ನೂತನ ಪ್ಲಾಟ್ ಫಾರಂ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಬಾಬುರಾವ್ ಮನವಿ

ರಾಯಚೂರು,ಜು.೨೧- ನಗರದಲ್ಲಿ ಹೆಚ್ಚುವರಿಯಾಗಿ ನೂತನ ರೈಲ್ವೆ ಪ್ಲಾಟ್ ಫಾರ್ಮ್ ನಿರ್ಮಾಣ ಮಾಡಲು ಲೋಕಸಭಾ ಸಂಸದ ರಾಜಾ ಅಮರೇಶ್ವರ ನಾಯಕ ಅವರ ಮುಖಾಂತರ ಕೇಂದ್ರ ರೈಲ್ವೆ ಸಚಿವರಿಗೆ ಪ್ಲಾಟ್ ಫಾರಂ ನಿರ್ಮಾಣ ಮಾಡುವಂತೆ ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಮನವಿ ಸಲ್ಲಿಸಿದರು.
ನಗರದ ರೈಲ್ವೆ ನಿಲ್ದಾಣವು ಸೌತ್ ಸೆಂಟ್ರಲ್ ರೈಲ್ವೆಯಲ್ಲಿಯೇ ಅತ್ಯಂತ ಹಳೆಯ ರೈಲ್ವೆ ನಿಲ್ದಾಣವಾಗಿದೆ. ಕೇವಲ ಇಲ್ಲಿ ೯ ಪ್ಲಾಟ್‌ಫಾರ್ಮ್‌ಗಳು ಮಾತ್ರ ಇದ್ದು ಸಾರ್ವಜನಿಕರಿಗೆ ರೈಲ್ವೆ ಪ್ರಯಾಣಕರಿಗೆ ತೊಂದರೆಯಾಗುತ್ತಿದೆ. ಇತ್ತೀಚಿನ ಜನಸಂಖ್ಯೆ, ಪ್ರಯಾಣಿಕರ ಹೆಚ್ಚಳ ಹಾಗೂ ರೈಲುಗಳ ಓಡಾಟ ಸಂಖ್ಯೆ ಹೆಚ್ಚಾಗಿರುವುದರಿಂದ ಹೆಚ್ಚುವರಿಯಾಗಿ ಒಂದು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣ ಮಾಡುವುದು ಅವಶ್ಯವಿದ್ದು, ಸಂಬಂಧಪಟ್ಟವರಿಗೆ ಸೂಚನೆ ನೀಡಿ ಶೀಘ್ರದಲ್ಲಿ ಒಂದು ಹೊಸ ಪ್ಲಾಟ್ ಫಾರಂ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ರೈಲ್ವೆ ಎಂದರು.
ಈಗಾಗಲೇ ಸಿಕಂದರಾಬಾದ್‌ನಲ್ಲಿ ಸಂಸದರಗಳ ರೈಲ್ವೆ ಜನರಲ್ ವ್ಯವಸ್ಥಾಪಕರು ಸೌತ್ ಸೆಂಟ್ರಲ್ ರೈಲ್ವೆ ಇವರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಿ ಪತ್ರ ನೀಡಿದಂತೆ ರಾಯಚೂರು ರೈಲ್ವೆ ನಿಲ್ದಾಣದಿಂದ ಕಾಚಿಗುಡ ೦೭೯೯೮ ಡಮು ಸಮಯ ಬದಲಾವಣೆ ಹಾಗೂ ಅದನ್ನು ಫಾಸ್ಟ್ ಪ್ಯಾಸೆಂಜರ್ ಆಗಿ ಪರಿವರ್ತನೆ ಮಾಡಲು ಮತ್ತು ರಾಯಚೂರು ಕಾಕಿನಾಡ ಮತ್ತು ಕೊಲ್ಯಾಪುರ ಎಕ್ಸ್‌ಪ್ರೆಸ್ ರೈಲುಗಳು ಶೀಘ್ರ ಪ್ರಾರಂಭವಾದರೆ ಸಾರ್ವಜನಿಕರಿಗೆ, ವ್ಯಾಪಾರಸ್ಥರು ಹಾಗೂ ಪ್ರವಾಸಿಗರಿಗೆ ಅನುಕೂಲಕಾರವಾಗುತ್ತದೆ. ಇದರಿಂದ ರೈಲ್ವೆ ಇಲಾಖೆಗೆ ಆದಾಯ ಹೆಚ್ಚಾಗುತ್ತದೆ ಎಂದರು.
ಬಾಬುರಾವ್ ಅವರು ಹೊಸ ಪ್ಲಾಟ್ ಫಾರಂ ನಿರ್ಮಾಣಕ್ಕೆ ಮತ್ತು ರೈಲುಗಳ ಪ್ರಾರಂಭಕ್ಕೆ ಜನರಲ್ ಮ್ಯಾನೇಜರ್ ಸೌತ್ ಸೆಂಟ್ರಲ್ ರೈಲ್ವೆ,
ಸಿಕಂದರಾಬಾದ್ ಇವರಿಗೆ ಕರೆ ಮಾಡಿ ರೈಲ್ವೆ ನಿಲ್ದಾಣದ ಸದ್ಯದ ಪರಿಸ್ಥಿತಿಯನ್ನು ಗಮನಕ್ಕೆ ತಂದು ಮನವಿ ಮಾಡಿಕೊಂಡರು.