ನೂತನ ಪಿಎಸ್‍ಐ ರಾಮನಗೌಡÀ ಅಧಿಕಾರ ಸ್ವಿಕಾರ

ತಾಳಿಕೋಟೆ:ಜೂ.22: ತಾಳಿಕೋಟೆ ಪಟ್ಟಣದ ಪೊಲೀಸ್ ಠಾಣೆಯ ನೂತನ ಪಿಎಸ್‍ಐಯಾಗಿ ರಾಮನಗೌಡ ಎಸ್ ಸಂಕನಾಳ ಅವರು ಮಂಗಳವಾರರಂದು ಅಧಿಕಾರ ಸ್ವಿಕರಿಸಿಕೊಂಡರು.
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸುರೇಶ ಮಂಟೂರ ಅವರಿಗೆ ವಿಜಯಪುರಕ್ಕೆ ವರ್ಗಾವಣೆಯಾಗಿದ್ದರಿಂದ ಆ ಸ್ಥಾನಕ್ಕೆ ರಾಮನಗೌಡ ಸಂಕನಾಳ ಅವರನ್ನು ವರ್ಗಾಯಿಸಿದ್ದರಿಂದ ರಾಮನಗೌಡ ಅವರು ಅಧಿಕಾರ ವಹಿಸಿಕೊಂಡರು.
ರಾಮನಗೌಡ ಸಂಕನಾಳ ಅವರು ಈ ಹಿಂದೆ ಬಾಗಲಕೋಟ ಒಳಗೊಂಡು ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.