ನೂತನ ಪ್ರಭಾರ ಜಿಲ್ಲಾಧ್ಯಕ್ಷ ಗಣಪತಿಯವರಿಗೆ ಸನ್ಮಾನ

ಬೀದರ್; ಎ.20:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಘಟಕದ ನೂತನ ಪ್ರಭಾರ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ ಗಣಪತಿಯವರನ್ನು ಬುಧವಾರ ಸಂಜೆ ಬೀದರ್ ನಗರದ ಹೋಟಲ ಆಶಿರ್ವಾದ ಸಭಾಂಗಣದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಹಿಂದಿನ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜಿ ಅವರನ್ನು ಈ ತಿಂಗಳ 11ರಂದು ಕಾರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕ ತನ್ನ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ಪದಚ್ಯುತಿಗೊಳಿಸಿದ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ಸಂಘದ ಬೈಲಾದಂತೆ ಬೀದರ್ ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಡಿ.ಕೆ ಗಣಪತಿ ಅವರನ್ನು ಪ್ರಭಾರ ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಘಟಕ ಆದೇಶ ಹೊರಡಿಸಿದೆ.
ಸನ್ಮಾನ ಸಮಾರಂಭದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಅಪ್ಪಾರಾವ ಸೌದಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಕಾರ್ಯದರ್ಶಿ ಪೃಥ್ವಿರಾಜ ಎಸ್, ಸುನಿಲಕುಮಾರ ಕುಲಕರ್ಣಿ, ಖಜಾಂಚಿ ಎಂ. ಪಿ. ಮುದಾಳೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶಿವಕುಮಾರ ವಣಗೇರಿ, ಮೌಲಾನಾ ಸಾಬ್(ಹಾಜಿಪಾಶಾ), ಗೋಪಿಚಂದ ತಾಂದಳೆ, ಶರದ ಘಂಟೆ, ಅನಿಲ ಕುಮಾರ ಕುಲಕರ್ಣಿ, ಸಂತೋಷ ಚೆಟ್ಟಿ, ದೇವಿದಾಸ ಚಿಲ್ಲರ್ಗಿ, ಸದಸ್ಯರಾದ ಸುನಿಲ ಬಾವಿಕಟ್ಟಿ, ವಿಜಯ ಕುಮಾರ ಅಷ್ಟುರೆ, ಪ್ರದೀಪ ಬಿರಾದಾರ, ಕಾರ್ತಿಕ ಮಠಪತಿ, ಎನ್.ಎಸ್ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.