ನೂತನ ಪದಾಧಿಕಾರಿಗಳ ಆಯ್ಕೆ


ಧಾರವಾಡ.ಎ.19: ಧಾರವಾಡ ಕೆ.ಇ ಬೋರ್ಡ ಶಾಲೆಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಧಾರವಾಡ ಜಿಲ್ಲಾ ವಿಜ್ಞಾನ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವಿಜ್ಞಾನ ಬರಹಗಾರ ಡಾ.ಲಿಂಗರಾಜ ರಾಮಾಪೂರ, ಉಪಾಧ್ಯಕ್ಷರಾಗಿ ಗಾಯಿತ್ರಿ ಹುದ್ದಾರ ಮತ್ತು ಜಗದೀಶ ಶೆಟ್ಟರ, ಕಾರ್ಯದರ್ಶಿಯಾಗಿ ಶಿವಾನಂದ ನಾಗೂರ, ಸಹಕಾರ್ಯದರ್ಶಿಯಾಗಿ ಸಿದ್ಧಪ್ಪ ಭಾವಿಕಟ್ಟಿ, ಖಜಾಂಚಿಯಾಗಿ ಶಿವಾನಂದ ಹಡಪದ, ಕಾರ್ಯಕಾರಿ ಸದಸ್ಯರಾಗಿ ಎಸ್.ಜಿ.ಭೂಶೆಟ್ಟಿ, ಶ್ರೀಧರಪಾಟೀಲ ಕುಲಕರ್ಣಿ, ಸುಜಾತಾ ಚೌಹಾಣ, ವನಮಾಲಾ ಹೆಗಡೆ, ಆಮಂತ್ರಿತ ಸದಸ್ಯರಾಗಿ ನಿಂಗೋಜಿರಾವ್ ಗಾಯಕವಾಡ, ಪಿ.ಎಸ್.ಅಂಕಲಿ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆಯನ್ನು ಪ್ರೊ.ಮೋಹನ ಸಿದ್ಧಾಂತಿ ವಹಿಸಿದ್ದರು. ವೀಕ್ಷರರಾಗಿ ಕರಾವಿಪ ರಾಜ್ಯ ಸಮಿತಿಯಿಂದ ಮೀನಾಕ್ಷಿ ಕುಡಸೋಮಣ್ಣವರ, ಪ್ರೊ.ಎ.ವಿ.ಹಳ್ಳಿಕೇರಿ ಆಗಮಿಸಿದ್ದರು. ಸಭೆಯಲ್ಲಿ ವಿಜ್ಞಾನ ಚಳುವಳಿ ಮುಖಂಡರಾದ ಶಂಕರ ಹಲಗತ್ತಿ, ಪ್ರೊ.ಸಿ.ಡಿ.ಪಾಟೀಲ, ಪ್ರೊ.ಬಿ.ಕೊಟ್ರೇಶಿ, ಡಾ.ಶಿವಾಜಿ ಚೌಹಾನ, ಪ್ರೊ.ನಾಗೇಶಪ್ಪ, ಅಜೀವ ಸದಸ್ಯರಾದ ಡಿ.ಎಮ್.ಹಿರೇಮಠ, ಡಾ.ಭಾಗ್ಯಜ್ಯೋತಿ ಕೋಟಿಮಠ, ಟಿ.ಎಸ್.ಚೌಗಲೆ ಮುಂತಾದವರು ಉಪಸ್ಥಿತರಿದ್ದರು.