
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.02: ನಗರಕ್ಕೆ ಇಂದು ಆಗಮಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿ ಪ್ರಸನ್ನ ವರಳೆ ಅವರಿಗೆ ಜಿಲ್ಲಾ ವಕೀಲರ ಸಂಘದಿಂದ ನಗರದಲ್ಲಿ ನಿರ್ಮಾಣ ಆಗಿರುವ
ಜಿಲ್ಲಾ ನ್ಯಾಯಾಲಯದ ಸಂಕೀರ್ಣ ಹಾಗೂ ವಕೀಲರ ಸಂಘದ ಕಟ್ಟಡ ಬಳಕೆಗೆ ಅಗತ್ಯ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಲಾಯ್ತು.
ಈ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಬಳ್ಳಾರಿ ಜಿಲ್ಲಾ ಆಡಳಿತತ್ಮಾಕ ನ್ಯಾಯ ಮೂರ್ತಿ ಅಶೋಕ್ ಕಿಣಗಿ ಇದ್ದರು.
ಜಿಲ್ಲಾ ವಕೀಲರ ಸಂಘದ ಅದ್ಯಕ್ಷ ಕೆ,ಎರಿಗೌಡ ಮತ್ತು ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ್ ನಾಯ್ಕ್ ಕಾರ್ಯದರ್ಶಿ ಬಣಾಪುರ ರವೀಂದ್ರ ನಾಥ್, ಸಹ ಕಾರ್ಯದರ್ಶಿ ತ್ರಿವೇಣಿ ಪತ್ತಾರ್, ಖಜಾಂಚಿ ಈರೇಶಿ ಮೊದಲಾದವರು ಇದ್ದರು.