ನೂತನ ಪುರಸಭೆ ಅಧ್ಯಕ್ಷರ ಮುಂದಿರುವ ಸವಾಲುಗಳು

ವರದಿ; ಪಂಡಿತ ಯಂಪೂರೆ

ಸಿಂದಗಿ;ನ.12:sಸತತ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದ ಪುರಸಭೆ ಆಡಳಿತವನ್ನು ವಿಭಿನ್ನವಾಗಿ ನಡೆಸಬೇಕು ಮತ್ತು ಪಾರದರ್ಶಕ ಹಾಗೂ ಸಾರ್ವಜನಿಕರಿಗೆ ಸುಲಭ ರೀತಿಯಲ್ಲಿ ಆಡಳಿತ ನೀಡಬೇಕು ಪಕ್ಷಾತೀತವಾಗಿ ಅಧಿಕಾರ ಪಡೆದುಕೊಂಡಿದ್ದ ನೂತನ ಅಧ್ಯಕ್ಷರಿಗೆ ಮುಂದಿರುವ ಸವಾಲುಗಳು ನೂರಾರು.

ಹೌದು. ಸುಮಾರು 45 ಸಾವಿರಕ್ಕೂ ಅಧಿಕ ಜನಸಂಖ್ಯೆವುಳ್ಳ ಪಟ್ಟಣದ ಜನತೆಗೆ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವ ಮನಸ್ಸುಳ್ಳ ಅಧ್ಯಕ್ಷರು ಅಧಿಕಾರಕ್ಕೆ ಬರದೇ ಅಭಿವೃದ್ದಿ ಮಾತ್ರ ಬರೀ ದಾಖಲೆಗಳಲ್ಲಿ ಮುಗಿದು ಹೋಗಿವೆ ಎನ್ನುವ ಪುರಾವೆಗಳ ಮೂಲಕ ಕೆಲ ಪುರಸಭೆ ಸದಸ್ಯರು ಸಾಬೀತು ಪಡಿಸಿ ಮುಖ್ಯಾಧಿಕಾರಿಯಿಂದ ದೂರು ಕೂಡಾ ದಾಖಲಾಗಿತ್ತು ಆದರೆ ಅದ್ಯಾವುದು ಜಾರಿಗೆ ಆಗದೇ ನೆನೆಗುದಿಗೆ ಬಿದ್ದು ನನಗೆ ಯಾರು ಸಾಟಿ ಎನ್ನುವಂತೆ ಕೆಲ ಸಿಬ್ಬಂದಿ ಬೇರಡೆ ವರ್ಗವಾಗಿ ಅಧಿಕಾರ ನಡೆಸುತ್ತಿದ್ದಾರೆ ಇದರ ಬಗ್ಗೆ ತನಿಖೆ ಮಾತ್ರ ನೆನಪಾಗಿಯೇ ಉಳಿಯಿತು. ಅದನ್ನು ಬಯಲಿಗೆಳೆಯುವವರೆ.? ಸುಮಾರು ವರ್ಷಗಳಿಂದ ಪಟ್ಟಣದಲ್ಲಿ ನಡೆದ ಕೆಲ ಕಾಮಗಾರಿಗಳು ಕಳಪೆಯಾಗಿ ಮುಗಿದಿವೆ ಇನ್ನೂ ಕೆಲ ಕಾಮಗಾರಿಗಳು ದಾಖಲೆಗಳಲ್ಲಿ ಮಾತ್ರ ಆಗಿವೆ. ಇನ್ನೂ ಕೆಲ ಕಾಮಗಾರಿಗಳು ಬೇರೆಡೆ ಸ್ಥಳಾಂತರಿಸಿ ಕೈ ತೊಳೆದುಕೊಂಡಿದ್ದಾರೆ. ಅವುಗಳ ಬಗ್ಗೆ ತನಿಖೆ ನಡೆಸುತ್ತಾರೆಯೇ ಎನ್ನುವ ಕೆಲ ಪ್ರಶ್ನೆಗಳನ್ನು ಸಾರ್ವಜನಿಕರ ಹಿತ ಕಾಪಾಡಲು ಸಂಜೆವಾಣಿ ಪತ್ರಿಕೆ ಮುನ್ನುಡಿ ಪ್ರಾರಂಬಿಸಿದೆ.

ಸವಾಲುಗಳು; ಪುರಸಭೆ ವ್ಯಾಪ್ತಿಯಲ್ಲಿ ಮಿತಿ ಮೀರಿ ಹೋಗಿರುವ ಬಿಡಾಡಿ ದನಗಳು,ಬೀದಿ ನಾಯಿ,ಹಂದಿಗಳನ್ನು ತೆರವುಗೊಳಿಸುವ ಮೂಲಕ ಹಂದಿ ಮುಕ್ತ ಸಿಂದಗಿ ಪಟ್ಟಣವನ್ನಾಗಿ ಮಾಡಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿದ್ದು ರಸ್ತೆಯ ಮಧ್ಯದ ಪುಟ್ ಪಾಥ ಕಸದ ಗುಂಡಿಗಳಾಗಿ ಮಾರ್ಪಟ್ಟಿದ್ದು ಕಸ ವಿಲೇವಾರಿಗೆ ಕ್ರಮ ಕೈಕೊಳ್ಳುವುದು.

