
ರಾಯಚೂರು,ಮಾ.೩- ರಾಯಚೂರು ತಾಲೂಕು ಗಾಣಿಗ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭವನ್ನು ಮಾರ್ಚ್ ೫ ರಂದು ವಿದ್ಯಾ ನಗರದ ಶಿವ ಪಾರ್ವತಿ ಗಣೇಶ ಭವನದಲ್ಲಿ ಬೆಳಿಗ್ಗೆ ೧೦ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಸಪ್ಪ ಹಳ್ಳಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಿಲ್ಲೇ ಬೃಹನ್ಮಠದ ಶಂತಾಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮಂಗಳವಾರ ಪೇಟೆಯ ವೀರ ಸಂಗಮೇಶ್ವರ ಸ್ವಾಮಿಗಳು ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮವನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮಾಡಲಿದ್ದಾರೆ. ಗಾಣದೇವತೆಗೆ ಪುಷ್ಪಾರ್ಚನೆಯನ್ನು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾಡಲಿದ್ದು,ಅಧ್ಯಕ್ಷತೆಯನ್ನು ಅ.ಭಾ.ಗಾ.ಸಂಘದ ಮಾಜಿ ರಾಜ್ಯ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಎ.ಮೇಟಿ ಅವರು ವಹಿಸಲಿದ್ದಾರೆ.ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕ ಎನ್.ಎಸ್. ಬೋಸರಾಜು,ಆರ್.ಡಿ.ಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ,ನಗರಸಭೆ ಅಧ್ಯಕ್ಷ ಲಲಿತಾ ಕಡ ಗೋಲ ಅಂಜನೇಯ,ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಚನ್ನಪ್ಪ ಸಜ್ಜನ್,ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್,ಮಾಜಿ ನಗರ ಸಭೆ ಅಧ್ಯಕ್ಷ ಈ ವಿನಯಕುಮಾರ,ಮಾಜಿ ಆರ್.ಡಿ.ಎ ಅಧ್ಯಕ್ಷ ವೈ.ಗೋಪಾಲರೆಡ್ಡಿ,ಜೆಡಿಎಸ್ ಮುಖಂಡ ನರಸಿಂಹ ನಾಯಕ ಅವರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಸ್.ಜಿ.ವೀರೇಶ ಕಮಲಾಪೂರ , ಲಕ್ಷ್ಮೀಬಾಯಿ ರಕ್ಕಸಗಿ,ಶಕುಂತಲಾ ಅಣ್ಣಾರಾವ್ ಪಾಟೀಲ್ ಇದ್ದರು.