ನೂತನ ಪ್ಯಾರಡೈಸ್ ಕ್ರಿಕೆಟ್ ಅಕಾಡೆಮಿಗೆ ಚಾಲನೆ

ಕೆ.ಆರ್.ಪುರ, ಏ.೯- ಯುವಪಿಳಿಗೆಯಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ಸಾಧನೆಯತ್ತ ದಿಟ್ಟ ಹೆಜ್ಜೆ ಇಡಲು ಪೋಷಕರು ಹಾಗೂ ಶಿಕ್ಷಕರು ಕಾರ್ಯ ನಿರ್ವಹಿಸುವಂತೆ ಶಾಸಕ ಬೈರತಿ ಸುರೇಶ್ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಕಣ್ಣೂರಿನಲ್ಲಿ ನೂತನ ಪ್ಯಾರಡೈಸ್ ಕ್ರಿಕೆಟ್ ಅಕಾಡೆಮಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವಪೀಳಿಗೆಯ ಅಭಿವೃದ್ಧಿಗೆ ಭದ್ರ ಬುನಾದಿ ಅತಿಮುಖ್ಯವಾಗಿದೆ ಎಂದು ನುಡಿದರು.
ಕ್ರೀಡೆಗಳಲ್ಲಿ ಅಥವಾ ಇನ್ನಿತರೆ ಕ್ಷೇತ್ರಗಳನ್ನು ಆಯ್ಕೆಮಾಡಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಲು ತರಬೇತಿ ಪ್ರಮುಖ ಪಾತ್ರವಹಿಸುತ್ತದೆ,ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯ ಮಾಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ಅವರು ಕ್ರೀಡೆಗಳಲ್ಲಿ ಸಾಧನೆ ಮಾಡುವ ಮೂಲಕ ಸಾವಿರಾರು ಮಂದಿ ದೇಶಕ್ಕೆ ಕೀರ್ತಿ ತಂದಿದ್ದು ಕ್ರೀಡೆಗಳು ನಮ್ಮ ಅವಿಭಾಜ್ಯ ಅಂಗವಾಗಿ ಮಾರ್ಪಾಡಾಗಬೇಕೆಂದು ತಿಳಿಸಿದರು.
ಕಣ್ಣೂರಿನ ಪ್ಯಾರಡೈಸ್ ಕ್ರಿಕೆಟ್ ಅಕಾಡೆಮಿಯಲ್ಲಿ ಉತ್ತಮ ತರಬೇತುದಾರರಿದ್ದು ಇದರ ಸದುಪಯೋಗವನ್ನು ಯುವಕರು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ
ಅಕಾಡೆಮಿಯ ಕಿರಣ್ ಕುಮಾರ್, ಮುಖಂಡರಾದ ಮುನಿನಾರಾಯಣಪ್ಪ,ಸೊಣ್ಣಪ್ಪ,ಅರುಣ್ ಕುಮಾರ್, ಕಿಶೋರ್, ಶಿವರಾಮ್,ಮೋಹನ್ ಕುಮಾರ್ ಇದ್ದರು.