   ಪಟ್ಟಣದ ಜನರಿಗೆ ಕೆರೆಯ ನೀರಿನ ನಳಗಳಿಗೆ ಮೂರು ದಿನಕ್ಕೊಮ್ಮೆ ಬಿಡಲಾಗುತ್ತಿತ್ತು ಆದರೆ ಕಳೆದೆರಡು ವರ್ಷಗಳಿಂದ ವಾರಕ್ಕೊಮ್ಮೆ ನೀರು ಬಿಡುತ್ತಿದ್ದು ನಗರ ವಾಸಿಗಳಿಗೆ ಅತೀವ ತೊಂದರೆ ಅನುಭವಿಸುತ್ತಿರುವ ಜನರಿಗೆ ಮೂರು ದಿನಕ್ಕೊಮ್ಮೆ ಕೆರೆಯ ನೀರು ಬಿಡುವುದು.

  ಪಟ್ಟಣದಲ್ಲಿ ಎಲ್ಲ ರಸ್ತೆಯ ಬದಿಯಲ್ಲಿ ಅತೀಕ್ರಮಣವಾದ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವದು ಹಾಗೂ ಪಟ್ಟಣದ (ಹಳೇಯ ಎಸ್.ಬಿ.ಐ ) ತೋಂಟದಾರ್ಯ ರಸ್ತೆಯನ್ನು ಏಕಮುಖ (ಒನ್ ವೇ) ಸಂಚಾರ ವ್ಯವಸ್ಥೆ ಜಾರಿಗೆ ಗೊಳಿಸುವದು.

 ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಮನೆ ಮಾಲೀಕರಿಂದ ರಸ್ತೆ ಅತಿಕ್ರಮಣವಾಗಿ ಇಕ್ಕಟ್ಟಾದ ರಸ್ತೆಯಿಂದ ಸುಗಮ ಸಂಚಾರಕ್ಕೆ ತೊಂದರೆಯನ್ನು ತಪ್ಪಿಸುವುದು.

 ಪಟ್ಟಣದಲ್ಲಿರುವ ಎಲ್ಲ ಬಡಾವಣೆಗಳಲ್ಲಿ ಸಾರ್ವಜನಿಕ ಉದ್ಯಾನ ಜಾಗಗಳು ಅತೀಕ್ರಮಣವಾಗಿ ಮನೆಗಳು ಅಥವಾ ಶಾಲೆಗಳು ನಿರ್ಮಾಣವಾಗಿದ್ದು ಅವುಗಳನ್ನು ತೆರವುಗೊಳಿಸಿ ಉದ್ಯಾನವನ ನಿರ್ಮಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡುವುದು.

ಭೂತ ಭಂಗಲೆಯಾದ ಪಟ್ಟಣ;; ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಾವಿರಾರು ಕಂಬಗಳಿವೆ ಅದಕ್ಕೆ ಲೈಟ್ ಉರಿಯದೇ ಕೆಲವು ತಿಂಗಳುಗಳೆ ಕಳೆದಿವೆಎ ಅವುಗಳಿಗೆ ಲೈಟುಗಳನ್ನು ಅಳವಡಿಸಿ ವಿದ್ಯುತ್ ದೀಪಗಳಿಂದ ಫಳಫಳನೆ ಹೊಳೆಯುವಂತೆ ಮಾಡುವುದು.

ಪಟ್ಟಣದಲ್ಲಿ ಕೆಲ ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಯಾರಿಸಿದ್ದಾರೆ ಆದರೆ ಅವುಗಳನ್ನು ಆರಂಭಿಸದೇ ತುಕ್ಕು ಹಿಡಿದಿವೆ ಅವುಗಳನ್ನು ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ನೀಡುವುದು.

ಪುರಸಭೆಯಲ್ಲಿ ಯಾರೋದೋ ಆಸ್ತಿ ಯಾರಿಗೋ ಪರಭಾರೆಯಗುತ್ತಿವೆ ಎನ್ನುವದು ಎಲ್ಲರಲ್ಲಿ ಮನೆ ಮಾತಾಗಿದ್ದು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಇದ್ದ ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿ ಸಾರ್ವಜನಿಕರ ಆಸ್ತಿಗಳ ರಕ್ಷಣೆಗೆ ಮುಂದಾಗುವುದು ಹೀಗೆ ಪಟ್ಟಣದ ಪ್ರಜ್ಞಾವಂತರ ಬೇಡಿಕೆಗಳಾಗಿದ್ದು ಇದಕ್ಕೆ ಣೂತನವಾಗಿ ಪದಗ್ರಹಣ ಮಾಡಿಕೊಳ್ಳುತ್ತಿರುವ ಅದ್ಯಕ್ಷ-ಉಪಾದ್ಯಕ್ಷರ ಕಾರ್ಯವೈಕರಿ ಕಾದು ನೋಡಬೇಕಾಗಿದೆ.

