ನೂತನ ಪ.ಪಂ ನಾಮ ನಿರ್ದೇಶಿತ ಸದಸ್ಯರ ಆಯ್ಕೆ ಮಾಡಿದ ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ

ಸಂಜೆವಾಣಿ ವಾರ್ತೆ

ಜಗಳೂರು.ಆ.೨೧ :- ಸಾಮಾಜಿಕ ನ್ಯಾಯದಡಿ ಪಟ್ಟಣ ಪಂಚಾಯಿತಿ ನೂತನ ನಾಮನಿರ್ದೇಶಿತ ಸದಸ್ಯರನ್ನಾಗಿ ತಾನಾಜಿ ಗೋಸಾಯಿ,ಬಿ.ಟಿ.ಶಾಂತಕುಮಾರ್,ಕುರಿ ಜಯ್ಯಣ್ಣ, ಅವರನ್ನು ಶಾಸಕ.ಬಿ.ದೇವೇಂದ್ರಪ್ಪ ಆಯ್ಕೆಮಾಡಿದ್ದಾರೆ.ಪಟ್ಟಣದ ಜನಸಂಪರ್ಕಕೇಂದ್ರದಲ್ಲಿ ದೇವರಾಜ್ ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ‌ ಸಲ್ಲಿಸಿ ನಂತರ ನಾಮನಿರ್ದೇಶಿತ ಸದಸ್ಯರನ್ನು‌ ಘೋಷಿಸಿ ಅವರು ಮಾತ ನಾಡಿದರು.ದೇವರಾಜ್ ಅರಸು  ಕನಸಿನಂತೆ ಪಟ್ಟಣದ ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರನ್ನಾಗಿ ಹಡಪದ ಸಮು ದಾಯ ,ಅಲೆಮಾರಿ ಸಮುದಾಯ,ಗೊಸಾಯಿ ಸಮುದಾದವರಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ.ರಾಜ್ಯ ದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ 12 ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ ಮಾದರಿಯಲ್ಲಿ ನಡೆಯುತ್ತಿದೆ.ತಾಲೂಕಿನಲ್ಲಿಯೂ ಇದನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸಿದರು. ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ಮಾಜಿ ಪ್ರಧಾನಿ ಇಂದಿರಾಗಾಂಧಿ  ಆಡಳಿತಾವಧಿಯಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಯಥಾವ ತ್ತಾಗಿ ಜಾರಿಗೆ ತಂದ ಬಡವರಿಗೆ ಭೂ ಒಡೆತನ ನೀಡಿದ ದೇಶದ ಏಕೈಕ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಮಾತ್ರ.ಜೀತ  ಪದ್ದತಿ ರದ್ದು,ಬಡವರಿಗೆ ಸೂರು,ನೀರು,ಆರೋಗ್ಯ,ಶಿಕ್ಷಣ ಸೇರಿ ದಂತೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿ ಗೌರವಯುತ ಬದುಕು ಸಾಗಿಸಲು ಶ್ರಮಿಸಿದ ಅರಸರು ಗತಿಸಿ ದಶಕಗಳು ಕಳೆ ದರೂ ಅವರ ಕ್ರಾಂತಿಕಾರಕ ಯೋಜನೆಗಳು ಇಂದಿಗೂ ಅಜ ರಾಮರ ಎಂದರು.ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ ಮಾತನಾಡಿ,ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರು ಹಿಂದುಳಿದ ವರ್ಗಗಳಿಗೆ ಕೊಡುಗೆ ಅಪಾರ ವಾಗಿದೆ.ಇಂದಿಗೂ ಅವರ ಕನಸಿನಂತೆ ತಾಲೂಕಿನಲ್ಲಿ ಬಿಸಿಎಂ ಇಲಾಖೆಯಡಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳು ಸಾಕ್ಷಿ ಯಾಗಿವೆ.ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದರು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್,ಪ.ಪಂ.ಸದಸ್ಯರಾದ ರಮೇಶ್ ರೆಡ್ಡಿ,ಲುಕ್ಮಾನ್ ಖಾನ್,ಮುಖಂಡರಾದ ಸಿ.ತಿಪ್ಪೇಸ್ವಾಮಿ, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ  ಬಿ.ಮಹೇಶ್ವರಪ್ಪ, ಮಾಳಮ್ಮ ನಹಳ್ಳಿ ವೆಂಕಟೇಶ್.ತಿಪ್ಪೇಸ್ವಾಮಿ,ಕೆಳಗೋಟೆ ಅಹಮ್ಮದ್ ಅಲಿ, ಮಂಜಣ್ಣ,ಹಟ್ಟಿ ತಿಪ್ಪೇಸ್ವಾಮಿ,ವಿಜಯ್ ಕೆಂಚೋಳ್, ರಂಗಸ್ವಾಮಿ ,ರಮೇಶ್, ಮಹಮ್ಮದ್ ಗೌಸ್. ಸುಧೀರ್ ರೆಡ್ಡಿ. ಪೇಂಟ್ ಖಲೀಲ್ ಸಾಬ್. ಸೇರಿದಂತೆ ಇದ್ದರು.