ನೂತನ ಪದಾಧಿಕಾರಿಗಳ ಆಯ್ಕೆ

ಬಾದಾಮಿ,ಮಾ23: ಬಣಜಿಗ ಸಮಾಜದ ಸಂಘಟನೆಯ ದೃಷ್ಟಿಯಿಂದ ತಾಲೂಕಾ ಬಣಜಿಗ ಸಮಾಜದ ನೂತನ ಪದಾಧಿಕಾರಿಗಳನ್ನು ಸಮಾಜದ ಮುಖಂಡರ, ಹಿರಿಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಗಿದೆ ಎಂದು ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಡಾ.ಅವಿನಾಶ ಮಮದಾಪೂರ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಮಾಜದ ಸಂಘಟನೆಯ ದೃಷ್ಟಿಯಿಂದ ನೂತನ ಪದಾಧಿಕಾರಿಗಳನ್ನು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮುಖಂಡ ಮಹಾಂತೇಶ ಮಮದಾಪೂರ, ಹಿರಿಯರಾದ ಎ.ಸಿ.ಪಟ್ಟಣದ ಸೇರಿದಂತೆ ಸಮಾಜದ ಮುಖಂಡರ ಸಮ್ಮುಖದಲ್ಲಿ ಈಚೆಗೆ ನಡೆದ ಸಭೆಯನ್ನು ಆಯ್ಕೆ ಮಾಡಲಾಗಿದೆ. ನಮ್ಮ ಸಮಾಜದಲ್ಲಿಯೂ ಸಹ ಶೇ20 ರಷ್ಟು ಮಾತ್ರ ಶ್ರೀಮಂತರಿದ್ದಾರೆ. ಉಳಿದ ಶೇ80 ರಷ್ಟು ಜನರು ಬಡವರಿದ್ದಾರೆ. ಸಮಾಜ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೇರಿದಂತೆ ಎಲ್ಲ ರಂಗಗಳಲ್ಲಿ ಮುಂದುವರೆಯಬೇಕು. ಎಲ್ಲ ಹಿರಿಯರ ಆಶಯದಂತೆ ಸಮಾಜದವನ್ನು ಸಂಘಟಿಸಲಾಗುವುದು ಎಂದು ತಿಳಿಸಿದರು. ಗೌರವಾಧ್ಯಕ್ಷರಾಗಿ ಸಿದ್ದಣ್ಣ ಟೆಂಗಿನಕಾಯಿ, ಉಪಾದ್ಯಕ್ಷರಾಗಿ ಚನ್ನಪ್ಪ ಪಟ್ಟಣದ, ಶಿವಮೂರ್ತಿ(ಮುತ್ತು) ಚಿನಿವಾಲರ, ಖಜಾಂಚಿಯಾಗಿ ಶಶಿಧರ ಪಟ್ಟಣಶೆಟ್ಟಿ, ಕಾರ್ಯದರ್ಶಿ ಯಾಗಿ ರಾಚಣ್ಣ ಪಟ್ಟಣದ, ಜಂಟಿ ಕಾರ್ಯದರ್ಶಿಯಾಗಿ ಬಸವರಾಜ ಹುಂಡೇಕಾರ, ಮಾಂತೇಶ ಕಲಬಾಶೆಟ್ಟಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗೆ ಗಿರೀಶ ಶೆಟ್ಟರ ಇವರನ್ನು ಈಚೆಗೆ ನಡೆದ ಸಭೆಯಲ್ಲಿ ಆಯ್ಕೆಮಾಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಪ್ರಕಾಶ ಪಟ್ಟಣದ, ಚನ್ನಪ್ಪ ಪಟ್ಟಣದ, ಮಾಗುಂಡಪ್ಪ ಮಣ್ಣೂರ, ರಾಚಣ್ಣ ಪಟ್ಟಣದ, ಬಸವರಾಜ ಟೆಂಗಿನಕಾಯಿ, ಸಿದ್ದಣ್ಣ ಟೆಂಗಿನಕಾಯಿ, ಶಿವಮೂರ್ತಿ (ಮುತ್ತು) ಚಿನಿವಾಲರ ಹಾಜರಿದ್ದರು.