ್ರಾರಂಭಿಸುವ ಮೂಲಕ ಮಕ್ಕಳು ಅಧುನಿಕ ಶಿಕ್ಷಣ ಕಲಿಯಲು ಪೂರ್ಣಪ್ರಮಾಣದಲ್ಲಿ ಸಹಕಾರಿಯಾಗಿದೆ.
ಈ ರೀತಿಯ ಕೋರ್ಸಗಳು ಪ್ರಾರಂಭವಾಗುವ ಮೂಲಕ ಸಂಡೂರು ತಾಲೂಕು ನಂಜುಂಡಪ್ಪ ವರದಿಯ ಅನ್ವಯ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿಯನ್ನು ತೆಗೆಯುವ ನಿರಂತರ ಪ್ರಯತ್ನವನ್ನು ಶಾಸಕ ಈ.ತುರಕಾಂ ಮಾಡುತ್ತಿದ್ದು ಅದರ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೇಕಾದ ಎಲ್ಲಾ ರೀತಿ ಕಟ್ಟಡದ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸುತ್ತಿರುವುದು ಕಂಡು ಬರುತ್ತಿದೆ. ಕೇವಲ 30 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕಾಲೇಜು ಇಂದು 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಗಿದೆ, ಅದರಲ್ಲಿ ಪ್ರಮುಖವಾಗಿ ಎಲ್ಲಾ ತರಗತಿಗಳಿಗೆ ಪ್ರೋಜೆಕ್ಟರ್ ವ್ಯವಸ್ಥೆ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ವ್ಯವಸ್ಥೆ, ಸೂಕ್ತವಾದ ಆಟದ ಮೈದಾನ, ಶುದ್ದಕುಡಿಯುವ ನೀರಿನ ಘಟಕ ಹೀಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಸರ್ಕಾರದ ಅನುದಾನವನ್ನು ತರುವಲ್ಲಿ ಸ್ಥಳೀಯ ಶಾಸಕರ ಶ್ರಮ ಎದ್ದುಕಾಣುತ್ತಿದೆ ಎನ್ನಬಹುದು.
ಸಂಡೂರು ತಾಲೂಕಿನಲ್ಲಿ ಬಹಳಷ್ಟು ಗ್ರಾಮೀಣ ವಿದ್ಯಾರ್ಥಿಗಳಿದ್ದು ಅವರಿಗೆ ಸೂಕ್ತ ಬಸ್ ವ್ಯವಸ್ಥೆಯನ್ನು ಮಾಡಬೇಕಾಗಿದೆ, ಬಸ್ ಕೊರತೆಯಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕಾಲೇಜಿಗೆ ಬರದೇ ಇರುವುದು ಸಹ ಕಲಿಕೆಯ ಹಿನ್ನಡೆಗೆ ಕಾರಣವಾಗುತ್ತಿದೆ. ಅದ್ದರಿಂದ ಸಂಬಂಧ ಪಟ್ಟವರು ಸೂಕ್ತ ಕ್ರಮವಹಿಸಿದ್ದೇ ಅದಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಅಗಮಿಸುವುದರಲ್ಲಿ ಅನುಮಾನವೇ ಇಲ್ಲ. ಎಂಬುದು ಸಾರ್ವಜನಿಕರ ಅಶಯವಾಗಿದೆ.
ಪ್ರಾಂಶುಪಾಲರಾದ ಡಾ. ಹುಚ್ಚುಸಾಬ್ ಪ್ರತಿಕ್ರಿಯಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಅಧುನಿಕ ಶಿಕ್ಷಣ ಕೊಡಲು ನಿರಂತರವಾಗಿ ಶಾಸಕರು, ಸಿ.ಡಿಸಿ. ಸಮಿತಿಯವರು ಶ್ರಮಿಸುತ್ತಿದ್ದಾರೆ ಅದರ ಫಲವಾಗಿ ಇಂದು ಬಿ.ಸಿಎ ಮತ್ತು ಪತ್ರಿಕೋದ್ಯ, ಎಂಟರ್‍ಪಿನ್ನರ್ ಶಿಫ್ ಕೋರ್ಸಗಳು ಮಕ್ಕಳಿಗೆ ಬಹು ಉಪಯುಕ್ತ ಎಂದರು.