‘ಮಾದರಿ ಪಟ್ಟಣವಾಗಿ ಅಭಿವೃದ್ಧಿ’

   ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಾಸಕ ಎಂ.ಸಿ ಮನಗೂಳಿ ಅವರು ನೂರಾರು ಕೋಟಿ ಅನುದಾನ ತಂದು ಅಭಿವೃದ್ಧಿಗೆ ಮುಂದದಾಗಿದ್ದಾರೆ. ಅವರ ಸಹಕಾರದೊಂದಿಗೆ ಸಿಂದಗಿಯನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ಆದ್ಯತೆ ನೀಡಲಾಗುವುದು. ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಲು ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಪೂರೈಕೆಗೆ ರೂ. 27.10 ಕೋಟಿ ಮೊತ್ತದ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಈ ಬಾರಿಯ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಯೋಜನೆ ಜಾರಿಗೆ ತರಲಾಗುವುದು. ಬಹುದಿನಗಳ ಬೇಡಿಕೆಯಾದ ರೂ. 92 ಕೋಟಿ ಅನುದಾನದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಚಿಕ್ಕ ಸಿಂದಗಿ ಬೈಪಾಸ್ ನಿಂದ ಬಸವೇಶ್ವರ ವೃತ್ತದ ವರೆಗೆ, ಬಸವೇಶ್ವರ ವೃತ್ತದಿಂದ ವಿವೇಕಾನಂದ ವೃತ್ತದವರೆಗೆ ಹಾಗೂ ಬಸವೇಶ್ವರ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ರಸ್ತೆ ವಿಸ್ತರಣೆ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣ ಕಾಮಗಾರಿ ರೂ. 15 ಕೋಟಿ ಮೊತ್ತದಲ್ಲಿ ಭರದಿಂದ ನಡೆದಿದೆ ಎಂದರು.

    ಪಟ್ಟಣದ ಸ್ಮಶಾನವನ್ನು ರೂ. 60 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಿಂದಗಿ ಕೆರೆ ಆವರಣದಲ್ಲಿ ರೂ. 2 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ಉದ್ಯಾನ ನಿರ್ಮಾಣ ಮುಗಿಯುವ ಹಂತದಲ್ಲಿದೆ. ಕನಸದಾಸ ವೃತ್ತದಿಂದ ಮೊರಟಗಿ ನಾಕಾದ ವರೆಗೆ ರಸ್ತೆ ವಿಸ್ತರಣೆ ಮತ್ತು ಚರಂಡಿ ಕಾಮಗಾರಿ ರೂ. 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭದ ಹಂತದಲ್ಲಿದೆ ರೂ 9 ಕೋಟಿ ವೆಚ್ಚದಲ್ಲಿ 9 ವಾರ್ಡಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಮುಗಿದಿದೆ. ಅಲ್ಲದೆ ಉಳಿದ ವಾರ್ಡುಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡುವಂತೆ ಸರ್ಕಾರಕ್ಕೆ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಭರವಸೆಯ ಮಾತು.

   ಪಟ್ಟಣದ ವಿದ್ಯಾನಗರದ ಕೊಳಚೆಗೇರಿಯ ನಿವಾಸಿಗಳಿಗಾಗಿ ರೂ. 18 ಕೋಟಿ ವೆಚ್ಚದಲ್ಲಿ 250 ಮನೆಗಳು ಮಂಜೂರಾಗಿದ್ದು, ಟೆಂಡರ್ ಕರೆಯಲಾಗಿದೆ. ವಾಜಪೇಯಿಶ್ರೀ ವಸತಿ ಯೋಜನೆಯಡಿ 411 ನಿವೇಶನಗಳು ಮಂಜೂರಾಗಿ ಹಂಚಿಕೆಯಾಗಿದ್ದು, ಶೀಘ್ರದಲ್ಲೇ ಹಕ್ಕುಪತ್ರ ನೀಡುವುದು ಸೇರಿದಂತೆ ಇನ್ನೂ ಹತ್ತು, ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು,  ಸಿಂದಗಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಸ್ವತಂತ್ರ ಸದಸ್ಯರು ಪಕ್ಷಬೇಧ ಮರೆತು ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿದ್ದಾರೆ