ನೂತನ ಪುರಸಭೆ ಅಧ್ಯಕ್ಷೆ,ಉಪಾಧ್ಯಕ್ಷರ ಅಧಿಕಾರ ಸ್ವೀಕಾರ

ಬಸವನಬಾಗೇವಾಡಿ:ನ.7:ಇಲ್ಲಿಯ ಪುರಸಭೆಯ ನೂತನ ಅಧ್ಯಕ್ಷೆ ಅನ್ನಪೂರ್ಣಾ ಸಂಜೀವ ಕಲ್ಯಾಣಿ ಹಾಗೂ ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಶರಣಪ್ಪ ಬೆಲ್ಲದ ಅವರು ಇಂದು ಅಧಿಕಾರ ವಹಿಸಿಕೊಂಡರು.
ಇಂದು ಮದ್ಯಾನ್ನ 12 ಕ್ಕೆ ಮೂಲನಂದಿಶ್ವನ ಭಾವಚಿತ್ರಕ್ಕೆ ಅವರ ಕೊಠಡಿಯಲ್ಲಿ ಪೂಜೆ ಸಲ್ಲಿಸಿದರು.
ನಂತರ ಇಬ್ಬರ ಅಧಿಕಾರ ವಹಿಸಿಕೊಂಡರು.
ನಂತರ ಅಧ್ಯಕ್ಷೆ ಅನ್ನಪೂರ್ಣಾ ಸಂಜೀವ ಕಲ್ಯಾಣಿ ಅವರು ಮಾತನಾಡಿ,12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಸಾಮಾಜಿಕ ನ್ಯಾಯದಂತೆ ನಮ್ಮ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು ಸೇರಿದಂತೆ ಬೆಂಬಲಿತ ಸದಸ್ಯರು ನಮಗೆ ಸಹಕಾರ ನೀಡಿದ್ದಾರೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಹಿಂದೆ ಶಾಸಕರು ನನ ಪತಿ ಸಂಜೀವ ಕಲ್ಯಾಣಿ ಅವರಿಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ.ಈಗ ನನಗೂ ಕೂಡಾ ಅವಕಾಶವನ್ನು ಕೊಟ್ಟಿರುವುದು ಸಂತಸ ವಿಷಯ ಎಂದರು.
ಬಸವನಬಾಗೇವಾಡಿಯಲ್ಲಿ ಈಗಾಗಲ್ಲೆ ಬಸವಭವನ,ಮೆಗಾಮಾರುಕಟ್ಟೆ ಹಾಗೂ ಪುರಸಭೆ ನೂತನ ಕಟ್ಟಡಗಳು ಆರಂಭಗೊಂಡಿವೆ.ಅವುಗಳನ್ನು ಪೂರ್ಣ ಪ್ರಮಾಣಗೊಳಿಸುವ ಕಾರ್ಯವನ್ನು ನಮ್ಮ ಅಧಿಕಾರ ಅವಧಿಯಲ್ಲಿ ಶಾಸಕರ ಮಾರ್ಗದರ್ಶನದಂತೆ ಮಾಡುತ್ತೇವೆ ಎಂದರು.
ಹೊಸ ಬಡಾವಣೆಗಳಲ್ಲಿ ಈಗಾಗಲ್ಲೆ ಗಾರ್ಡಗಳನ್ನು ಮಾಡಲಾಗಿದೆ,ಇನ್ನೂ ಕೆಲ ಬಡಾವಣೆಗಳಲ್ಲಿ ಗಾರ್ಡನ ಮಾಡಬೇಕಾದ ಅಗತ್ಯ ಬಿದ್ದರೆ ಅದಕ್ಕೂ ಹೆಚ್ಚಿನ ಒತ್ತು ನೀಡಿ ಆ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ ಎಂದರು.
ಈ ಸಂದರ್ಬದಲ್ಲಿ ಮುಖಂಡರಾದ ಬಸಣ್ಣ ದೇಸಾಯಿ,ಬಸವರಾಜ ಹಾರಿವಾಳ,ಶೇಖರ ಗೊಳಸಂಗಿ,ಸಂಗಮೇಶ ಓಲೇಕಾರ,ಸುಬ್ಬು ಬಾಗೇವಾಡಿ,ಪರಶುರಾಮ ಬೆಕಿನಾಳ,ಸಂಗನಬಸು ಪೂಜಾರಿ,ಬಸಗೊಂಡ ಹಾದಿಮನಿ,ಸದಸ್ಯರಾದ ಜಗದೇವಿ ಗುಂಡಳ್ಳಿ,ರಾಜು ಭೂತನಾಳ,ರವಿ ಪಟ್ಟಣಶೆಟ್ಟಿ,ಅಶೋಕ ಗುಳೇದ ಸೇರಿದಂತೆ ಹಲವಾರು ಸದಸ್ಯರು ಹಾಗೂ ಮುಖಂಡರುಗಳು ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಇಬ್ಬರಿಗೂ ಶೂಭಾಶಯ ಕೋರಿದರು.